ಬೆಂಗಳೂರು: ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿಗಳು ಮತ್ತು ಯುಎಫ್‍ಓ, ಕ್ಯೂಬ್ ನಡುವಿನ ಬಿಕ್ಕಟ್ಟಿನಿಂದಾಗಿ ಮಾರ್ಚ್ 9ರಿಂದ ಹೊಸ ಸಿನಿಮಾಗಳ ಪ್ರದರ್ಶನ ಸ್ಥಗಿತಗೊಳ್ಳಲಿದೆ.
ಈ ಹಿಂದೆ ಅಪ್‍ಲೋಡ್ ಆಗಿದ್ದ ಸಿನಿಮಾಗಳು ಮಾತ್ರ ತೆರೆಕಾಣುತ್ತೆ. ಯುಎಫ್‍ಓ ಮತ್ತು ಕ್ಯೂಬ್ ದುಬಾರಿ ವೆಚ್ಚದ ಹಿನ್ನೆಲೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ಪಾಂಡಿಚೇರಿಯ ವಾಣಿಜ್ಯ ಮಂಡಳಿಗಳು ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿ ಸಭೆ ನಡೆಸಿ, ಯುಎಫ್‍ಓ ಕ್ಯೂಬ್‍ಗೆ ಸಿನಿಮಾ ಕೊಡದಿರಲು ತೀರ್ಮಾನ ತೆಗೆದುಕೊಂಡಿತ್ತು.
Advertisement
Advertisement
ಯುಎಫ್‍ಓ ಮತ್ತು ಕ್ಯೂಬ್ ಜತೆ ಎರಡು ಸುತ್ತಿನ ಮಾತುಕತೆಯಾದರೂ ಸಂಧನ ಯಶಸ್ವಿಯಾಗಿರಲಿಲ್ಲ. ಯುಎಫ್‍ಓ ಮತ್ತು ಕ್ಯೂಬ್‍ನವರ ಸರಿಯಾಗಿ ಸ್ಪಂದಿಸದೇ ಇದ್ದ ಕಾರಣ ಹೊಸ ಮಾರ್ಗವನ್ನು ಹುಡುಕಲು ನಾಲ್ಕು ರಾಜ್ಯಗಳ ಚಲನಚಿತ್ರ ವಾಣಿಜ್ಯ ಮಂಡಳಿಗಳು ಯೋಚಿಸುತ್ತಿವೆ. ಇಂದಿನಿಂದ ರಿಲೀಸ್ ಮಾಡಬೇಕಾದ ಚಿತ್ರಗಳ ಪರಿಸ್ಥಿತಿ ಏನು ಎನ್ನುವ ಬಗ್ಗೆ ದಕ್ಷಿಣ ಭಾರತ ಫಿಲ್ಮ್ ಇಂಡಸ್ಟ್ರಿಯ ನಿರ್ಮಾಪಕರಲ್ಲಿ ಭಯ ಉಂಟಾಗಿದೆ. ಆದರೆ ಚಿತ್ರಗಳ ಬಿಡುಗಡೆಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.