ಬೆಂಗಳೂರು: ನನ್ನ ವಿರುದ್ಧ ಎಫ್ ಐಆರ್ (FIR) ಮಾಡಿರುವವರ ವಿರುದ್ದ ಕಾನೂನು ಹೋರಾಟ ಮುಂದುವರಿಸುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.
ಲೋಕಾಯುಕ್ತ ಪೊಲೀಸರು (Lokayukta Police) ಎಫ್‌ಐಆರ್ ದಾಖಲಿಸಿರುವ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಬಿಐನವರು ನನ್ನ ಸಂಸ್ಥೆಗಳಿಗೆ ಸ್ನೇಹಿತರಿಗೆ ಎಲ್ಲೆಲ್ಲಿ ವ್ಯವಹಾರ ಮಾಡಿದ್ದೇನೋ ಅಲ್ಲೆಲ್ಲಾ ನೂರಾರು ನೋಟಿಸ್ ಕೊಡ್ತಿದ್ದಾರೆ. ಸರ್ಕಾರ ವಾಪಸ್ ಪಡೆದ ನಂತರವೂ ನೋಟಿಸ್ ಕೊಡ್ತಿದ್ದಾರೆ ಯಾಕೆ ಕೊಡ್ತಿದ್ದಾರೋ ಗೊತ್ತಿಲ್ಲ ಎಂದರು.
Advertisement
ಸರ್ಕಾರ ವಿಥ್ ಡ್ರಾ ಮಾಡಿದ ನಂತರ ಲೋಕಾಯುಕ್ತಕ್ಕೆ ಟ್ರಾನ್ಸ್ ಫರ್ ಮಾಡಿದ್ದರು. ಈಗ ಉದ್ದೇಶ ಏನೋ ಗೊತ್ತಿಲ್ಲ, ನಾನು ಕಾನೂನು ಹೋರಾಟ ಮುಂದುವರಿಸುತ್ತೇನೆ. ಅದು ತಪ್ಪು ಇದು ತಪ್ಪು ಎರಡೂ ತಪ್ಪೇ. ಯಡಿಯೂರಪ್ಪ ಸರ್ಕಾರ ಸಿಬಿಐ ಗೆ ಕೊಟ್ಟಿದ್ದೇ ತಪ್ಪು. ಅವತ್ತಿನ ಅಡ್ವೋಕೆಟ್ ಜನರಲ್ ಕೊಡಬೇಡಿ ಎಂದ ಮೇಲೂ ಕೊಟ್ಟಿದ್ದರು. ನಾನು ಆರ್ ಟಿಐ ನಲ್ಲಿ ಎಲ್ಲಾ ಮಾಹಿತಿ ಅಂದೇ ತೆಗೆದುಕೊಂಡಿದ್ದೇನೆ. ಈಗ ಲೋಕಾಯುಕ್ತ ಎಫ್ ಐಆರ್ ಮಾಡಿದ್ದಾರೆ ನೋಡೋಣ ಎಂದಿದ್ದಾರೆ.
Advertisement
Advertisement
ಡಿಕೆಶಿ ವಿರುದ್ಧ FIR: ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಯ ಪೂರ್ವಾನುಮತಿಯನ್ನು ಹಿಂಪಡೆದ ಬಳಿಕ ಸರ್ಕಾರ ತನಿಖೆಯ ಜವಾಬ್ದಾರಿಯನ್ನು ಲೋಕಾಯುಕ್ತಕ್ಕೆ ನೀಡಿತ್ತು. ಈಗ ಲೋಕಾಯುಕ್ತ ಪೊಲೀಸರು ಫೆ.8 ರಂದು ಡಿಕೆಶಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: Loksabha Election: ರೈತರ ಪ್ರತಿಭಟನೆ ಬೆನ್ನಲ್ಲೇ ಮೊದಲ ಗ್ಯಾರಂಟಿ ಘೋಷಿಸಿದ ಖರ್ಗೆ
Advertisement
ಲೋಕಾಯುಕ್ತ ನೀಡಿದ ನಿರ್ಧಾರ ಪ್ರಶ್ನಿಸಿ ಸಿಬಿಐ (CBI) ಈಗಾಗಲೇ ಹೈಕೋರ್ಟ್ (HighCourt) ಮೆಟ್ಟಿಲೇರಿದೆ. ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ನೀಡಿದ್ದ ಆದೇಶವನ್ನು ಪ್ರಶ್ನಿಸಿದೆ. ಒಂದೇ ಪ್ರಕರಣಕ್ಕೆ ಮತ್ತೊಂದು ಎಫ್‍ಐಆರ್ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಲೋಕಾಯುಕ್ತಕ್ಕೆ (Lokayukta) ಕೊಟ್ಟಿರುವ ಆದೇಶ ಸರಿಯಲ್ಲ ಎಂದು ಸಿಬಿಐ ವಾದ ಮಂಡಿಸಿದೆ.