ಮಾಲಿವುಡ್ (Mollywood) ನಿರ್ದೇಶಕ ಸಂಗೀತ್ ಶಿವನ್ (Sangeeth Sivan) ಅವರು ಇಂದು (ಮೇ.7) ನಿಧನರಾಗಿದ್ದಾರೆ. 61ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ. ನಿರ್ದೇಶಕನ ನಿಧನಕ್ಕೆ ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
Advertisement
ಮಲಯಾಳಂ ಮತ್ತು ಹಿಂದಿ ಸಿನಿಮಾಗಳನ್ನು ನಿರ್ದೇಶಿಸಿದ್ದ ಸಂಗೀತ್ ಶಿವನ್ ಅವರನ್ನು ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಈಗ ಅವರ ನಿಧನದ ಸುದ್ದಿ ಕೇಳಿ ಅವರ ಕುಟುಂಬಕ್ಕೆ ಆಘಾತ ಆಗಿದೆ. ಇದನ್ನೂ ಓದಿ:ಕನ್ನಡ ಪ್ರಸಿದ್ಧ ಕಿರುತೆರೆ ನಟಿಯದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್: ಜ್ಯೋತಿ ರೈ ಹೇಳಿದ್ದೇನು?
Advertisement
Advertisement
ಮೋಹನ್‌ಲಾಲ್, ಊರ್ವಶಿ, ಮಧು ನಟನೆಯ ‘ಯೋಧ’ (Yoddha) ಸಿನಿಮಾಗೆ ಸಂಗೀತ್ ಶಿವನ್ ನಿರ್ದೇಶನ ಮಾಡಿದ್ದರು. ಝೋರ್, ‘ಕ್ಯಾ ಕೂಲ್ ಹೈ ಹಮ್’ ಹಿಂದಿ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು.