CrimeDavanagereDistrictsKarnatakaLatestMain Post

ಕೋಳಿ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ದಾವಣಗೆರೆ: ಫೈಟರ್ ಕೋಳಿಗಳನ್ನು ಕಳ್ಳತನ ಮಾಡಿರುವ ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ದಾವಣಗೆರೆಯ ಹೊಸಕುಂದವಾಡದಲ್ಲಿ ನಡೆದಿದೆ.

6 ಕೋಳಿಗಳನ್ನು ಕದ್ದಿರುವ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಬುಧವಾರ ರಾತ್ರಿ ಸುಮಾರು 10:45ಕ್ಕೆ ಕಳ್ಳತನ ಪ್ರಾರಂಭಿಸಿದ ಖದೀಮರು ಮೊದಲಿಗೆ ಕೋಳಿ ಮಾಲೀಕರ ಮನೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದ್ದಾರೆ. ಮನೆಯ ಹೊರಗಡೆ ಕಪಾಟಿನಲ್ಲಿ ಇರಿಸಿದ್ದ 6 ಕೋಳಿಗಳನ್ನು ಮೂವರು ಕಳ್ಳರು ಒಟ್ಟಾಗಿ ಕದ್ದಿದ್ದಾರೆ. ಇದನ್ನೂ ಓದಿ: ಆಹಾರಕ್ಕಾಗಿ ನಾಡಿಗೆ ಬಂತು ಕಾಡು ಕರಡಿ

ಒಂದು ಫೈಟರ್ ಕೋಳಿ ಮರಿಗೆ 1,500 ರಿಂದ 2,000 ರೂ. ಬೆಲೆ ಇದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಿಟ್‌ಕ್ಯಾಟ್ ರ‍್ಯಾಪರ್‌ನಲ್ಲಿ ಪುರಿ ಜಗನ್ನಾಥ ಫೋಟೋ – ಪ್ಯಾಕ್‌ಗಳನ್ನು ಹಿಂತೆಗೆದುಕೊಂಡ ನೆಸ್ಲೆ ಇಂಡಿಯಾ

Leave a Reply

Your email address will not be published.

Back to top button