ಚಿತ್ರದುರ್ಗ: ವಾಣಿ ವಿಲಾಸ ಸಾಗರ (Vani Vilas Sagar) ಜಲಾಶಯ ಭರ್ತಿ ಹಿನ್ನೆಲೆ ವಿವಿ ಸಾಗರ ಜಲಾಶಯಕ್ಕೆ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ (Yaduveer Wadiyar) ಬಾಗಿನ ಅರ್ಪಿಸಿದ್ದಾರೆ.
Advertisement
ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿ ಸಾಗರ ಜಲಾಶಯ ಸತತ ನೂರು ವರ್ಷಗಳಲ್ಲಿ ಮೂರನೇ ಬಾರಿಗೆ ಕೋಡಿಬಿದ್ದಿದೆ. ಮೈಸೂರು ಒಡೆಯರಾದ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪನಂಜಮ್ಮಣ್ಣಿ ನೆನಪಿಗಾಗಿ ವಿವಿ ಸಾಗರ ಜಲಾಶಯ ಕಟ್ಟಲಾಗಿದೆ. ಇದನ್ನೂ ಓದಿ: ಹಾವೇರಿ| ಟ್ರ‍್ಯಾಕ್ಟರ್‌ಗೆ ಲಾರಿ ಡಿಕ್ಕಿ – ರಸ್ತೆಗೆ ಬಿದ್ದ ಕ್ರೂಡ್ ಆಯಿಲ್ ತುಂಬಿಕೊಳ್ಳಲು ಮುಗಿಬಿದ್ದ ಜನ
Advertisement
Advertisement
ವಿವಿಪುರದಲ್ಲಿ ಸ್ಥಳೀಯರು ಸಂಸದ ಯದುವೀರ್ ಒಡೆಯರ್‌ಗೆ ಅದ್ಧೂರಿ ಸ್ವಾಗತಕೋರಿ ಜೆಸಿಬಿಯಲ್ಲಿ ಹೂವಿನ ಮಾಲಾರ್ಪಣೆ ಮಾಡಿದರು. ಬಳಿಕ ಯದುವೀರ್ ವಿವಿಸಾಗರ ಜಲಾಶಯಕ್ಕೆ ವಿಶೇಷ ಪೂಜಾ ಕೈಂಕಾರ್ಯ ನೆರವೇರಿಸಿ ಬಾಗಿನ ಅರ್ಪಿಸಿದ್ದಾರೆ. ಈ ವೇಳೆ ಯದುವೀರ್ ಒಡೆಯರ್‌ಗೆ ಬಿಜೆಪಿ ಮುಖಂಡರಾದ ಲಕ್ಷ್ಮಿಕಾಂತ್, ರಾಜಣ್ಣ, ಜೆಡಿಎಸ್ ಮುಖಂಡರಾದ ಯಶೋಧರ್, ಜಯಣ್ಣ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಭೂ ಕಬಳಿಸುತ್ತಾ ಬರುತ್ತಿದೆ ಸಮುದ್ರ; ಕಡಲಿನ ಮುಂದೆ ತಾಪಃಹಾರ ಮಂತ್ರ ಪಠಣಕ್ಕೆ ವೇದಿಕೆ ಸಜ್ಜು
Advertisement