ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಖಾನ್ ಕೊನೆಗೂ ದುಬೈನಲ್ಲಿ ಪತ್ತೆಯಾಗಿದ್ದಾನೆ. ಮನ್ಸೂರ್ ಖಾನ್ ಹಾಗೂ ಆತನ ಕುಟುಂಬವನ್ನು ರಾ ಸಂಸ್ಥೆಯ ಅಧಿಕಾರಿಗಳು ದುಬೈನಿಂದ 122 ಕಿ.ಮೀ. ದೂರವಿರುವ ಬೀಚ್ ಸಿಟಿಯ ರಾಸ್-ಅಲ್- ಕೈಯಮ್ ಬಳಿ ಪತ್ತೆ ಮಾಡಿದ್ದಾರೆ.
Advertisement
ದುಬೈಯಿಂದ ಬೇರೆ ಕಡೆ ಹೋಗದಂತೆ ಅಧಿಕಾರಿಗಳು ಕಣ್ಣಿಟ್ಟಿದ್ದರು. ಅಲ್ಲದೆ ಮನ್ಸೂರ್ ಬಗ್ಗೆ ದುಬೈ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. 15 ದಿನದಲ್ಲಿ ಮನ್ಸೂರ್ ನನ್ನು ಕರ್ನಾಟಕಕ್ಕೆ ಕರೆ ತರಲು ಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
Advertisement
Advertisement
ಪತ್ತೆಯಾಗಿದ್ದು ಹೇಗೆ?
ಮನ್ಸೂರ್ ಸಿಗಲು ಮೌಲ್ವಿಯೊಬ್ಬರು ಸುಳಿವು ಕೊಟ್ಟಿದ್ದರು. ಆ ಮೌಲ್ವಿಯ ಎಡವಟ್ಟಿನಿಂದ ಮನ್ಸೂರ್ ಬಲೆಗೆ ಬಿದ್ದಿದ್ದಾನೆ. ಇಂಟರ್ ನೆಟ್ ಕಾಲ್‍ನಲ್ಲಿ ಮನ್ಸೂರ್ ಬೆಂಗಳೂರಿನ ಮೌಲ್ವಿ ಶೋಯಬ್ ನನ್ನು ನಿರಂತರವಾಗಿ ಸಂಪರ್ಕಿಸುತ್ತಿದ್ದನು. ಮನ್ಸೂರ್ ಗಂಟೆಗೊಮ್ಮೆ ಫೇಸ್‍ಬುಕ್‍ನಲ್ಲಿ ಆನ್‍ಲೈನ್‍ಗೆ ಬಂದು ಹೋಗುತ್ತಿದ್ದನು. ಹಾಗಾಗಿ ಪೊಲೀಸರು ಆತನ ಇಂಟರ್ ನೆಟ್ ಕಾಲ್ ಮೇಲೆ ಕಣ್ಣಿಟ್ಟಿದ್ದರು. ಮನ್ಸೂರ್ ಮೆಸೆಂಜರ್ ಮೂಲಕ ಮೌಲ್ವಿ ಶೋಯಬ್‍ಗೆ ಕರೆ ಮಾಡುತ್ತಿದ್ದನು.
Advertisement
ಯಾರು ಮೌಲ್ವಿ ಶೋಯಬ್?
ಶೋಯಬ್ ಹೆಣ್ಣೂರು ರಸ್ತೆಯಲ್ಲಿ ಮದರಸ ನಡೆಸುತ್ತಿದ್ದು, ಮನ್ಸೂರ್ ಈ ಮೌಲ್ವಿ ಜೊತೆ ನಿಕಟ ಸಂಪರ್ಕ ಹೊಂದಿದ್ದನು. ಬೆಂಗಳೂರಿನಲ್ಲಿದ್ದಾಗ ಮದರಸ ಕಟ್ಟಲು ಮನ್ಸೂರ್, ಮೌಲ್ವಿಗೆ 20 ಕೋಟಿ ಹಣ ನೀಡಿದ್ದನು. ಮನ್ಸೂರ್ ಸಹಾಯದೊಂದಿಗೆ ಮೌಲ್ವಿ ಮದರಸ ನಿರ್ಮಾಣ ಮಾಡಿಕೊಂಡಿದ್ದನು. ಆ ಮದರಸದಲ್ಲಿಯೇ ಮನ್ಸೂರ್ ಖಾನ್ ಜನರಿಗೆ ಮರಳು ಮಾಡುತ್ತಿದ್ದನು.