ನಟ, ನಿರ್ದೇಶಕರಾಗೋ ಕನಸಿನ ಕೈ ಹಿಡಿಯಲಿದೆ ‘ಫಿಲ್ಮ್ ಒಡಿಸಿ 360’!

Public TV
2 Min Read
Film Odyssey 360 photo

– ಟ್ರೈನಿಂಗ್ ಮಾತ್ರವಲ್ಲ; ಸಿನಿಮಾದಲ್ಲಿ ನಟಿಸೋ ಅವಕಾಶದ ಗ್ಯಾರೆಂಟಿ!

ನಿರ್ದೇಶಕರಾಗಿ ಮಾತ್ರವಲ್ಲದೇ, ಮತ್ತೊಂದಷ್ಟು ಕ್ರಿಯಾಶೀಲ ಕೆಲಸ ಕಾರ್ಯಗಳ ಮೂಲಕ ಬ್ಯುಸಿಯಾಗಿರುವವರು ಗುರು ದೇಶಪಾಂಡೆ (Guru Deshpande). ವರ್ಷಗಳ ಹಿಂದೆಯೇ ಸಿನಿಮಾ ತರಬೇತಿ ಶಾಲೆ ಆರಂಭಿಸಿ ಅದೆಷ್ಟೋ ಪ್ರತಿಭೆಗಳಿಗೆ ಹಾದಿ ತೋರಿಸಿದ್ದ ಗುರು ದೇಶಪಾಂಡೆ ಇದೀಗ ಇದುವರೆಗೂ ಕಂಡುಕೇಳರಿಯದ ಕೋರ್ಸ್ ಒಂದನ್ನು ಆರಂಭಿಸಿದ್ದಾರೆ. ಅದಕ್ಕೆ ‘ಫಿಲ್ಮ್ ಒಡಿಸ್ಸಿ 360’ (Film Odyssey 360) ಎಂಬ ನಾಮಕರಣವನ್ನೂ ಮಾಡಿದ್ದಾರೆ. ಇನ್ನೇನು ಶುರುವಾಗಲಿರುವ ಈ ವಿಭಿನ್ನ ಕೋರ್ಸ್ ಜಿ ಸಿನಿಮಾಸ್ (G Cinemas) ಅಡಿಯಲ್ಲಿ ಸಂಪನ್ನಗೊಳ್ಳಲಿದೆ. ಈ ಕೋರ್ಸ್ ಕುರಿತಾದ ಇಂಟರೆಸ್ಟಿಂಗ್ ಮಾಹಿತಿಗಳು ಇಲ್ಲಿವೆ…

Film Odyssey 360

Film Odyssey 360 2

ನಟ, ನಟಿ, ನಿರ್ದೇಶಕರಾಗಬೇಕೆಂಬ ಕನಸು ಹೊತ್ತು ಗಾಂಧಿನಗರದ ಆಜೂಬಾಜಿನಲ್ಲಿ ಸುತ್ತಾಡುವವರು ಅನೇಕರಿದ್ದಾರೆ. ಅಂಥವರಿಗೆಲ್ಲ ತಮ್ಮ ಕನಸಿನ ಹಾದಿಯಲ್ಲಿ ಕಾಲೂರಿ ನೆಲೆ ಕಂಡುಕೊಳ್ಳುವ ಅವಕಾಶಗಳು ಸಿಗುವುದು ಕಷ್ಟ. ಎಲ್ಲವನ್ನೂ ಸಿನಿಮಾ ಭಾಗವಾಗಿಯೇ ಕಲಿಯಲು ನಿಂತರೆ, ವರ್ಷಗಳು ಸರಿದು ಹೋಗುತ್ತವೆ. ಅಷ್ಟು ಕಾದರೂ ಆಯಾ ಕ್ಷೇತ್ರಗಳ ನಿಖರ ಅಂದಾಜು ಸಿಗುವ ವಾತಾವರಣ ಸೃಷ್ಟಿಯಾಗೋದೂ ವಿರಳ. ಹಾಗೆ ಯಾವ ಸಿನಿಮಾಗಳಿಗೂ ಕಾರ್ಯನಿರ್ವಹಿಸದೇ ಹೋದರೂ, 15 ದಿನಗಳ ಕೋರ್ಸ್ ಮುಗಿಸಿ ನಂತರ ಬಹು ಬೇಗನೆ ಕನಸು ನನಸು ಮಾಡಿಕೊಡುವ ಸದುದ್ದೇಶ ಈ ಅಪರೂಪದ ಕೋರ್ಸಿನದ್ದು. ಇದನ್ನೂ ಓದಿ: ಅಮೃತಧಾರೆ ಸೀರಿಯಲ್‌ಗೆ ‘ಕಾಂತಾರ’ ನಟಿ ಎಂಟ್ರಿ

Film Odyssey 360 5

Film Odyssey 360 1

ಹದಿನೈದು ಮಂದಿ ನಟರು, ಹತ್ತು ಜನ ನಿರ್ದೇಶಕರು ಹಾಗೂ ಐದು ಮಂದಿ ಎಕ್ಸಿಕ್ಯೂಟಿವ್‌ಗಳ ಮೂಲಕ 15 ದಿನಗಳ ಕಾಲ ತರಬೇತಿ ಕೊಡಿಸಲಾಗುತ್ತೆ. ಸಾಮಾನ್ಯವಾಗಿ ಓರ್ವ ನಟ ಕ್ಯಾಮೆರಾ ಎದುರಿಸುವ ಮುನ್ನ ಒಂದಷ್ಟು ತಿಳುವಳಿಕೆ, ನಟನೆಯ ಪಟ್ಟುಗಳನ್ನು ತಿಳಿದುಕೊಂಡಿದ್ದರೆ ಎಲ್ಲವೂ ಸರಾಗವಾಗುತ್ತದೆ. ಇಲ್ಲಿ ನಟರು ನಟರಾಗೋ ಕನಸು ಹೊಂದಿರುವ ಶಿಬಿರಾರ್ಥಿಯನ್ನು ಆ ನಿಟ್ಟಿನಲ್ಲಿ ತಯಾರುಗೊಳಿಸುತ್ತಾರೆ. ಇನ್ನು ಪಳಗಿದ ನಿರ್ದೇಶಕರು ನಿರ್ದೇಶನದಲ್ಲಿ ಆಸಕ್ತಿ ಹೊಂದಿರುವವರಿಗೆ ಪ್ರಾಕ್ಟಿಕಲ್ ಆಗಿಯೇ ನಿರ್ದೇಶನದ ಸೂಕ್ಷ್ಮ ವಿಚಾರಗಳನ್ನು ಇಂಚಿಂಚಾಗಿ ತಿಳಿಸುತ್ತಾರೆ. ಇದೇ ರೀತಿಯಲ್ಲಿ ನಾನಾ ವಿಭಾಗದ ಶಿಬಿರಾರ್ಥಿಗಳನ್ನು ತಯಾರುಗೊಳಿಸಲಾಗುತ್ತದೆ.

Film Odyssey 360 3

Film Odyssey 360 4

ಹದಿನೈದು ದಿನಗಳ ಕಾಲ ಈ ಶಿಬಿರದಲ್ಲಿ ಭಾಗಿಯಾದವರಿಗೆ ತಕ್ಷಣವೇ ಜಿ ಸಿನಿಮಾಸ್ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ, ಜಟ್ಟ ಖ್ಯಾತಿಯ ನಿರ್ದೇಶಕ ಬಿ.ಎಂ ಗಿರಿರಾಜ್ ನಿರ್ದೇಶನದ ಚಿತ್ರದಲ್ಲಿ ನಟಿಸುವ, ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸುವರ್ಣಾವಕಾಶ ಸಿಗಲಿದೆ. ನಟನೆಯಲ್ಲಿ ತರಬೇತಿ ಪಡೆದವರಿಗೆ ಹೊಸ ಚಿತ್ರದಲ್ಲಿ ಹೊಂದಿಕೆಯಾಗುವ ಪಾತ್ರದಲ್ಲಿ ನಟಿಸುವ ಅವಕಾಶ ಕಲ್ಪಿಸಲಾಗುತ್ತದೆ. ಹೀಗೆ ಶಿಬಿರವೊಂದರಲ್ಲಿ ಪಾಲ್ಗೊಂಡು ತಕ್ಷಣವೇ ಕನಸಿನ ಹಾದಿಯಲ್ಲಿ ಹೆಜ್ಜೆಯಿಡೋ ಅವಕಾಶ ಕಲ್ಪಿಸುವ ಅತೀ ಅಪರೂಪದ ಕೋರ್ಸ್ ಆಗಿ ಫಿಲ್ಮ್ ಒಡಿಸಿ 360 ದಾಖಲಾಗುತ್ತದೆ. ಇದನ್ನೂ ಓದಿ: ಅಯೋಧ್ಯೆಗೆ 2ನೇ ಬಾರಿ ಭೇಟಿ ಕೊಟ್ಟ ಬಿಗ್ ಬಿ

Film Odyssey 360 6

Film Odyssey 360 7

ಅಂದಹಾಗೆ, ಈ ಶಿಬಿರ ಶೀಘ್ರದಲ್ಲಿಯೇ ಶುರುವಾಗಲಿದೆ. ಅದು ಮುಗಿದ ನಂತರ ಮಾರ್ಚ್ ತಿಂಗಳಲ್ಲಿ ಗಿರಿರಾಜ್ ನಿರ್ದೇಶನದ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಈ ಕೋರ್ಸ್‍ನಲ್ಲಿ ಭಾಗಿಯಾಗೋ ಉತ್ಸಾಹ ಹೊಂದಿರುವವರು ಕೆಳಕಂಡ ನಂಬರ್ ಅನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಸಂಪರ್ಕ ಸಂಖ್ಯೆ: 9900777222 \ 9900195195

Share This Article