ಖ್ಯಾತ ನಟರಿಬ್ಬರನ್ನು ಬ್ಯಾನ್ ಮಾಡಿದ ಚಿತ್ರರಂಗ: ನಿರ್ಮಾಪಕರ ಸಂಘ ಮಾಹಿತಿ

Public TV
1 Min Read
Sreenath Bhasi Shane Nigam 1

ಶಿಸ್ತಿನ ಕಾರಣದಿಂದಾಗಿ ನಟರ ಹಾಗೂ ನಿರ್ಮಾಪಕರ ನಡುವೆ ಈಗಾಗಲೇ ಅನೇಕ ಗಲಾಟೆಗಳು ಆಗಿವೆ. ತಮ್ಮ ಸಿನಿಮಾಗೆ ನಟರಿಂದ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಅನೇಕ ನಟರನ್ನು ಚಿತ್ರಗಳಿಂದ ಕೈ ಬಿಟ್ಟಿದ್ದಾರೆ. ಅಲ್ಲದೇ ಕೆಲವು ಕಡೆ ಸಿನಿಮಾ ರಂಗದಿಂದಲೇ ನಟರನ್ನು ಬ್ಯಾನ್ (Ban) ಮಾಡಬೇಕು ಎನ್ನುವ ಕೂಗು ಕೇಳಿ ಬಂದಿದೆ. ಇಂಥದ್ದೇ ಘಟನೆ ಕೇರಳ (Kerala) ಸಿನಿಮಾ ರಂಗದಲ್ಲಿ ನಡೆದಿದೆ.

Sreenath Bhasi Shane Nigam 2

ಮಲಯಾಳಂ ಸಿನಿಮಾ ರಂಗದ ಹೆಸರಾಂತ ಕಲಾವಿದರಾದ ಶ್ರೀನಾಥ್ ಬಾಸಿ (Sreenath Bhasi) ಹಾಗೂ ಶೇನ್ ನಿಗಮ್ (, Shane Nigam) ಇಬ್ಬರನ್ನೂ ಅಶಿಸ್ತಿನ ಕಾರಣ ನೀಡಿ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಕೇರಳ ನಿರ್ಮಾಪಕರ ಸಂಘ ನೀಡಿದೆ. ಈ ಕುರಿತು ಮಾಧ್ಯಮಗೋಷ್ಠಿ ಕರೆದಿದ್ದ ಫಿಲಂ ಎಂಪ್ಲಾಯಿ ಅಸೋಸಿಯೇಷನ್ ಆಫ್ ಕೇರಳ ಹಾಗೂ ಕೇರಳ ಸಿನಿಮಾ ನಿರ್ಮಾಪಕರ ಸಂಘ ಜಂಟಿಗೋಷ್ಠಿ ನಡೆಸಿ  ಈ ಇಬ್ಬರೂ ನಟರನ್ನು ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Sreenath Bhasi Shane Nigam 3

ಕುಂಬಳಂಗಿ ನೈಟ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಇಬ್ಬರೂ ನಟಿಸಿದ್ದಾರೆ. ಹೋಮ್ ನಲ್ಲೂ ಈ ಜೋಡಿ ಕಾಣಿಸಿಕೊಂಡಿತ್ತು. ಆದರೂ, ಇಂಥದ್ದೊಂದು ನಿರ್ಧಾರ ತಗೆದುಕೊಳ್ಳಲು ಕಾರಣ ಸೆಟ್ ನಲ್ಲಿ ಸಾಕಷ್ಟು ಅಶಿಸ್ತು ತೋರಿಸುತ್ತಿದ್ದರಂತೆ. ಶೂಟಿಂಗ್ ಸೆಟ್ ನಲ್ಲೇ ಮಾದಕ ವ್ಯಸನದ ಗುಂಗಿನಲ್ಲಿ ಇರುತ್ತಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ:ಅಗತ್ಯವಿತ್ತು, ಲಿಪ್ ಲಾಕ್ ಮಾಡಿದೆ : ಅಮಲಾ ಪೌಲ್ ಬೋಲ್ಡ್ ಮಾತು

Sreenath Bhasi Shane Nigam 4

ಶೇನ್ ನಿಗಮ್ ಮತ್ತು ಶ್ರೀನಾಥ್ ಬಾಸಿ ಹೀಗೆ ಸಿನಿಮಾಗಳಿಗೆ ತೊಂದರೆ ಕೊಡುತ್ತಿರುವುದು ಇದೇ ಮೊದಲೇನೂ ಅಲ್ಲ ಎಂದಿರುವ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ. ರಂಜಿತ್, ಕೆಲವು ವಾರಗಳ ಹಿಂದೆಯಷ್ಟೇ ಆರ್.ಡಿ.ಎಕ್ಸ್ ಹೆಸರಿನ ಸಿನಿಮಾದಿಂದಲೂ ಈ ನಟರು ಹೊರ ಬಂದಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಇನ್ಮುಂದೆ ಯಾರೂ ಇವರಿಗೆ ಅವಕಾಶ ನೀಡಬಾರದು ಎಂದು ತಿಳಿಸಿದ್ದಾರೆ.

Share This Article