ಚಿಕ್ಕಮಗಳೂರು: ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Youth Congress President Mohammad Nalapad) ವಿರುದ್ಧ ದೂರು ದಾಖಲಾಗಿದೆ.
ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ಕುರಿತು ಬಿಜೆಪಿ (BJP) ಮುಖಂಡ ಪ್ರದೀಪ್ ನಾಯಕ್ ದೂರು ದಾಖಲಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣೆಗೆ ಹಾಗೂ ಕಡೂರಿನ ಜೆ.ಎಮ್.ಎಫ್.ಸಿ ಕೋರ್ಟಿಗೂ ಪ್ರದೀಪ್ ದೂರು ನೀಡಿದ್ದಾರೆ.
ಇತ್ತೀಚೆಗೆ ಮೋದಿ (Narendra Modi) ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರಿಂದ ರಾಹುಲ್ ಗಾಂಧಿ (Rahul Gandhi) ಬೆಂಬಲಿಸಿ ಪ್ರತಿಭಟನೆ ವೇಳೆಯ ಭಾಷಣದಲ್ಲಿ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದನ್ನೂ ಓದಿ: ನಿಮ್ಮ 60 ರೂ. ಸೀರೆ ಉಟ್ಟುಕೊಳ್ಳುವಷ್ಟು ನಿರ್ಗತಿಕರಲ್ಲ – ಶಾಮನೂರು ನೀಡಿದ ಸೀರೆಗಳಿಗೆ ಬೆಂಕಿಯಿಟ್ಟ ಮಹಿಳೆಯರು
ಕಳೆದ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿಯಾಗಿ ರಾಹುಲ್ ಗಾಂಧಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇತ್ತ ಮೊಹಮ್ಮದ್ ನಲಪಾಡ್ ಕೂಡ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದು, ಬಿಜೆಪಿಗರ ಕೆಂಗಣ್ಣೀಗೆ ಗುರಿಯಾಗಿದೆ.