ಬೆಂಗಳೂರು: ಪುನೀತ್ ಅಭಿಮಾನಿಗಳಿಗೆ ಮತ್ತೊಂದು ಬಾರಿ ಕರ್ನಾಟಕದ ಮಧ್ಯದ ಭಾಗದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ ಎಂದು ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಗಣೇಶ್ ಅವರು ತಿಳಿಸಿದ್ದಾರೆ.
Advertisement
ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 19ನೇ ದಿನ. ಅಪ್ಪು ನೆನಪಿನಾರ್ಥ ಇಂದು ಫಿಲಂ ಚೇಂಬರ್ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ `ಪುನೀತ ನಮನ’ ಹೆಸರಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದನ್ನೂ ಓದಿ: ಪುನೀತ್ ದೇವರ ಸ್ವರೂಪದಲ್ಲಿದ್ದರು, ಆದ್ರೆ ನಮಗೆ ತಿಳಿಯಲಿಲ್ಲ: ಸೋನು ಗೌಡ
Advertisement
Advertisement
ಈ ಕಾರ್ಯಕ್ರದಲ್ಲಿ ಸುಮಾರು 2,000 ಸಾವಿರ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಕನ್ನಡದ 150 ಕಲಾವಿದರು, ದಕ್ಷಿಣ ಭಾರತದ ನಾಲ್ಕು ರಾಜ್ಯದ ಖ್ಯಾತ ನಟರು, ಕ್ರೀಡಾ, ಸಾಹಿತ್ಯ ಕ್ಷೇತ್ರದ ಗಣ್ಯರಿಗೆ ಆಹ್ವಾನ ಕೊಡಲಾಗಿದೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಶೂಟಿಂಗ್, ತಿಂಡಿ ಬಿಟ್ಟು ಪುನೀತ್‍ಗೆ ಪ್ರಪಂಚವೇ ಗೊತ್ತಿರಲಿಲ್ಲ – ಅಪ್ಪು ನೆನೆದು ಸಹೋದರಿ ಲಕ್ಷ್ಮೀ ಕಣ್ಣೀರು
Advertisement
ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗಣೇಶ್ ಅವರು, ಈ ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಾರಾ ಗೋವಿಂದ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 2,000 ಮಂದಿಗೆ ಆಹ್ವಾನಿಸಲಾಗಿದೆ. ಕರ್ನಾಟಕದಿಂದ 150 ಮಂದಿ ಕಲಾವಿದರು ಈ ಕಾರ್ಯಕ್ರದಲ್ಲಿ ಭಾಗವಹಿಸಬಹುದಾಗಿದೆ. ಸುಮಾರು 10-11 ಮಂದಿ ಹೊರಗಿನಿಂದ ಬರಬಹುದು ಎಂಬ ನಿರೀಕ್ಷೆ ಇದೆ. ಸೌತ್ ಇಂಡಿಯಾ ಫಿಲ್ಮ್ ಚೇಂಬರ್ ಫೇಡರೇಷನ್ ಆಫ್ ಇಂಡಿಯಾ, ಕೇರಳ ಫಿಲ್ಮ್ ಚೇಂಬರ್, ಆಂದ್ರ ಫಿಲ್ಮ್ ಚೇಂಬರ್, ತೆಲಂಗಾಣ ಫಿಲ್ಮ್ ಚೇಂಬರ್, ತಮಿಳುನಾಡು ಫಿಲ್ಮ್ ಚೇಂಬರ್ ನ ನಿರ್ಮಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಡೀ ಚಿತ್ರರಂಗದಲ್ಲಿರುವ ಎಲ್ಲ ಅಂಗ ಸಂಸ್ಥೆಗಳು ಈ ಕಾರ್ಯಕ್ರದಲ್ಲಿ ಭಾಗವಹಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪುನೀತ ನಮನ ಕಾರ್ಯಕ್ರಮ – ಯಾರೆಲ್ಲ ಗಣ್ಯರು ಬರುತ್ತಿದ್ದಾರೆ?
ಇದೇ ವೇಳೆ ಕೋವಿಡ್-19 ಹಿನ್ನೆಲೆ ಮತ್ತು ಸಮಯ ಅಭಾವ ಇರುವುದರಿಂದ ಈ ಕಾರ್ಯಕ್ರಮಕ್ಕೆ ಕೇವಲ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿದೆ. ಮುಂದಿನ ಬಾರಿ ಸುಮಾರು 1 ಲಕ್ಷ ಅಭಿಮಾನಿಗಳನ್ನು ಸೇರಿಸಿ ಕರ್ನಾಟಕದ ಮದ್ಯದ ಭಾಗದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಬೇಕೆಂದು ಸಾರಾ ಗೋವಿಂದ್ ಅವರು ಮತ್ತು ಎಲ್ಲಾ ಪಾದಾಧಿಕಾರಿಗಳು ತೀರ್ಮಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಂದು ಅದ್ಭುತವಾದಂತಹ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಅಭಿಮಾನಿಗಳಿಗೆ ನೇರವಾಗಿ ನೋಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.