ನವದೆಹಲಿ: ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರೀಯ ತನಿಖಾ ದಳ (CBI) ದೆಹಲಿಯ (Delhi) ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ವಿಚಾರಣೆಗೆ ಕರೆದಿದೆ. ವಿಚಾರಣೆಗೂ ಮುನ್ನ ಮಾತನಾಡಿದ ಸಿಸೋಡಿಯಾ, ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿದೆ ಎಂದು ದೂರಿದ್ದಾರೆ.
Advertisement
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಭಾನುವಾರ ಮನೀಶ್ ಸಿಸೋಡಿಯಾ ಅವರನ್ನು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಈ ಬಗ್ಗೆ ಅಸಮಾಧಾನ ಹೊರ ಹಾಕಿದ ಸಿಸೋಡಿಯಾ, ನನ್ನ ವಿರುದ್ಧ ಸಂಪೂರ್ಣ ನಕಲಿ ಪ್ರಕರಣವನ್ನು ದಾಖಲಿಸಿ ಬಂಧಿಸಲು ಯೋಜಿಸಿದ್ದಾರೆ ಎಂದು ಯಾವುದೇ ವ್ಯಕ್ತಿ ಅಥವಾ ಪಕ್ಷದ ಹೆಸರನ್ನು ಉಲ್ಲೇಖಿಸದೇ ಆರೋಪಿಸಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ 12 ಕೆ.ಜಿ ಸರಕು ಹೊತ್ತ ಡ್ರೋನ್ ಹೊಡೆದುರುಳಿಸಿದ ಭಾರತ
Advertisement
मेरे ख़िलाफ़ पूरी तरह से फ़र्ज़ी केस बनाकर इनकी तैयारी मुझे गिरफ़्तार करने की है. मुझे आने वाले दिनों में चुनाव प्रचार के लिए गुजरात जाना था। ये लोग गुजरात बुरी तरह से हार रहे हैं। इनका मक़सद मुझे गुजरात चुनाव प्रचार में जाने से रोकना है। 1/N
— Manish Sisodia (@msisodia) October 17, 2022
Advertisement
ಈ ಕುರಿತು ಟ್ವೀಟ್ ಮಾಡಿದ ಸಿಸೋಡಿಯಾ, ಮುಂದಿನ ದಿನಗಳಲ್ಲಿ ನಡೆಯಲಿರುವ ಗುಜರಾತ್ ಚುನಾವಣಾ (Gujarat Election) ಪ್ರಚಾರಕ್ಕೆ ನಾನು ಅಲ್ಲಿಗೆ ಹೋಗಬೇಕಿತ್ತು. ಅವರು ಗುಜರಾತ್ ಅನ್ನು ಹೀನಾಯವಾಗಿ ಕಳೆದುಕೊಳ್ಳುತ್ತಿದ್ದಾರೆ. ನಾನು ಚುನಾವಣಾ ಪ್ರಚಾರಕ್ಕೆ ಹೋಗದಂತೆ ತಡೆಯುವುದು ಅವರ ಉದ್ದೇಶವಾಗಿದೆ ಎಂದಿದ್ದಾರೆ.
Advertisement
मेरे ख़िलाफ़ पूरी तरह से फ़र्ज़ी केस बनाकर इनकी तैयारी मुझे गिरफ़्तार करने की है. मुझे आने वाले दिनों में चुनाव प्रचार के लिए गुजरात जाना था। ये लोग गुजरात बुरी तरह से हार रहे हैं। इनका मक़सद मुझे गुजरात चुनाव प्रचार में जाने से रोकना है। 1/N
— Manish Sisodia (@msisodia) October 17, 2022
ಮತ್ತೊಂದು ಟ್ವೀಟ್‌ನಲ್ಲಿ ಸಿಸೋಡಿಯಾ, ನಾನು ಗುಜರಾತ್‌ಗೆ ಹೋದಾಗ, ಅಲ್ಲಿನ ಜನರಿಗೆ ದೆಹಲಿಯಂತಹ ಅದ್ಭುತ ಶಾಲೆಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದೆ. ಇದಕ್ಕೆ ಗುಜರಾತ್‌ನ ಜನರು ತುಂಬಾ ಖುಷಿಯಾಗಿದ್ದಾರೆ. ಆದರೆ ಇವರಿಗೆ ಗುಜರಾತ್‌ನಲ್ಲಿ ಉತ್ತಮ ಶಾಲೆಗಳನ್ನು ನಿರ್ಮಿಸುವುದು ಇಷ್ಟವಿಲ್ಲ. ಗುಜರಾತ್‌ನ ಜನರು ಅಧ್ಯಯನ ಮತ್ತು ಪ್ರಗತಿ ಸಾಧಿಸುವುದು ಅವರಿಗೆ ಇಷ್ಟವಿಲ್ಲ ಎಂದು ದೂರಿದ್ದಾರೆ. ಇದನ್ನೂ ಓದಿ: ವಾರಾಣಸಿಯಲ್ಲಿ ಗಂಗಾರತಿ ಮಾಡಿದ ‘ಬನಾರಸ್’ ಹೀರೋ ಝೈದ್ ಖಾನ್