DistrictsKarnatakaLatestMain PostYadgir

ಮಂಗಳಮುಖಿಯರ ಗ್ಯಾಂಗ್ ಮಧ್ಯೆ ಮಾರಾಮಾರಿ – 6 ಮಂದಿಗೆ ಗಾಯ

Advertisements

ಯಾದಗಿರಿ: ಹಣದ ಕಲೆಕ್ಷನ್ ವಿಚಾರಕ್ಕೆ ಎರಡು ಮಂಗಳಮುಖಿಯರ ಗ್ಯಾಂಗ್ ಮಧ್ಯೆ ಮಾರಾಮಾರಿ ನಡೆದಿದ್ದು, 6 ಜನ ಮಂಗಳ ಮುಖಿಯರು ಗಾಯಗೊಂಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ನಗರದ ಮಾತಾಮಾಣಿಕೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಮಾಯಾ ಮತ್ತು ಮಂಜುಳ ಎಂಬ ಇಬ್ಬರ ಗ್ಯಾಂಗ್‍ಗಳು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಮಾಯಾ ಮತ್ತು ಅವರ ಸ್ನೇಹಿತರಿರುವ ಮನೆ ಮೇಲೆ ದಾಳಿ ಮಾಡಿದ ಮಂಜುಳ ಎಂಬ ಮಂಗಳಮುಖಿ ಗ್ಯಾಂಗ್ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದೀಗ ಗಾಯಗೊಂಡವರಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಮಹಿಳೆಯರು ಧರಿಸಬಹುದಾದ ಬೋಲ್ಡ್ ಅಟ್ರಾಕ್ಟೀವ್ ನೈಟ್‌ವೇರ್‌ಗಳು

ಮಾಯಾ ಮನೆಯ ಕಿಟಕಿ, ಬಾಗಿಲು ಮುರಿದು ಹಲ್ಲೆ ಮಾಡಿ ಚಿನ್ನಾಭರಣ, ಮೊಬೈಲ್ ದೋಚಿಕೊಂಡು ಹೋಗಿರುವ ಆರೋಪ ಸಹ ಕೇಳಿ ಬಂದಿದೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಯೋಗಿ ಸರ್ಕಾರದಿಂದ ಇಲ್ಲಿಯವರೆಗೆ 15246 ಕಿ.ಮೀ.ಗೂ ಹೆಚ್ಚು ಗ್ರಾಮೀಣ ರಸ್ತೆಗಳನ್ನು ನಿರ್ಮಾಣ

Leave a Reply

Your email address will not be published.

Back to top button