ಲಕ್ನೋ: ಮದುವೆ ಮದುವೆಯಲ್ಲಿ ನೃತ್ಯ ಮಾಡುವ ವೇಳೆ ಡಿಜೆ ಹಾಡುಗಳಿಗಾಗಿ ಜಗಳವಾಡಿ ಕುಟುಂಬಸ್ಥರು ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮದುವೆ ಅಂದರೆ ಎಲ್ಲೆಡೆ ಸಂಭ್ರಮ ಮನೆಮಾಡಿರುತ್ತದೆ. ಆದರೆ ಲಕ್ನೋದಲ್ಲಿ ನಡೆದ ಮುದುವೆಯಲ್ಲಿ ಡಿಜೆಗಾಗಿ ಕಿತ್ತಾಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲಾತಣಗಳಲ್ಲಿ ಭಾರೀ ವೈರಲ್ ಆಗಿದೆ. ಎರಡೂ ಕಡೆಯವರು ಪರಸ್ಪರ ಜಗಳವಾಡಿ, ಮದುವೆ ಮನೆಯಲ್ಲಿದ್ದ ಕುರ್ಚಿಗಳನ್ನು ಎಸೆದು ಕುಟುಂಬಸ್ಥರು ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ:ನಿಮ್ಮ ಪೋಷಕರು ನನಗೆ ಮತ ಹಾಕದಿದ್ರೆ 2 ದಿನ ಊಟ ಮಾಡ್ಬೇಡಿ- ಶಾಸಕರ ವಿವಾದಾತ್ಮಕ ಹೇಳಿಕೆ
- Advertisement
ಮದುವೆ ಮನೆಯಲ್ಲಿ ಮೊದಲು ಎರಡು ಕಡೆಯವರಿಗೆ ಊಟದ ವಿಚಾರವಾಗಿ ಜಗಳವಾಗಿದೆ. ನಂತರ ಆರತಕ್ಷತೆಗೆ ಸಿದ್ಧತೆಗಳು ನಡೆದಿದ್ದು, ವಧು-ವರ ಎಂಟ್ರಿಗೆ ಕುಟುಂಬಸ್ಥರು ನೃತ್ಯ ಮಾಡಿದ್ದಾರೆ. ಅದೇ ಸಮಯದಲ್ಲಿ ಡಿಜೆ ಹಾಡುಗಳಿಗಾಗಿ ಜಗಳವಾಗಿದೆ. ಇದರಿಂದ ಇನಷ್ಟು ಕೋಪಗೊಂಡು ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಆಚಾರ್ಯ ಪ್ರಮೋದ್ ಕೃಷ್ಣಂ ಉಚ್ಛಾಟನೆ- ಕೈ ನಾಯಕ ಹೇಳಿದ್ದೇನು?
- Advertisement
ಮಾತಿಗೆ ಮಾತು ಬೆಳೆದು ಮದುವೆಯಲ್ಲಿ ಜಗಳ ಶರುವಾಗಿದೆ. ಕುಟುಂಬಸ್ಥರು ಮದುವೆ ಮನೆಯಲ್ಲಿದ್ದ ಕುರ್ಚಿಗಳನ್ನು ತಳ್ಳಿ ಹಾಕಿ ಅದರಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯವರನ್ನು ಸಮಾಧಾನ ಮಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಬೆಂಗಳೂರು ರೈಲುಗಳು ಹೈಟೆಕ್- 6 ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಜಾರಿ
ಈ ಘಟನೆಗೆ ಸಂಬಂಧಿಸಿದಂತೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ- ಮೈತ್ರಿ ನಾಯಕರ ಭೇಟಿ ಇಂದೇ ನಡೆಯುತ್ತಾ?