ದಾವಣಗೆರೆ: ಇಲ್ಲಿನ (Davanagere) ಹರಿಹರದ (Harihar) ಆರೋಗ್ಯ ಮಾತೆ ಚರ್ಚ್‍ನಲ್ಲಿ (Church) ಲೆಕ್ಕಪತ್ರದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಚರ್ಚ್‍ನ ಲೆಕ್ಕಪತ್ರ ನೀಡಲು ಹಾಗೂ ಅವ್ಯವಸ್ಥೆ ಸರಿ ಪಡಿಸಲು ಚರ್ಚ್ ಪಾಲನಾ ಪರಿಷತ್ ಸದಸ್ಯರು ಹಾಗೂ ಮುಖಂಡರು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಆದರೆ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಬಿಷಪ್ ಪ್ರಾನ್ಸಿಸ್ಸ್ ಸೆರಾವೋ ಲೆಕ್ಕಪತ್ರ ಒದಗಿಸಿರಲಿಲ್ಲ.
ಇದರಿಂದಾಗಿ ಮೂರು ದಿನಗಳ ಕಾಲ ನಡೆಯುವ ಸಭೆಗೆ ಆಗಮಿಸಿದ ಬಿಷಪ್ ಪ್ರಾನ್ಸಿಸ್ಸ್ ಸೆರಾವೋ ಅವರಿಗೆ ಘೇರಾವ್ ಹಾಕಲಾಗಿತ್ತು. ಇದರಿಂದ ಎರಡು ಗುಂಪುಗಳ ನಡುವೆ ಚರ್ಚ್ ಮುಂಭಾಗವೇ ಮಾರಾಮಾರಿ ನಡೆದಿದೆ.
ಕೂಡಲೇ ಹರಿಹರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.