ಮಡಿಕೇರಿ: ಮೊಬೈಲ್ (Mobile) ವಿಚಾರದಲ್ಲಿ ಸಹೋದರನೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ತೆರಳಿದ್ದ ಯುವತಿಯ ಮೃತದೇಹ ಎರಡು ದಿನಗಳ ನಂತರ ಕಾವೇರಿ ನದಿಯಲ್ಲಿ ಪತ್ತೆಯಾದ ಘಟನೆ ಕೊಡಗು (Kodagu) ಜಿಲ್ಲೆಯಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಕುಶಾಲನಗರದ (Kushalnagar) ಆದಿಶಂಕರಾಚಾರ್ಯ ಬಡಾವಣೆ ನಿವಾಸಿ ರಣಜಿತ್ ಸಿಂಗ್ ಅವರ ದ್ವಿತೀಯ ಪುತ್ರಿ ಭಾವನ (19) ಮೃತಪಟ್ಟ ಯುವತಿ. 10ನೇ ತರಗತಿ ಮುಗಿಸಿ ಮನೆಯಲ್ಲಿದ್ದ ಭಾವನ ಬಿಡುವಿನ ವೇಳೆಯಲ್ಲಿ ರಥಬೀದಿಯಲ್ಲಿರುವ ತಂದೆಯ ಫ್ಯಾನ್ಸಿ ಸ್ಟೋರ್‌ನಲ್ಲಿ ನೆರವಾಗುತ್ತಿದ್ದಳು. ಡಿ.8 ರಂದು ಮೊಬೈಲ್ ವಿಚಾರವಾಗಿ ಭಾವನ ಹಾಗೂ ಆಕೆಯ ತಮ್ಮ ಮಹಿಪಾಲ್ ನಡುವೆ ಅಂಗಡಿಯಲ್ಲಿ ಜಗಳವಾಗಿದೆ. ಈ ಸಂದರ್ಭ ನಾಳೆ ಬರುವುದಾಗಿ ತಿಳಿಸಿ ಭಾನುವಾರ ಅಂಗಡಿಯಿಂದ ಸಂಜೆ ಹೊರ ತೆರಳಿದ ಭಾವನ ಕಾಣೆಯಾಗಿರುವುದಾಗಿ ತಂದೆ ರಣಜಿತ್ ಸಿಂಗ್ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ಸೋಮವಾರ ದೂರು ಸಲ್ಲಿಸಿದ್ದರು. ಇದನ್ನೂ ಓದಿ: Tumakuru | ಕಾಮಗಾರಿ ಗುಂಡಿಗೆ ಉರುಳಿದ ಟ್ರ‍್ಯಾಕ್ಟರ್ – ಚಾಲಕನ ಕೈಮೂಳೆ ಮುರಿತ
Advertisement
Advertisement
ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಸಂದರ್ಭ ಅಯ್ಯಪ್ಪಸ್ವಾಮಿ ದೇವಾಲಯ ಕಡೆ ಯುವತಿ ತೆರಳಿರುವುದು ಕಂಡುಬಂದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸಹಕಾರದೊಂದಿಗೆ ನದಿಯಲ್ಲಿ ಪರಿಶೀಲಿಸಿದಾಗ ನಾಪತ್ತೆಯಾಗಿದ್ದ ಯುವತಿ ಮೃತದೇಹ ಅಯ್ಯಪ್ಪಸ್ವಾಮಿ ದೇವಾಲಯದಿಂದ ಕೊಂಚ ಮುಂದಕ್ಕೆ ದಂಡಿನಪೇಟೆ ಭಾಗ ಕಾವೇರಿ ನದಿಯಲ್ಲಿ ದೊರತಿದೆ. ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಂಬಂಧ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೂಡಬಿದ್ರೆ| ಆಳ್ವಾಸ್ ವಿರಾಸತ್ 2024ಕ್ಕೆ ಅದ್ದೂರಿ ಚಾಲನೆ
Advertisement