ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆ ಮತ್ತು ರಸ್ತೆ ಗುಂಡಿಗಳಿಂದ ಸಾಕಷ್ಟು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ಪ್ರಕರಣಗಳ ಹೊಣೆಯನ್ನು ರಸ್ತೆ ನಿರ್ಮಾಣ ಮಾಡಿದ ಪ್ರಾಧಿಕಾರವೇ ಹೊರಬೇಕು ಅಂತ ಸಂಚಾರ ಹಾಗೂ ರಸ್ತೆ ಸುರಕ್ಷತಾ ಇಲಾಖೆ ಆಯುಕ್ತೆ ರೂಪಾ ಅಭಿಪ್ರಾಯಿಸಿದ್ದಾರೆ.
ಈ ಕುರಿತು ಹೊಸ ತಿದ್ದುಪಡಿಗೆ ಕರ್ನಾಟಕ ಪೊಲೀಸರಿಂದ ಎಂ.ವಿ.ಎ ಕಾಯ್ದೆ ತಿದ್ದುಪಡಿಗೆ ರೂಪಾ ಅವರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲಹಾ ಪಟ್ಟಿ ಸಲ್ಲಿಸಿದ್ದಾರೆ. ರಸ್ತೆ ನಿರ್ಮಾಣ ಮಾಡಿದ ಪ್ರಾಧಿಕಾರವೇ ಅನಾಹುತ ಹೊಣೆ ಹೊರಬೇಕು. ಅಲ್ಲದೇ ಪ್ರಾಧಿಕಾರದ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಅನುಮತಿ ನೀಡಿ ಅಂತ ಮನವಿ ಮಾಡಿದ್ದಾರೆ.
Advertisement
ಪಾಲಿಕೆ, ಬಿಡ್ಲೂಡಿ, ಪಿಪಿಡಬ್ಲೂಡಿ ಎನ್ ಹೆಚ್ ವಿರುದ್ಧ ಕ್ರಮಕ್ಕೆ ಸಲಹೆ ನೀಡಿದ್ದಾರೆ. ಮೋಟರ್ ವೆಹಿಕಲ್ ಆಕ್ಟ್ ಲೋಕ ಸಭೆಯಲ್ಲಿ ಪಾಸ್ ಆಗಿದ್ದು, ರಾಜ್ಯ ಸಭೆಯಲ್ಲಿದೆ. ಪಾರ್ಕಿಂಗ್ ಜಾಗ ಇದೇಯೆ ಎಂಬ ಬಗ್ಗೆ ಎನ್‍ಒಸಿ ಪಡೆದು ವಾಹನ ನೊಂದಣಿ ಮಾಡಬೇಕು. ಜೀಬ್ರಾ ಕ್ರಾಸಿಂಗ್ ಅಲ್ಲದೆ ಬೇರೆ ಕಡೆ ರಸ್ತೆ ದಾಟಿದ್ರೆ ಕೇಸ್ ಹಾಕುವುದು. ವೀಲಿಂಗ್ ಸೇರಿ ಡೆಂಜರಸ್ ಡ್ರೈವಿಂಗ್ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹೀಗೆ ಒಟ್ಟು 15 ಸಲಹೆಗಳ ಪಟ್ಟಿಯನ್ನು ರೂಪಾ ಅವರು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದಾರೆ.