ಚಂದ್ರನನ್ನು ಮುಟ್ಟಿದ ಭಾರತ- ಇಸ್ರೋ ಸಾಧನೆಗೆ ಭೇಷ್‌ ಎಂದ ಸ್ಟಾರ್ಸ್

Public TV
2 Min Read
chandrayaan 3 1 2

ಚಂದ್ರನನ್ನ ಭಾರತ ಮುಟ್ಟಿದೆ. ಚಂದ್ರಲೋಕದಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ. ಇದೀಗ ಇಸ್ರೋ ಸಾಧನೆಗೆ ರಾಧಿಕಾ ಪಂಡಿತ್(Radhika Pandit), ರಶ್ಮಿಕಾ ಮಂದಣ್ಣ, ಸಮಂತಾ ಶುಭ ಕೋರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಚಂದ್ರಯಾನ-3 ಲ್ಯಾಂಡಿಂಗ್‌ಗೆ ಶುಭಕೋರಿದ ಸ್ಯಾಂಡಲ್‌ವುಡ್ ಸ್ಟಾರ್ಸ್

ಇಸ್ರೋ ಸಾಧನೆಗೆ ನಟ ಯಶ್ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಯತ್ನಿಸುವವರಿಗೆ ಯಾವುದೂ ಅಸಾಧ್ಯವಿಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದಕ್ಕಾಗಿ ಇಸ್ರೋಗೆ ಅಭಿನಂದನೆಗಳು. ನೀವು ಇತಿಹಾಸ ನಿರ್ಮಿಸಿದ್ದೀರಿ. ಎಲ್ಲ ಭಾರತೀಯರಿಗೂ ಹೆಮ್ಮೆ ತಂದಿದ್ದೀರಿ. ಮುಂದಿನ ಪೀಳಿಗೆಗೆ ಸ್ಫೂರ್ತಿ ಆಗಿದ್ದೀರಿ ಎಂದು ರಾಕಿಂಗ್ ಸ್ಟಾರ್ ಟ್ವೀಟ್ ಮಾಡಿದ್ದಾರೆ.

ಚಂದ್ರಯಾನ 3 ಸೂಪರ್ ಗ್ರ್ಯಾಂಡ್ ಸಕ್ಸಸ್ ಪಡೆದುಕೊಂಡಿದೆ. ಅಮೆರಿಕಾ, ಚೀನಾ, ರಷ್ಯಾ ಕೂಡ ಚಂದ್ರನನ್ನು ಭಾರತ ಮುಟ್ಟಿದೆ. ಈ ಬಗ್ಗೆ ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಚಂದ್ರಯಾನ 3 ಸಕ್ಸಸ್‌ಗೆ ಹೆಮ್ಮೆಯ ಕ್ಷಣ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಡಾಲಿ ಹುಟ್ಟುಹಬ್ಬಕ್ಕೆ ‘ಜೀಬ್ರಾ’ ತಂಡದಿಂದ ಫಸ್ಟ್ ಲುಕ್

rashmika mandanna 1 7

ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ. ಚಂದ್ರಯಾನ 3 ಇದೀಗ ಚಂದ್ರನನ್ನು ತಲುಪಿದೆ. ಚಂದ್ರಯಾನ 3 ಅಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಸೆಲ್ಯೂಟ್ ಎಂದು ರಶ್ಮಿಕಾ ಮಂದಣ್ಣ(Rashmika Mandanna) ಹಾಡಿ ಹೊಗಳಿದ್ದಾರೆ.

samantha 4

ಕೊನೆಗೂ ನಾವು ಚಂದ್ರನನ್ನು ಮುಟ್ಟಿದ್ದೇವು. ಧನ್ಯವಾದಗಳು ಇಸ್ರೋ (Isro) ಎಂದು ಸಮಂತಾ ಬರೆದುಕೊಂಡಿದ್ದಾರೆ. ಈ ಮೂಲಕ ಚಂದ್ರಯಾನ 3 ಸಕ್ಸಸ್ ಬಗ್ಗೆ ಸಂಭ್ರಮಿಸಿದ್ದಾರೆ.

ಇಸ್ರೋಗೆ ಬಿಲಿಯನ್‌ನಷ್ಟು ಧನ್ಯವಾದಗಳು. ನಾವು ಹೆಮ್ಮೆಪಡುವಂತೆ ಕೆಲಸ ಮಾಡಿದ್ದೀರಿ. ಚಂದ್ರಯಾನ 3 ಸಾಧನೆಯನ್ನ ನೋಡ್ತಿರೋದಕ್ಕೆ ನಾವು ಅದೃಷ್ಟವಂತರು. ಇಂಡಿಯಾ ಇದೀಗ ಚಂದ್ರನ ಮೇಲಿದೆ ಎಂದು ಅಕ್ಷಯ್ ಕುಮಾರ್ (Akshay Kumar) ಶುಭಕೋರಿದ್ದಾರೆ.

Share This Article