ಯೂತ್ ಕೈ ಕಾರ್ಯಕರ್ತರ ನಡುವೆ ಮಾರಾಮಾರಿ- ರಾಜೀನಾಮೆಗೆ ಮುಂದಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

Public TV
1 Min Read
CHIKKAMAGALURU CONGRESS 3

ಚಿಕ್ಕಮಗಳೂರು: ಯೂತ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಈ ಬೆಳವಣಿಗೆಯಿಂದ ಬೇಸತ್ತು ಬ್ಲಾಕ್ ಕಾಂಗ್ರೆಸ್ ಅರ್ದಯಕ್ಷ ಮಂಜೇಗೌಡ ರಾಜೀನಾಮೆಗೆ ಮುಂದಾದ ಪ್ರಸಂಗ ಕಾಫಿನಾಡು ಚಿಕ್ಕಮಗಲೂರಿನಲ್ಲಿ ನಡೆದಿದೆ.

CHIKKAMAGALURU CONGRESS 1

ಚಿಕ್ಕಮಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್-ಕಾರ್ಯದರ್ಶಿ ನಿತೀಶ್ ಗುಂಪುಗಳ ಮಧ್ಯೆ ಕಿರಿಕ್ ನಡೆದಿದೆ. ಸಂತೋಷ್, ಕಾರ್ಯದರ್ಶಿ ಹುದ್ದೆಯಿಂದ ನಿತೀಶ್ ನನ್ನ ತೆಗೆದುಹಾಕಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಪರಸ್ಪರ ಎರಡು ಗುಂಪುಗಳ ಮಧ್ಯೆ ಹೊಡೆದಾಟ-ಬಡಿದಾಟ ನಡೆದಿದೆ.

CHIKKAMAGALURU CONGRESS

ಈ ಬೆಳವಣಿಗೆಯಿಂದ ಬೇಸತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಅವರೇ ರಾಜೀನಾಮೆಗೆ ಮುಂದಾದರು. ಒಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಾಗಿದೆ. ಇದನ್ನೂ ಓದಿ: ಮನೆಗೆ ಹಿಂದಿರುಗುತ್ತಿದ್ದಾಗ ಸಿಂಹ ದಾಳಿ- ಕಾರ್ಮಿಕ ದುರ್ಮರಣ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *