ಕಾವೇರಿ ನದಿ ನೀರು ವಿಚಾರವಾಗಿ ಹೋರಾಟ ಮಾಡುತ್ತಿರುವ ರೈತರ ಪರ ನಿಲ್ಲಲು ಕರ್ನಾಟಕ ಚಲನಚಿತ್ರ ವಾಣಿಜ್ಯ (Film Chamber) ಮಂಡಳಿ ನಿರ್ಧರಿಸಿದೆ. ನಾಳೆ ನಡೆಯುತ್ತಿರುವ ಬೆಂಗಳೂರು (Bangalore) ಬಂದ್ ಗೆ ಬೆಂಬಲವನ್ನೂ ನೀಡಿರುವ ವಾಣಿಜ್ಯ ಮಂಡಳಿಯು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೂ ಚಿತ್ರಮಂದಿರಗಳು ತೆರೆಯುವುದಿಲ್ಲ. ಬೆಂಗಳೂರಿನಲ್ಲಿ ಯಾವುದೇ ಸಿನಿಮಾ ಚಿತ್ರೀಕರಣ ಕೂಡ ಇರುವುದಿಲ್ಲ ಎಂದಿದ್ದಾರೆ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಮ್. ಸುರೇಶ್.
ಕಾವೇರಿ ವಿಚಾರ (Cauvery Protest) ಗಂಭೀರವಾದ ವಿಚಾರ. ಇದಕ್ಕಾಗಿ ನಮ್ಮ ಸಂಪೂರ್ಣ ಬೆಂಬಲ ಇರುತ್ತೆ. ಚಿತ್ರರಂಗದ ಎಲ್ಲಾ ಅಂಗ ಸಂಸ್ಥೆಗಳ ಜೊತೆ ಚರ್ಚೆ ಮಾಡಬೇಕು. ಕಲಾವಿದರನ್ನು ಭೇಟಿ ಮಾಡಬೇಕು. ಸಮಯದ ಅಭಾವ ತುಂಬಾ ಇದೆ. ಹೀಗಾಗಿ ರೂಪುರೇಷೆಯನ್ನು ಸಾಯಂಕಾಲ ತಿಳಿಸುತ್ತೇವೆ. ರೈತರ ಸಮಸ್ಯೆ ಇದು. ನೀರಿನ ಸಮಸ್ಯೆಗೆ ಸ್ಪಂದಿಸೋದು ನಮ್ಮ ಕರ್ತವ್ಯ. ಸರ್ಕಾರಕ್ಕೆ ಮನದಟ್ಟು ಆಗಬೇಕಂದ್ರೆ ಸಮಯಾವಕಾಶ ಬೇಕು ಎಂದಿದ್ದಾರೆ.
ನಾಳೆಯ ಬೆಂಗಳೂರು ಬಂದ್ ಗೆ ಬೆಂಬಲವನ್ನೂ ಸೂಚಿಸಿರುವ ವಾಣಿಜ್ಯ ಮಂಡಳಿ, ಬೆಂಗಳೂರು ಸಿಟಿಯಲ್ಲಿ ಶೂಟಿಂಗ್ ನಡೆಯುವುದಿಲ್ಲ. ಬೆಂಗಳೂರು ಬಿಟ್ಟು ಹೊರಗೆ ಶೂಟಿಂಗ್ ಮಾಡ್ತಿರೋರಿಗೆ ತೊಂದರೆ ಇಲ್ಲ. ನಡ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗು ಚಿತ್ರಮಂದಿರಗಳನ್ನ ಬಂದ್ ಮಾಡ್ತೀವಿ ಎಂದಿದ್ದಾರೆ ಅಧ್ಯಕ್ಷರು.
ರಾಜ್ಯದಲ್ಲಿ ವರುಣ ಕೃಪೆಯಿಲ್ಲದೆ ಕಾವೇರಿ ನೀರಿನ ಪ್ರಮಾಣ ಇಳಿಕೆಯಾಗಿದೆ ಈ ನಡುವೆ ತಮಿಳುನಾಡಿಗೆ ನೀರನ್ನು ಹರಿಯಲು ಬಿಟ್ಟಿದ್ದು ರಾಜ್ಯದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ವಿವಿಧ ರೈತ ಹಾಗೂ ಸಂಘಟನೆಗಳು ಹೋರಾಟ ನಡೆಸುತಿದ್ದು, ಕಾವೇರಿ ಹೋರಾಟಕ್ಕೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಹಿರಿಯ ನಟಿ ಎಂ.ಲೀಲಾವತಿ ಇಳಿದಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಮನೆಯಲ್ಲಿ ಮಾತನಾಡಿದ ಅವರು, ಕಾವೇರಿ ನಮ್ಮದು ಎಂದು ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ನಾನು ಸಹ ಕಾವೇರಿ ಹೋರಾಟಕ್ಕೆ ಹೊರಡುವೆ ನಮ್ಮ ಜಲ, ನಮ್ಮ ನೆಲ, ನಮ್ಮ ನುಡಿ, ಎಲ್ಲಾ ಕನ್ನಡಕೊಸ್ಕರ. ಕಾವೇರಿ ನೀರಿಗಾಗಿ ನಾನು ಹೋರಾಟಕ್ಕೆ ಬರುವೆ’ ಎಂದಿದ್ದಾರೆ. ನೆಲಮಂಗಲದ ಮನೆಯಿಂದ ಮಂಡ್ಯ ಪ್ರತಿಭಟನೆ ಸ್ಥಳಕ್ಕೆ ಮಗ ವಿನೋದ್ ರಾಜ್ ಜೊತೆಗೆ ಹೊರಟಿದ್ದಾರೆ.
ಕಾವೇರಿ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಚಿತ್ರರಂಗದ ನಟ-ನಟಿಯರು ಕಾವೇರಿ ಹೋರಾಟಕ್ಕೆ ಸಾಥ್ ನೀಡುತ್ತಿಲ್ಲ ಎನ್ನುವ ಕೂಗು ಎದ್ದಿದೆ. ಈ ಬೆನ್ನಲ್ಲೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಕಾವೇರಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಮಾತನಾಡಿದ್ದಾರೆ.
Web Stories