CinemaKarnatakaLatestMain PostTV Shows

‘ಬಿಗ್ ಬಾಸ್’ ಮನೆಯಲ್ಲಿ ಜಗಳ: ಗೆಳೆಯನ ವಿರುದ್ಧವೇ ಗರಂ ಆದ ಸಂಬರ್ಗಿ

ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಟಾಸ್ಕ್ ವಿಚಾರಕ್ಕೆ ಜಗಳ ಕಾವೇರಿದೆ. ಸ್ಯಾಂಡ್ ವಿಚ್ ಮಾಡೋ ವಿಚಾರಕ್ಕೆ 2 ತಂಡಗಳು ಜಗಳ ಆಡಿವೆ. ಕ್ಯಾಪ್ಟನ್ ಕೊಟ್ಟ ತೀರ್ಪು ಒಪ್ಪಲು ಪ್ರಶಾಂತ್ ಸಂಬರ್ಗಿ ರೆಡಿಯಿಲ್ಲ ಅದಕ್ಕೆ ಜಗಳ ಆಗಿದೆ. ಈ ವೇಳೆ ಗೆಳೆಯ ಗೊಬ್ಬರಗಾಲ ವಿರುದ್ಧವೇ ಸಂಬರ್ಗಿ ತಿರುಗಿ ಬಿದ್ದಿದ್ದಾರೆ.

ದೊಡ್ಮನೆಯಲ್ಲಿ ಕ್ಯಾಪ್ಟನ್ಸಿ ಆಯ್ಕೆಗೆ ವಿವಿಧ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಅದಕ್ಕಾಗಿ ಮನೆಯಲ್ಲಿ ಎರಡು ತಂಡಗಳನ್ನಾಗಿ ಮಾಡಲಾಗಿದೆ. ಒಂದು ಗುಂಪಿಗೆ ಅನುಪಮಾ ಗೌಡ ಕ್ಯಾಪ್ಟನ್ ಆದರೆ, ಮತ್ತೊಂದು ಟೀಂಗೆ ದೀಪಿಕಾ ಕ್ಯಾಪ್ಟನ್. ಈ ಎರಡೂ ಟೀಂಗಳಿಗೆ ವಿವಿಧ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಮೊದಲ ಟಾಸ್ಕ್​ನಲ್ಲಿ  ಸಂಬರ್ಗಿ (Prashant Sambargi) ಫುಲ್ ರಾಂಗ್ ಆಗಿದ್ದಾರೆ. ಇದನ್ನೂ ಓದಿ: ಕಾಂತಾರ ಕಾಳಗ: ಜಾಲತಾಣಗಳಲ್ಲಿ ಸೈದ್ಧಾಂತಿಕ, ರಾಜಕೀಯ, ಪ್ರಾದೇಶಿಕ ಸೊಗಡಿನ ಚರ್ಚೆ

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನ ಪ್ರಕಾರ ಸ್ಪರ್ಧಿಗಳು ಜಿಮ್ ಸೈಕಲ್ ತುಳಿಯುತ್ತಾ ಸ್ಯಾಂಡ್​ವಿಚ್ ಮಾಡಬೇಕಿತ್ತು. ಈ ಟಾಸ್ಕ್​ ಮುಗಿದ ಮೇಲೆ ಪ್ರಶಾಂತ್ ಸಂಬರ್ಗಿ ಸಖತ್ ವೈಲೆಂಟ್ ಆದರು. ಕ್ಯಾಪ್ಟನ್ ಆಗಿದ್ದ ವಿನೋದ್ (Vinod Gobbargala) ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಟಾಸ್ಕ್​ನ ಕೆಲ ನಿಯಮಗಳನ್ನು ವಿವಿಧ ರೀತಿಯಲ್ಲಿ ಬದಲಾಯಿಸಿ ಹೇಳಿದ್ದರು ಎಂಬುದು ಪ್ರಶಾಂತ್ ಸಂಬರ್ಗಿ ವಾದ ಮಾಡಿದ್ದಾರೆ. ವಿನೋದ್​ ನಡೆ ಅನೇಕರಿಗೆ ಇಷ್ಟವಾಗಿಲ್ಲ. ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಅವರು ಸಖತ್ ವೈಲೆಂಟ್ ಆಗಿದ್ದಾರೆ.

ಕಳೆದ ಸೀಸನ್ ನಲ್ಲೂ ಗುರುತಿಸಿಕೊಂಡಿದ್ದ ಪ್ರಶಾಂತ್ ಸಂಬರ್ಗಿ ಸೀಸನ್ ೯ ರ ಹೊಸತರಲ್ಲಿ ಸೈಲೆಂಟ್ ಆಗಿದ್ದರು. ಈಗ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಸಂಬರ್ಗಿ ಫುಲ್ ರಾಂಗ್ ಆಗಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button