ಬೆಂಗಳೂರು: ಕೇರಳದ ನಿಲಂಬೂರಿನಿಂದ ಕರ್ನಾಟಕದ ನಂಜನಗೂಡಿಗೆ (Nilambur-Nanjangud) ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆಗೆ ವೈಜ್ಞಾನಿಕ ಸಮೀಕ್ಷೆ ಶುರುವಾಗಿದೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸೇವ್ ಬಂಡೀಪುರ (Save Bandipur) ಕ್ಯಾಂಪೇನ್ ಶುರುವಾಗಿದೆ.
ಕೇರಳಿಗರು ನಾಡ ಸರ್ಕಾರದ ಮೇಲೆ ಒತ್ತಡ ಹಾಕಿ ನಾಡ ಸಂಪತ್ತಾದ #ಬಂಡಿಪುರ ವನ್ನ ಹಾಳುಮಾಡವ ಈ ಕೆಟ್ಟಕೆಲಸವನ್ನ ಕನ್ನಡಿಗರು ಒಟ್ಟಾಗಿ ತಡೆಯಬೇಕಿದೆ! @DKShivakumar @CMofKarnataka ಕರ್ನಾಟಕದ ಸಂಪತ್ತನ್ನು ಹಾಳುಮಾಡಬೇಡಿ.#SaveBandipura #SaveBandipur pic.twitter.com/PHnYnaDPtB
— Shivanand Gundanavar (@shivanand087) February 1, 2024
Advertisement
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ಈ ಯೋಜನೆಗೆ ಪರಿಸರ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಬಜೆಟ್ – 1 ರೂ. ಬಂದಿದ್ದು ಹೇಗೆ? ಹೋಗಿದ್ದು ಹೇಗೆ?
Advertisement
ಕರ್ನಾಟಕದ ಯಾವುದೇ ಪಕ್ಷಕ್ಕೆ ನಾಡಿನ ಹಿತ ಬೇಕಾಗಿಲ್ಲ. ಗಡಿ-ನೆಲ-ಜಲ ಇಂತಹ ಯಾವುದೇ ಸಮಸ್ಯೆ ಎದುರಾದರೂ ನಮಗೆ ಸೋಲು ಕಟ್ಟಿಟ್ಟ ಬುತ್ತಿ. ತಮ್ಮ ರಾಜಕೀಯ ಲೆಕ್ಕಾಚಾರಗಳ ಮೇಲೆಯೇ ಅವರ ನಿಲುವುಗಳು ಅವಲಂಬಿತವಾಗಿರುತ್ತದೆ. ತಮ್ಮ ಸ್ವಾರ್ಥಕ್ಕೆ ನಾಡನ್ನು ಮಾರಲೂ ಹೇಸದ ಮನೆಮುರುಕರು ಇಂದು ನಾಡಿನ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ #SaveBandipur
— Ramachandra.M| ರಾಮಚಂದ್ರ.ಎಮ್ (@nanuramu) January 31, 2024
Advertisement
ಹಳೆ ಮೈಸೂರು ಭಾಗಕ್ಕೆ ಬಂಡೀಪುರ ಮತ್ತು ನಾಗರಹೊಳೆ ಕಾಡುಗಳು 2 ಕಣ್ಣುಗಳಿದ್ದಂತೆ. ಅಭಿವೃದ್ಧಿ ಹೆಸರಲ್ಲಿ ನಮ್ಮ ಕಾಡನ್ನು ನಾಶಪಡಿಸುವ ಎಲ್ಲಾ ಚಟುವಟಿಕೆಗಳು ನಿಲ್ಲಬೇಕು. ಕರ್ನಾಟಕ ಸರ್ಕಾರ ರೈಲು ಸಮೀಕ್ಷೆಗೆ ಅವಕಾಶ ನೀಡಬಾರದು. ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧವನ್ನು ಮುಂದುವರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
Advertisement