ಬೆಂಗಳೂರು/ರಾಮನಗರ: ರಾಜ್ಯದಲ್ಲಿ ಉಪಚುನಾವಣೆಗೆ ಇನ್ನೊಂದೇ ದಿನ ಬಾಕಿ. ನಾಳೆ 3 ಲೋಕಸಭಾ ಮತ್ತು 2 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹಾಗಾಗಿ ಇಂದು ಅಭ್ಯರ್ಥಿಗಳ ಕೊನೆ ಆಟ ನಡೆಯಲಿದೆ.
ಗುರುವಾರ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಈಗ ಮನೆ ಮನೆ ಪ್ರಚಾರ ಬಿರುಸುಗೊಂಡಿದೆ. ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ. ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಜೆಡಿಎಸ್ ಕಾರ್ಯಕರ್ತರು ತಂಡ ತಂಡಗಳಾಗಿ ಹೋಗಿ ಪಾಂಪ್ಲೆಟ್ ಹಂಚಿ, ಮಧು ಬಂಗಾರಪ್ಪಗೆ ಓಟ್ ಕೇಳಿದ್ರು. ಇನ್ನು ಬಳ್ಳಾರಿಯಲ್ಲಿ ಶಿಕ್ಷಕರನ್ನು ಎಲೆಕ್ಷನ್ ಡ್ಯೂಟಿಗೆ ನಿಯೋಜಿಸಿದ್ದಕ್ಕೆ ಇಂದು ಮತ್ತು ನಾಳೆ ಶಾಲೆಗೆ ರಜೆ ಘೋಷಿಸಲಾಗಿದೆ.
Advertisement
ರಾಮನಗರದಲ್ಲಿ ಬಿಜೆಪಿಗೆ ಅಭ್ಯರ್ಥಿ ಕೈಕೊಟ್ಟು ಕಣದಿಂದ ಹಿಂದೆ ಸರಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದ ಬಿಜೆಪಿ ಪಾಳಯದಲ್ಲಿ ಹೊಸ ತಂತ್ರ ಹೂಡಲಾಗಿದೆ. ಹೊಸ ಕರಪತ್ರಗಳನ್ನ ಸಿದ್ಧಪಡಿಸಿದ ಬಿಜೆಪಿ ಪಾಳಯ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಸಿದ್ಧತೆ ನಡೆಸಿದೆ. ಚುನಾವಣಾ ಕರಪತ್ರದಲ್ಲಿ ಅಭ್ಯರ್ಥಿ ಫೋಟೋ, ಹೆಸರು ನಾಪತ್ತೆಯಾಗಿದ್ದು, ಅಭ್ಯರ್ಥಿ ಫೋಟೋವಿದ್ದ ಜಾಗದಲ್ಲಿ ಪಕ್ಷದ ಚಿಹ್ನೆ ಕಮಲದ ಗುರುತು ಇದೆ. ಅಭ್ಯರ್ಥಿ ಹೆಸರಿದ್ದ ಜಾಗದಲ್ಲಿ `ದೇಶ ಮೊದಲು’ ಎಂಬ ಬರಹವನ್ನು ಬರೆಯಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv