ಕಾರವಾರ: ಪತ್ನಿಯನ್ನೇ ಕಿಡ್ನ್ಯಾಪ್ ಮಾಡಿದ್ದ ಸಿನಿಮಾ ನಿರ್ಮಾಪಕ ಹರ್ಷವರ್ಧನ್‌ನನ್ನು (Harshavardhan) ಕಳ್ಳತನ ಆರೋಪದಡಿ ಉತ್ತರ ಕನ್ನಡ ಪೊಲೀಸರು ಬಂಧಿಸಿದ್ದಾರೆ.
ಹಾಸನ ಮೂಲದ ಹರ್ಷವರ್ಧನ್‌ನನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. 2017 ರಲ್ಲಿ ಸಿದ್ದಾಪುರದ ಹಲಗೇರಿ ಸಮೀಪ ಕುಂಬಾರಕುಳಿ ಎಂಬ ಮನೆಯಬಾಗಿಲು ಮುರಿದು ಬಂಗಾರ ಕಳ್ಳತನ ಮಾಡಿದ್ದ. ಇದನ್ನೂ ಓದಿ: ‘ದಿ ರಾಜಾ ಸಾಬ್’ ಚಿತ್ರದ ಸಹನಾ ಸಹನಾ ಸಾಂಗ್ ರಿಲೀಸ್
ಪ್ರಕರಣದಲ್ಲಿ ಬಂಧಿಯಾಗಿ ಜಾಮೀನು ಪಡೆದಿದ್ದ. ಕೋರ್ಟ್‌ನಿಂದ 10 ಬಾರಿ ವಾರೆಂಟ್ ಜಾರಿಯಾದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಸಿದ್ದಾಪುರ ಕೋರ್ಟ್ ಆದೇಶದಂತೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಡಿ.17ರಂದು ಬಂಧಿಸಲಾಗಿದೆ. ಇಂದು ಸಿದ್ದಾಪುರ ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು.
‘ನಿನ್ನಲ್ಲೇನೋ ಹೇಳಬೇಕು’ ಎಂಬ ಸಿನಿಮಾವನ್ನು ಹರ್ಷವರ್ಧನ್ ನಿರ್ಮಾಣ ಮಾಡಿದ್ದ. ಈ ಸಿನಿಮಾದ ನಟಿ ಚೈತ್ರಾಳನ್ನು ಪ್ರೀತಿಸಿ ವಿವಾಹವಾಗಿದ್ದು, ದಂಪತಿಗೆ ಓರ್ವ ಮಗಳಿದ್ದಾಳೆ. ದಾಂಪತ್ಯದಲ್ಲಿ ವಿರಸ ಬಂದು ಇಬ್ಬರೂ ದೂರವಾಗಿದ್ದರು. ಮಗಳಿಗಾಗಿ ಪತ್ನಿಯನ್ನೇ ಅಪಹರಣ ಮಾಡಿದ್ದ ಆರೋಪ ಹರ್ಷವರ್ಧನ್ ಮೇಲಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ಜಾಮೀನು ಮಂಜೂರಾಗಿ 24 ದಿನಗಳ ಬಳಿಕ ಚಿನ್ನಯ್ಯನಿಗೆ ಸಿಕ್ತು ಬಿಡುಗಡೆ ಭಾಗ್ಯ

