ಯುವ ನಿರ್ದೇಶಕಿ ಮನೆಯಲ್ಲಿ ಶವವಾಗಿ ಪತ್ತೆ

Public TV
1 Min Read
director dead

ತಿರುವನಂತಪುರಂ: ಮಲೆಯಾಳಂನ ಯುವ ನಿರ್ದೇಶಕಿ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಸೋಮವಾರ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

ನಯನಾ ಸೂರ್ಯನ್(28) ಶವವಾಗಿ ಪತ್ತೆಯಾದ ನಿರ್ದೇಶಕಿ. ನಯನಾ ಮೂಲತಃ ಕೇರಳದ ಅಲಾಪಡ್‍ನವರಾಗಿದ್ದು, ತನ್ನ ಪೋಷಕರು ಹಾಗೂ ಒಡಹುಟ್ಟಿದವರ ಜೊತೆ ವಾಸಿಸುತ್ತಿದ್ದರು. ಬಳಿಕ ತಿರುವನಂತಪುರಂನ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸಿಸುತ್ತಿದ್ದರು.

ಸೋಮವಾರ ನಯನಾ ತಾಯಿ ಆಕೆಗೆ ಫೋನ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ನಯನಾ ಫೋನ್ ಸ್ವೀಕರಿಸಲಿಲ್ಲ. ಹಾಗಾಗಿ ಅವರ ತಾಯಿ ಆಕೆಯ ಸ್ನೇಹಿತರಿಗೆ ಕರೆ ಮಾಡಿ ತನ್ನ ಮಗಳನ್ನು ಬಗ್ಗೆ ವಿಚಾರಿಸಿದ್ದಾರೆ. ಆಗ ನಯನಾ ಸ್ನೇಹಿತರು ಆಕೆಯ ಮನೆ ಬಳಿ ಹೋಗಿದ್ದಾಗ ಆಕೆ ತನ್ನ ಬೆಡ್‍ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

director dead 2

ನಯನಾ ಕೆಲವು ದಿನಗಳ ಹಿಂದೆ ಡಯಾಬಿಟಿಸ್‍ಗೆ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಮರಣೋತ್ತರ ಪರೀಕ್ಷೆ ಬಳಿಕ ಅವರ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ನಯನಾ ‘ಕ್ರಾಸ್‍ವಲ್ಡ್’ ಚಿತ್ರದ ಮೂಲಕ ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಮೊದಲು ಅವರು ದಿ. ಲೇನಿನ್ ರಾಜೇಂದ್ರನ್, ಕಮಾಲ್, ಜೀತು ಜೋಸೆಫ್ ಹಾಗೂ ಡಾ. ಬಿಜು ಅವರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *