ಮೈಸೂರು: ದೇವಸ್ಥಾನದಲ್ಲಿ ಈಡುಗಾಯಿ ವಿಚಾರದಲ್ಲಿ ಗಲಾಟೆ ನಡೆದು ವೇಳೆ ಇಬ್ಬರು ಯುವಕರು ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ.
ಮಹದೇವಸ್ವಾಮಿ ಹಾಗೂ ಮಂಜು ಗಾಯಗೊಂಡ ಯುವಕರು. ಗಲಾಟೆಯ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ. ಗ್ರಾಮದಲ್ಲಿ ನಡೆದ ಮಾರಮ್ಮನ ಹಬ್ಬ ಆಚರಣೆ ವೇಳೆ ಇತ್ತೀಚೆಗೆ ನವೀಕರಣಗೊಂಡ ಮಾರಮ್ಮನ ದೇವಸ್ಥಾನದಲ್ಲಿ ಇಡುಗಾಯಿ ಹೊಡೆಯುವ ವಿಚಾರದಲ್ಲಿ ಗಲಾಟೆ ನಡೆದಿದೆ.
ಹೊಸದಾಗಿ ಹಾಕಲಾಗಿದ್ದ ಟೈಲ್ಸ್ ಮೇಲೆ ತೆಂಗಿನಕಾಯಿ ಹೊಡೆಯಲು ಕೆಲವರು ವಿರೋಧಿಸಿದ್ದಾರೆ. ಟೈಲ್ಸ್ ಮೇಲೆ ಈಡುಗಾಯಿ ಹೊಡೆಯಲು ಬಂದಾಗ ಮಾತಿನ ಚಕಮಕಿ ಶುರುವಾಗಿ ಯುವಕರ ತಲೆ ಮೇಲೆ ಕೆಲವರು ತೆಂಗಿನಕಾಯಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv