ಒಬ್ಬರ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಮತ್ತೊಬ್ಬರಿಂದ ಕಿತ್ತಾಟ ಶುರು- ಹೈಕಮಾಂಡ್ ಗೆ ದೂರು

Public TV
1 Min Read
BLY copy

ಬಳ್ಳಾರಿ: ಆಡಳಿತಾರೂಢ ಶಾಸಕರು ತಮ್ಮ ಕ್ಷೇತ್ರದಲ್ಲಿ ಕಚೇರಿ ತೆರೆಯುವುದು ಸಾಮಾನ್ಯ. ಆದ್ರೆ ಕಾಂಗ್ರೆಸ್ ಶಾಸಕರೊಬ್ಬರು ಮತ್ತೊಬ್ಬ ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡೋ ನೆಪದಲ್ಲಿ ಜನಸಂಪರ್ಕ ಕಚೇರಿ ತೆರದು ವಿವಾದ ಸೃಷ್ಠಿ ಮಾಡಿದ್ದಾರೆ.

ಹೌದು. ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಮುಂದೆಯೇ ಕಿತ್ತಾಡಿಕೊಂಡಿದ್ದ ಹಗರಿಬೊಮ್ಮನಹಳ್ಳಿಯ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಹಾಗೂ ಹೊಸಪೇಟೆ ಶಾಸಕ ಆನಂದ್ ಸಿಂಗ್, ಇದೀಗ ಒಬ್ಬರ ಕ್ಷೇತ್ರದಲ್ಲಿ ಮತ್ತೊಬ್ಬರು ಪ್ರತಿಷ್ಠೆ ಮೆರೆಯಲು ಮುಂದಾಗುವ ಮೂಲಕ ಕೈಕೈ ಮಿಲಾಯಿಸಲು ಸಜ್ಜಾಗಿದ್ದಾರೆ.

vlcsnap 2018 11 16 09h03m19s201

ಶಾಸಕ ಆನಂದಸಿಂಗ್ ಹೊಸಪೇಟೆ ಕ್ಷೇತ್ರ ಬಿಟ್ಟು ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಲಗ್ಗೆ ಇಟ್ಟು ಜನಸಂಪರ್ಕ ಕಚೇರಿ ತೆರೆದು ಜನಸೇವೆ ನೆಪದಲ್ಲಿ ಭೀಮಾನಾಯ್ಕರನ್ನು ಮಣಿಸಲು ಮುಂದಾಗಿದ್ದಾರೆ. ಎರಡು ತಿಂಗಳ ಹಿಂದೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಆನಂದ್ ಸಿಂಗ್ ಹಸ್ತಕ್ಷೇಪದ ಬಗ್ಗೆ ಶಾಸಕ ಭೀಮಾನಾಯ್ಕ್ ತಕರಾರು ತೆಗೆದಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಆನಂದ್ ಸಿಂಗ್ ಹಗರಿಬೊಮ್ಮನಹಳ್ಳಿಯಲ್ಲಿ ಜನಸಂಪರ್ಕ ಕಚೇರಿ ತೆರೆದು ಸಮಾಜ ಸೇವೆ ಮಾಡೋದಾಗಿ ಹೇಳುತ್ತಿದ್ದಾರೆ. ಇದು ಭೀಮಾನಾಯ್ಕ್ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಮುಂದೆ ಕ್ಷೇತ್ರದಲ್ಲಿ ಏನೇ ಆದ್ರೂ ಅದಕ್ಕೆ ಆನಂದ್ ಸಿಂಗ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಹೊಣೆ ಅಂತಾ ಭೀಮಾನಾಯ್ಕ್ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.

vlcsnap 2018 11 16 09h02m54s211 e1542339413892

ಮಾಜಿ ಸಿಎಂ ಸಿದ್ದರಾಮಯ್ಯ ಮಾತಿಗೂ ಬೆಲೆ ಕೊಡದ ಆನಂದ್ ಸಿಂಗ್, ಭೀಮಾನಾಯ್ಕ್ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಹೀಗಾಗಿ ಭೀಮಾನಾಯ್ಕ್ ಕಾಂಗ್ರೆಸ್ ಹೈಕಮಾಂಡ್‍ಗೆ ಲಿಖಿತ ದೂರು ನೀಡಿದ್ದಾರೆ.

vlcsnap 2018 11 16 09h02m44s99

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *