ಸ್ಯಾಂಡಲ್‌ವುಡ್ ಹಲವು ನಟ, ನಟಿಯರು ದರ್ಶನ್ (Darshan) ಪ್ರಕರಣದ ಬಗ್ಗೆ ಮಾತನಾಡಿದ್ದರು. ಈಗ ವಿಜಯಲಕ್ಷ್ಮಿ ಆಪ್ತೆ ಆಗಿರುವ ನಿರ್ಮಾಪಕಿ ಲತಾ ಜೈಪ್ರಕಾಶ್ (Latha Jaiprakash) ಅವರು ದರ್ಶನ್ ಕುರಿತು ಮಾತನಾಡಿದ್ದಾರೆ. ಅತ್ತಿಗೆಯಿಂದಲೇ ದರ್ಶನ್ ಅಣ್ಣನಿಗೆ ಬಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ದರ್ಶನ್‌ಗೆ ಇಲ್ಲ ಬಿರಿಯಾನಿ ಭಾಗ್ಯ – ಜೈಲೂಟ ಫಿಕ್ಸ್
ದರ್ಶನ್ ಅಣ್ಣ ಮತ್ತು ವಿಜಯಲಕ್ಷ್ಮಿ (Vijayalakshmi) ಇಬ್ಬರೂ ದೈವ ಭಕ್ತರು. ಇದು ಯಾಕೆ ಆಯಿತು ಎಂಬುದು ದೇವರಿಗೆ ಮಾತ್ರ ಗೊತ್ತು. ದರ್ಶನ್ ಅಣ್ಣಗೆ ನವೆಂಬರ್‌ವರೆಗೂ ಟೈಮ್ ಚೆನ್ನಾಗಿಲ್ಲ ಎಂದು ನಮಗೆ ಮೊದಲೇ ಗೊತ್ತಿತ್ತು. ಯಾರು ಏನೇ ಹೇಳಿದ್ರು ಅಣ್ಣ ದೇವರನ್ನು ತುಂಬಾ ನಂಬುತ್ತಿದ್ದರು ಎಂದು ನಿರ್ಮಾಪಕಿ ಲತಾ ಜೈಪ್ರಕಾಶ್ ಮಾತನಾಡಿದ್ದಾರೆ.
ಪ್ರತಿ ಆಷಾಢದಲ್ಲೂ ವಿಜಯಲಕ್ಷ್ಮಿ ಅತ್ತಿಗೆ ದೇವಸ್ಥಾನಕ್ಕೆ ಬರುತ್ತಿದ್ದರು. ಈ ಬಾರಿ ಕೇಸ್ ಆಗಿದ್ರಿಂದ ಅವರು ಬಂದಿಲ್ಲ. ಈ ಕೇಸ್ ನಂತರ ಅತ್ತಿಗೆ ಓಡಾಟ ಮತ್ತು ಹೋರಾಟ ಎರಡು ಮಾಡುತ್ತಿದ್ದಾರೆ. ಆರೋಪಿ ಸ್ಥಾನದಲ್ಲಿ ದರ್ಶನ್ ಅಣ್ಣ ಇದ್ದಾರೆ. ಆದಷ್ಟು ಬೇಗ ಆಚೆ ಬರಲಿ ಅಂತ ಕೇಳಿಕೊಳ್ತೀನಿ. ರೇಣುಕಾಸ್ವಾಮಿ ಕುಟುಂಬಕ್ಕೂ ಕೂಡ ಯಾರೇ ಆದ್ರೂ ಕರುಣೆ ತೋರಬೇಕು. ಒಬ್ಬ ದೊಡ್ಡ ಸ್ಟಾರ್ ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಒಂದು ಸಣ್ಣ ವಿಚಾರದಿಂದ ಜೀವನೇ ಹೋಗುತ್ತದೆ ಅಂದರೆ ಇದರಿಂದ ಎಲ್ಲರೂ ಪಾಠ ಕಲಿಯಬೇಕು ಎಂದು ನಿರ್ಮಾಪಕಿ ಲತಾ ಜೈಪ್ರಕಾಶ್ ಹೇಳಿದ್ದಾರೆ.
ಏನೇ ಮಾಡಬೇಕು ಅಂದರು ದೈವ ಬಲ ಇರಬೇಕು. ದರ್ಶನ್ ಅಣ್ಣ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೂ ಒಂದು ಕಂಟಕದಲ್ಲಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ಜೀವನದಲ್ಲಿ ಯಾವಾಗಲೂ ಶಾಂತವಾಗಿ ಯೋಚಿಸಿ ನಡೆಯಬೇಕು ಎಂದು ಪಾಠವಿದೆ ಎಂದಿದ್ದಾರೆ. 2014ರಿಂದಲೂ ವಿಜಯಲಕ್ಷ್ಮಿ ಅತ್ತಿಗೆ ಪರಿಚಯವಿದೆ. ದರ್ಶನ್ ಅಣ್ಣ ‘ಅಂಬರೀಶ್’ ಸಿನಿಮಾ ಸಮಯದಲ್ಲಿ ಪರಿಚಯ ಆದ್ರೂ ಅಲ್ಲಿಂದ ನನ್ನ ತಮ್ಮನಿಗೆ ಕ್ಲೋಸ್ ಆಗಿದ್ದರು. ಈ ಸಂದರ್ಭದಲ್ಲಿ, ಅತ್ತಿಗೆನೇ ದರ್ಶನ್ ಅಣ್ಣನಿಗೆ ಬಲ ಆಗಿದ್ದಾರೆ. ಅಣ್ಣನ ಬ್ಯಾಡ್ ಟೈಮ್‌ನಿಂದ ಅತ್ತಿಗೆನೂ ಕೊರಗುತ್ತಿದ್ದಾರೆ.
ಜನ ಇದ್ದಾಗ ದರ್ಶನ್ ಅಣ್ಣ ದೇವಸ್ಥಾನಕ್ಕೆ ಬರುತ್ತಿರಲಿಲ್ಲ. ಅಣ್ಣನಿಗೆ ದೇವಸ್ಥಾನಕ್ಕೆ ಬರಬೇಕು ಅನ್ನಿಸಿದಾಗ ಮಿಡ್ ನೈಟ್ ಆದರು ಬಂದು ಪೂಜೆ ಮಾಡಿಸಿಕೊಂಡು ಹೋಗ್ತಿದ್ದರು. ಈ ಸಂಕಷ್ಟದಿಂದ ದರ್ಶನ್ ಅಣ್ಣ ಆಚೆ ಬರಲಿ ಎಂದು ಮನೆ ದೇವರು ಮುನೇಶ್ವರಗೆ ಅತ್ತಿಗೆ ಹರಕೆ ಕಟ್ಟಿಕೊಂಡಿದ್ದಾರೆ ಎಂದು ಬಂಡೆ ಮಹಾಕಾಳಮ್ಮ ದೇವಸ್ಥಾನದ ಟ್ರಸ್ಟಿ ಲತಾ ಜೈಪ್ರಕಾಶ್ ಮಾತನಾಡಿದ್ದಾರೆ.