ಬೆಂಗಳೂರು: ವಾಕಾಥಾನ್ ವಿವಿಧ ಆಸ್ಪತ್ರೆಯ ವೈದ್ಯರುಗಳು, ಸಾರ್ವಜನಿಕರು ಮತ್ತು ಆರೋಗ್ಯ ಸಿಬ್ಬಂದಿ ಫೈಟ್ ಫಾರ್ ಓಬೇಸಿಟಿ ವಾಕಾಥಾನ್ ಸಾರ್ವಜನಿಕರು ಮತ್ತು ಆರೋಗ್ಯ ಸಿಬ್ಬಂದಿಗಳು ಓಬೇಸಿಟಿ(ಬೊಜ್ಜುತನ)ದಿಂದ ದೇಹದ ಮೇಲೆ ದುಷ್ಟಪರಿಣಾಮ ಬಗ್ಗೆ ಅರಿವು ಮೂಡಿಸಲು ರಾಷ್ಟ್ರೀಯ ಓಬೇಸಿಟಿ ಸಂಸ್ಥೆಯವರು ಫೈಟ್ ಫಾರ್ ಓಬೇಸಿಟಿ ವಾಕಾಥಾನ್ ಕಾರ್ಯಕ್ರಮವನ್ನು ಹೋಟೆಲ್ ಶಾರಟಾನ್ ಮುಂಭಾಗದಿಂದ ವಾಕಥಾನ್ ಹಮ್ಮಿಕೊಂಡಿದ್ದರು.
ವಿವಿಧ ಆಸ್ಪತ್ರೆಯ ವೈದ್ಯರುಗಳು ಮತ್ತು ಸಾರ್ವಜನಿಕರು, ಆರೋಗ್ಯ ಸಿಬ್ಬಂದಿ ವಾಕಾಥಾನ್‍ನಲ್ಲಿ ಪಾಲ್ಗೊಂಡಿದ್ದರು. ಆಸ್ಟೆರ್ ಸಿ.ಎಂ.ಐ ಆಸ್ಪತ್ರೆಯ ಮೆಟಬಾಲಿಕ್ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ವಾಕಥಾನ್‍ಗೆ ಚಾಲನೆ ನೀಡಿದರು.
Advertisement
Advertisement
ಬೊಜ್ಜು ರೋಗ ನಿರ್ಣಯ
ಯುರೋಪಿಯನ್ನರಿಗೆ ಹೋಲಿಸಿದರೆ ಭಾರತೀಯರ ಬೊಜ್ಜುತನದ ವಿಶಿಷ್ಟ ಲಕ್ಷಣಗಳೆಂದರೆ ಅತಿಯಾದ ಕೇಂದ್ರ ಬೊಜ್ಜು ಅಥವಾ ಕಿಬ್ಬೊಟ್ಟೆಯ ಬೊಜ್ಜು. ಬೊಜ್ಜುತನ ನಿರ್ಣಯವನ್ನು ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಎಂಬ ವಿಧಾನದಿಂದ ನಿರ್ಣಯಿಸುತ್ತಾರೆ. ಬಿಎಂಐಯು ವ್ಯಕ್ತಿಯ ತೂಕವನ್ನು (ಕಿಲೋಗ್ರಾಂನಲ್ಲಿ) ಎತ್ತರ (ಮೀಟರ್‌ನ ವರ್ಗ)ದಿಂದ ಭಾಗಿಸಿದಾಗ ದೊರೆಯುತ್ತದೆ.
Advertisement
ಬಿಎಮ್‍ಐ>23ಕೆಜಿ/ಎಮ್2 ಇರುವ ವ್ಯಕ್ತಿಯು ಅಧಿಕ ತೂಕ ಮತ್ತು ಬಿಎಮ್‍ಐ>25ಕೆಜಿ/ಎಮ್2ನ ವ್ಯಕ್ತಿಯು ಬೊಜ್ಜುತನ ಹೊಂದಿರುತ್ತಾರೆ. ಬಿಎಮ್‍ಐ>18-23ಕೆಜಿ/ಎಮ್2ನ ವ್ಯಕ್ತಿಯು ಆರೋಗ್ಯಕರ ದೇಹ ತೂಕ ಹೊಂದಿರುತ್ತಾರೆ.
Advertisement
ಆರೋಗ್ಯಕರ ತೂಕಕ್ಕೆ ಮಾಡಬೇಕಾದ ಜೀವನಶೈಲಿ ಬದಲಾವಣೆಗಳು ಆರೋಗ್ಯಕರ ಆಹಾರಕ್ರಮ ಮತ್ತು ನಿಯಮಿತ ದೈಹಿಕ ವ್ಯಾಯಾಮವು ಆರೋಗ್ಯಕರ ದೇಹದ ತೂಕಕ್ಕೆ ಮೂಲಾಧಾರ.
ಆರೋಗ್ಯಕರ ತಿನ್ನುವ ಹವ್ಯಾಸ:
ತೂಕ ಕಡಿಮೆ ಮಾಡಲು ಮತ್ತು ಆರೋಗ್ಯಕರ ತೂಕ ನಿರ್ವಹಣೆಗೆ, ಆರೋಗ್ಯಕರ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು (ಸಂಕೀರ್ಣ ಕಾಬೊಹೈಡೇಟ್, ಪ್ರೋಟಿನ್, ಹಣ್ಣು, ತರಕಾರಿ ಮತ್ತು ದ್ವಿದಳ ಧಾನ್ಯಗಳನ್ನು ಹೊಂದಿರುವರ ಆಹಾರ) ನಾವು ತಿನ್ನುವ ಆಹಾರ ಪ್ರಮಾಣವು (ಕ್ಯಾಲೊರಿಯಲ್ಲಿ), ನಮ್ಮ ವಯಸ್ಸು, ದೈಹಿಕ ಚಟುವಟಿಕೆಯ ಮೇಲೆ ಅವಲಂಬಿಸಿರುತ್ತದೆ.
ಆರೋಗ್ಯಕರ ತೂಕ ನಿರ್ವಹಣೆಗೆ ಈ ಕೆಳಗಿನ ಐದು ಆಹಾರ ವಸ್ತುಗಳನ್ನು ಮಿತವಾಗಿ ಸೇವಿಸಬೇಕು.