ಸ್ಯಾಂಡಲ್‌ವುಡ್ ನಟರಿಗೆ ಡಿಸಿಎಂ ಡಿಕೆಶಿ (Dk Shivakumar) ವಾರ್ನಿಂಗ್ ವಿಚಾರಕ್ಕೆ ಫಿಲ್ಮ್ಂ ಚೇಂಬರ್ ಅಧ್ಯಕ್ಷ (Film Chamber President) ನರಸಿಂಹಲು (Narasimhalu) ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರ ನೆಟ್ಟು, ಬೋಲ್ಟು ಹೇಳಿಕೆಗೆ ಅಧಿಕಾರ ದರ್ಪದಿಂದ ಹಾಗಂದಿರಬಹುದು ಎಂದು ಫಿಲ್ಮ್ಂ ಚೇಬರ್ ಅಧ್ಯಕ್ಷ ಕೌಂಟರ್ ಕೊಟ್ಟಿದ್ದಾರೆ.
Advertisement
ಫಿಲ್ಮ್ಂ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ಡಿಕೆ ಶಿವಕುಮಾರ್ ಅವರು ಅಧಿಕಾರ ದರ್ಪದಿಂದ ಹಾಗಂದಿರಬಹುದು. ಆದರೆ ನಮ್ಮ ಕಡೆಯಿಂದನೂ ತಪ್ಪಾಗಿದೆ. ಮನೆಯ ಹಬ್ಬಕ್ಕೆ ಕಲಾವಿದರು ಬರಬೇಕಾಗಿತ್ತು. ಆದ್ರೆ ಆಮಂತ್ರಣ ಸಿಕ್ಕಿಲ್ಲ ಅಂತಾ ಬಂದಿಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ:ಅದ್ಧೂರಿಯಾಗಿ 2ನೇ ಮದುವೆಯಾದ ಚೈತ್ರಾ ವಾಸುದೇವನ್
Advertisement
Advertisement
ಡಿಕೆ ಶಿವಕುಮಾರ್ ಮಾತನ್ನು ಸರಿ ಅಂತಾನೂ ಹೇಳೋಕೆ ಆಗಲ್ಲ ತಪ್ಪು ಅಂತಾನೂ ಹೇಳೋಕೆ ಆಗಲ್ಲ. ಆದರೆ ನಟ್ಟು ಬೋಲ್ಟ್ ಸರಿ ಮಾಡುತ್ತೇವೆ ಎನ್ನುವ ಪದ ಅಧಿಕಾರ ದರ್ಪದಿಂದ ಹೇಳಿರಬಹುದು ಎಂದು ಕೌಂಟರ್ ಕೊಟ್ಟಿದ್ದಾರೆ. ಇನ್ನೂ ಸಿನಿಮಾಗಳಿಗೆ ಅನುಮತಿ ಪ್ರತ್ಯೇಕ ನಿಯಮ ಇರುತ್ತದೆ. ಸಿನಿಮಾ ಶೂಟಿಂಗ್‌ಗೆ ಅನುಮತಿ ನೀಡಲ್ಲ ಎಂಬ ಹೇಳಿಕೆಯನ್ನೆಲ್ಲ ನಾವು ಗಂಭೀರವಾಗಿ ತೆಗೆದುಕೊಳ್ಳಲ್ಲ ಎಂದು ಡಿಕೆಶಿ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.
Advertisement
ವಿಧಾನಸೌಧದ ಆವರಣದಲ್ಲಿ ಇಂದು 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಾನು ಉದ್ಘಾಟಿಸಿದೆವು. ಇಂದಿನಿಂದ ಮಾರ್ಚ್ 8ರವರೆಗೆ ನಡೆಯಲಿರುವ ಈ ಚಲನಚಿತ್ರೋತ್ಸವವು ಹಲವು ದೇಶ-ವಿದೇಶಗಳ ಸಿನಿಮಾ ಪ್ರದರ್ಶನಕ್ಕೆ ಸಾಕ್ಷಿಯಾಗಲಿದ್ದು,
“ಸರ್ವ ಜನಾಂಗದ ಶಾಂತಿಯ ತೋಟ ಎಂಬ” ಪರಿಕಲ್ಪನೆಯಲ್ಲಿ 60 ದೇಶಗಳ… pic.twitter.com/e1Zy7C0Nuc
— DK Shivakumar (@DKShivakumar) March 1, 2025
ಅಂದಹಾಗೆ, ನಿನ್ನೆ ನಡೆದ 16ನೇ ಅಂತಾರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಡಿಕೆ ಶಿವಕುಮಾರ್ ಮಾತನಾಡಿ, ಸಿನಿಮಾಗೆ ಯಾವುದೇ ಎಲ್ಲೆ ಇಲ್ಲ. ಎಲ್ಲಿ ಬೇಕಾದರೂ ಬೆಳೆಯಬಹುದು. ನೀವೆಲ್ಲ ಬಣ್ಣ ಹಾಕಿಕೊಂಡು ಸಿನಿಮಾ ಮಾಡ್ತೀರಾ. ನಾವು ಬಣ್ಣ ಹಾಕದೇ ಸಿನಿಮಾ ಮಾಡ್ತೀವಿ ಅಷ್ಟೆ ಎಂದು ರಾಜಕೀಯದ ಬಗ್ಗೆ ಹೇಳಿದರು.
ನನಗೆ ಚಲನಚಿತ್ರ ವಾಣಿಜ್ಯ ಮಂಡಳಿ, ಈ ಸಿನಿಮಾ ನಟರ ಬಗ್ಗೆ ನನಗೆ ಬಹಳ ಸಿಟ್ಟು ಬಂದುಬಿಟ್ಟಿದೆ, ಏಕೆಂದರೆ, ಕೋವಿಡ್ ಮುಗಿದ ಸಮಯದಲ್ಲಿ ನಾವು ನಮ್ಮ ಜಲ ನಮ್ಮ ಹಕ್ಕು ಎಂಬ ಜಾಥಾ ಮಾಡಿದ್ದೆವು, ನಮ್ಮ ಜನರಿಗೆ ನೀರು ಕೊಡುವ ಉದ್ದೇಶದಿಂದಾಗಿ ನಾವು, ಸಿದ್ದರಾಮಯ್ಯನವರು ಪಾದಯಾತ್ರೆ ಮಾಡಿದ್ದೆವು. ಆದರೆ ಆಗ ಯಾವ ನಟರೂ ಸಹ ನಮಗೆ ಬೆಂಬಲ ಕೊಡಲಿಲ್ಲ, ಸಾಧು ಕೋಕಿಲ ಮತ್ತು ದುನಿಯಾ ವಿಜಿ ಬಿಟ್ಟರೆ ಇನ್ಯಾರೂ ಸಹ ನಮಗೆ ಬೆಂಬಲ ಕೊಡಲಿಲ್ಲ. ಅನುಮತಿ ಕೊಡಲಿಲ್ಲ ಅಂದ್ರೆ ಶೂಟಿಂಗ್ ಮಾಡೋಕೆ ಆಗಲ್ಲ, ಯಾರು ಯಾರಿಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಅಂತ ಗೊತ್ತಿದೆ ಎಂದು ಕಾರ್ಯಕ್ರಮದಲ್ಲಿ ಎಚ್ಚರಿಕೆ ನೀಡಿದ್ದರು.