Connect with us

ಕೊನೆಗೂ ಭ್ರಷ್ಟ ಜಯಚಂದ್ರ ವಿರುದ್ಧ ಲೋಕಾ ತನಿಖೆಗೆ ಸರ್ಕಾರದ ಅನುಮತಿ

ಕೊನೆಗೂ ಭ್ರಷ್ಟ ಜಯಚಂದ್ರ ವಿರುದ್ಧ ಲೋಕಾ ತನಿಖೆಗೆ ಸರ್ಕಾರದ ಅನುಮತಿ

ಬೆಂಗಳೂರು: ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ್ರು ಅನ್ನೋದು ಇದಕ್ಕೆ ಇರಬೇಕು. ಲೋಕಾಯುಕ್ತ ರೇಡ್, ಸಿಬಿಐ ದಾಳಿ, ಇಡಿ ತನಿಖೆ, ಐಟಿಯವರ ಹುಡುಕಾಟ ಇವೆಲ್ಲಾ ಮುಗಿದ ಮೇಲೆ ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಜ್ಞಾನೋದಯವಾಗಿದೆ.

ತಾನು ಗಳಿಸ ಬೇಕಿದ್ದ ಆದಾಯಕ್ಕಿಂತ ಶೇ.102 ಜಾಸ್ತಿ ಇದೆ ಅಂತ ಲೋಕಾಯುಕ್ತ ಪೊಲೀಸರು ತಿಳಿಸಿದ್ರು ರಾಜ್ಯ ಸರ್ಕಾರ ಅನುಮತಿ ಕೊಟ್ಟಿರಲಿಲ್ಲ. ಆದ್ರೆ ಎಲ್ಲಾ ಅವಮಾನ, ಮುಜುಗರಗಳನ್ನು ಅನುಭವಿಸಿದ ಮೇಲೆ ಕೊನೆಗೂ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಜಯಚಂದ್ರ ವಿರುದ್ಧ ತನಿಖೆ ನಡೆಸಲು ಸರ್ಕಾರ ಸಮ್ಮತಿ ಸೂಚಿಸಿದೆ.

ಜಯಚಂದ್ರ 2009ರಲ್ಲಿ ಹೇಮಾವತಿ ನಾಲೆ ಯೋಜನೆಯ ಮುಖ್ಯ ಎಂಜಿನಿಯರ್ ಆಗಿದ್ದರು. ಆ ವೇಳೆ ಅಂದಿನ ಲೋಕಾಯುಕ್ತ ಎಡಿಜಿಪಿ ರೂಪ್‍ಕುಮಾರ್ ದತ್ತ ಅವರ ನೇತೃತ್ವದ ತಂಡ ದಾಳಿ ನಡೆಸಿ ಇವರ ಆದಾಯದ ಮೂಲಗಳನ್ನು ಕಲೆಹಾಕಿತ್ತು. ಆದಾಯಕ್ಕಿಂತ ಜಾಸ್ತಿ ಆಸ್ತಿ ಸಂಪಾದನೆ ಮಾಡಿದ್ದಾರೆ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ 2012 ರಲ್ಲಿ ಪತ್ರಬರೆದ್ರು ಸರ್ಕಾರ ಅನುಮತಿ ನೀಡದೆ ಸುಮ್ಮನೇ ಕೂತಿತ್ತು.

ಈ ವಿಚಾರದಲ್ಲಿ ಬಿಜೆಪಿ ಮುಖ್ಯಮಂತ್ರಿಗಳು ನಿದ್ದೆ ಮಾಡಿದ್ರೇ ಹೊರತು ಅನುಮತಿ ನೀಡಿರಲಿಲ್ಲ. ಅದರಲ್ಲೂ ಭಾಸ್ಕರ್‍ರಾವ್ ಲೋಕಾಯುಕ್ತರಾಗಿ ಬಂದ ಮೇಲೆ ಈ ವಿಚಾರದಲ್ಲಿ ಪತ್ರ ವ್ಯವಹಾರವೇ ನಿಂತು ಹೋಗಿತ್ತಂತೆ. ಕೊನೆಗೆ ಎಲ್ಲಾ ಮುಜುಗರ ಅನುಭವಿಸಿದ ಸಿದ್ದು ಸರ್ಕಾರ ಈಗ ಅನುಮತಿ ನೀಡಿದೆ.

Advertisement
Advertisement