ನವದೆಹಲಿ: ಶಿವಸೇನೆ (Shiv Sena) ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಮಹಾರಾಷ್ಟ್ರದ (Maharashtra) ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಬಣಕ್ಕೆ ನೀಡಿದ ಕೇಂದ್ರ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಮಾಜಿ ಸಿಎಂ ಉದ್ದವ್ ಠಾಕ್ರೆ (Uddhav Thackeray) ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ (Supreme Court) ಹೇಳಿದೆ.
ತುರ್ತು ವಿಚಾರಣೆ ನಡೆಸುವಂತೆ ಠಾಕ್ರೆ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಪೀಠದ ಮುಂದೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಬುಧವಾರ ಮಧ್ಯಾಹ್ನ 3:30 ಕ್ಕೆ ಪ್ರಕರಣದ ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದೆ.
ಪಕ್ಷದ ಹೆಸರು ಮತ್ತು ಬಿಲ್ಲು ಬಾಣದ ಚಿಹ್ನೆಯನ್ನು ನೀಡಲು ಶಾಸಕಾಂಗ ಬಲವನ್ನು ಕೇಂದ್ರ ಚುನಾವಣಾ ಆಯೋಗ ಪರಿಗಣಿಸಿದೆ. ಆದರೆ ಇದು ಸಂಘಟನೆ ವಿಭಾಗದ ಪರೀಕ್ಷೆಯ ಮೂಲಕ ತೆಗೆದುಕೊಳ್ಳಬೇಕಿತ್ತು. ಆಯೋಗದ ನಿರ್ಧಾರ ಸರಿಯಾಗಿಲ್ಲ ಎಂದು ಉದ್ದವ್ ಠಾಕ್ರೆ ಅರ್ಜಿಯಲ್ಲಿ ವಾದಿಸಿದ್ದಾರೆ. ಇದನ್ನೂ ಓದಿ: ಮರಾಠಾ ಮತಗಳ ಓಲೈಕೆಯಲ್ಲಿ ಕನ್ನಡ ಮಹನೀಯರ ಮರೆತರಾ ಬೆಳಗಾವಿ ರಾಜಕಾರಣಿಗಳು?
ಇದಕ್ಕೆ ಪ್ರತ್ಯುತ್ತರ ನೀಡಿರುವ ಆಯೋಗ ಎರಡೂ ಬಣಗಳಿಂದ ಸಂಘಟನಾ ವಿಭಾಗದಲ್ಲಿ ಸಂಖ್ಯಾತ್ಮಕ ಬಹುಮತದ ಆಯಾ ಹಕ್ಕುಗಳು ತೃಪ್ತಿಕರವಾಗಿಲ್ಲ. ಸಾಂಸ್ಥಿಕ ವಿಭಾಗದ ಪರೀಕ್ಷೆಯನ್ನು ಅನ್ವಯಿಸಲು ಪ್ರಯತ್ನಿಸಿದರೂ, ಪಕ್ಷದ ಇತ್ತೀಚಿನ ಸಂವಿಧಾನವು ದಾಖಲೆಯಲ್ಲಿ ಇಲ್ಲದ ಕಾರಣ ಯಾವುದೇ ತೃಪ್ತಿಕರ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಹೇಳಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಠಾಕ್ರೆ ಬಣದ 15 ಶಾಸಕರಿದ್ದು, ಶಿಂಧೆ ಬಣದಲ್ಲಿ 40 ಶಾಸಕರಿದ್ದಾರೆ. ಲೋಕಸಭೆಯಲ್ಲೂ 18 ಸಂಸದರ ಪೈಕಿ 13 ಮಂದಿ ಶಿಂಧೆ ಬಣದ ಬೆಂಬಲಕ್ಕೆ ನಿಂತಿದ್ದರೆ. 5 ಮಂದಿ ಮಾತ್ರ ಠಾಕ್ರೆ ಬಣಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಸಂಖ್ಯೆಗಳನ್ನು ಆಧರಿಸಿ ಚುನಾವಣಾ ಆಯೋಗ ಶಿಂಧೆ ಬಣಕ್ಕೆ ಶಿವಸೇನೆ ಪಕ್ಷದ ಗುರುತು ನೀಡಿದೆ. ಇದನ್ನೂ ಓದಿ: ಇಬ್ಬರು ಮಹಿಳಾ ಅಧಿಕಾರಿಗಳಿಗೆ ಸರ್ಕಾರದಿಂದ ಖಡಕ್ ಸೂಚನೆ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
Your article helped me a lot, is there any more related content? Thanks!