ಬೆಂಗಳೂರು: ಸಿಗರೇಟ್ ವಿಚಾರಕ್ಕೆ ಗಲಾಟೆಯಾಗಿ ರಿಪೀಸ್ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸದಾಶಿವನಗರದಲ್ಲಿ (Sadashiva Nagar) ನಡೆದಿದೆ. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಂಕರ್ ಮತ್ತು ಅರವಿಂದ್ ಎಂದು ಗುರುತಿಸಲಾಗಿದ್ದು, ಸಿಗರೇಟ್ ಖರೀದಿಸುವ ವಿಚಾರಕ್ಕಾಗಿ ಗಲಾಟೆ ಮಾಡಿಕೊಂಡು ಬಳಿಕ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿ ಅಂದರ್
ಆರ್‌ಟಿ ನಗರದ (RT Nagar) ಬಾರ್ ಬಳಿಯಿರುವ ಪಾನ್‌ಶಾಪ್‌ವೊಂದಕ್ಕೆ ಇಬ್ಬರು ತೆರಳಿದ್ದರು. ಈ ವೇಳೆ ಅಂಗಡಿಯವನಿಗೆ ಇಬ್ಬರು ಒಟ್ಟಿಗೆ ಸಿಗರೇಟ್ ಕೊಡುವಂತೆ ಕೇಳಿದ್ದರು. ಅಂಗಡಿಯವ ಇಬ್ಬರ ಪೈಕಿ ಒಬ್ಬನಿಗೆ ಸಿಗರೇಟ್ ನೀಡಿದ್ದ. ಆಗ ಇನ್ನೋರ್ವ ನಾನು ಮೊದಲು ಸಿಗರೇಟ್ ಕೇಳಿದ್ದು, ಹೀಗಾಗಿ ನಾನೇ ಮೊದಲು ಸಿಗರೇಟ್ ತೆಗೆದುಕೊಳ್ಳಬೇಕು ಎಂದು ಕಿರಿಕ್ ಮಾಡಿದ. ಅಲ್ಲಿಂದ ಇಬ್ಬರ ನಡುವೆ ಜಗಳ ಶುರುವಾಯಿತು.
ಆರ್‌ಟಿ ನಗರದಿಂದ ಇಬ್ಬರು ಆರೋಪಿಗಳು ಸದಾಶಿವ ನಗರದ (Sadashiva Nagar) ಕಡೆಗೆ ಬಂದಿದ್ದಾರೆ. ಈ ವೇಳೆ ಓರ್ವ ರಿಪೀಸ್ ಪಟ್ಟಿಯಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾನೆ.
ಘಟನೆ ಬಳಿಕ ಸದಾಶಿವ ನಗರ ಪೊಲೀಸರು (Sadashiva Nagar Police) ಕೊಲೆಯತ್ನ ಕೇಸ್ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ