ಆದಿಪುರುಷ (Adipurush) ಸಿನಿಮಾ ವಿಚಾರವಾಗಿ ಅಲಹಾಬಾದ್ (Allahabad) ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದೆ. ಕೇವಲ ಆದಿಪುರುಷ ಸಿನಿಮಾ ಟೀಮ್ ಗೆ ಮಾತ್ರವಲ್ಲ, ಇತರ ಸಿನಿಮಾ ಮಾಡುವ ನಿರ್ದೇಶಕರಿಗೆ ಅದು ಕಿವಿಮಾತು ಹೇಳಿದೆ. ಸಿನಿಮಾ ಮಾಡುವವರು ಧಾರ್ಮಿಕ ವಿಚಾರಗಳಿಂದ ದೂರವಿರಿ ಎಂದು ಹೇಳಿದೆ.
ಆದಿಪುರುಷ ಸಿನಿಮಾದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟ್ (High Court) ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಶ್ರೀ ಪ್ರಕಾಶ್ ಸಿಂಗ್ ಆದಿಪುರುಷ ಚಿತ್ರತಂಡವನ್ನು ತರಾಟೆಗೆ ತಗೆದುಕೊಂಡಿದ್ದಷ್ಟೇ ಅಲ್ಲ, ‘ನೀವು ಇದೇ ರೀತಿ ತಪ್ಪಾಗಿ ಕುರಾನ್ (Quran) ಬಗ್ಗೆ ಸಣ್ಣದೊಂದು ಡಾಕ್ಯೂಮೆಂಟರಿ ಮಾಡಿ ಮುಂದೇನಾಗತ್ತೆ ಅಂತ ನೋಡಿ’ ಎಂದು ಮೌಖಿಕವಾಗಿ ಕುಟುಕಿದರು. ಇದನ್ನೂ ಓದಿ:ಹಾಲಿವುಡ್ ಸಂದರ್ಶನದಲ್ಲಿ ಆಲಿಯಾ ಭಟ್ ಹೀಗಾ ಮಾಡೋದು- ರಣ್‌ಬೀರ್ ಪತ್ನಿ ಟ್ರೋಲ್
ಮುಂದುವರೆದು ಮಾತನಾಡಿದ ನ್ಯಾಯಾಧೀಶರು, ‘ಯಾವುದೇ ಧರ್ಮದ (Religious) ವಿಷಯಗಳನ್ನು ತಪ್ಪಾಗಿ ತೋರಿಸಬೇಡಿ. ಕೋರ್ಟಿಗೆ ಯಾವುದೇ ಧರ್ಮವಿಲ್ಲ. ಬೈಬಲ್ (Bible), ಕುರಾನ್ ಅಂತ ವಿಚಾರಗಳನ್ನೂ ತೆಗೆದುಕೊಳ್ಳಬೇಡಿ’ ಎಂದು ತಾಕೀತು ಮಾಡಿದರು. ಧಾರ್ಮಿಕ ವಿಷಯಗಳನ್ನು ಎತ್ತಿಕೊಂಡು ಸಿನಿಮಾ ಮಾಡುವುದು ತಮಾಷೆ ವಿಷಯವಲ್ಲ. ಆದಿಪುರುಷ ಸಿನಿಮಾದ ನಿರ್ಮಾಪಕರು ನ್ಯಾಯಾಲಯಕ್ಕೆ ಹಾಜರಾಗಬೇಕು’ ಎಂದು ತಿಳಿಸಿದರು.
ಆದಿಪುರುಷ ಸಿನಿಮಾದ ವಿಚಾರವಾಗಿ ಈ ಚಿತ್ರವನ್ನು ನಿಷೇಧಿಸಬೇಕು ಎಂದು ಅಲಹಾಬಾದ್ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಧೀಶರು, ಸಿನಿಮಾ ಮತ್ತು ಧರ್ಮದ ಬಗ್ಗೆ ಸಾಕಷ್ಟು ಪಾಠಗಳನ್ನು ಮಾಡಿದರು. ಸೂಕ್ಷ್ಮ ವಿಷಯಗಳನ್ನು ಸಿನಿಮಾದಲ್ಲಿ ತರದಂತೆ ಮೌಖಿಕ ಆದೇಶ ಮಾಡಿದರು.
Web Stories