ಬೆಳಗಾವಿ: ಒಂದರ ಮೇಲೆ ಒಂದರಂತೆ ಗ್ಯಾರಂಟಿ ಜಾರಿಗೊಳಿಸಿ ಮುನ್ನುಗ್ಗುತ್ತಿರುವ ಸಿದ್ದು ಸರ್ಕಾರಕ್ಕೆ ಹೊಸ ಟೆನ್ಷನ್ ಶುರುವಾಗ್ತಿದೆ. ಮಂತ್ರಿ ಸ್ಥಾನ ಸಿಗದೇ ಕೆಲ ನಾಯಕರು ಬಹಿರಂಗ ಆಕ್ರೋಶ ಹೊರಹಾಕಿದರೆ. ಮತ್ತೊಂದೆಡೆ ಸಚಿವರಿಬ್ಬರ ಮಧ್ಯೆ ಶೀತಲ ಸಮರ ಶುರುವಾಗಿದೆ.
ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರ ಹೊಂದಿರುವುದು ಕುಂದಾನಗರಿ ಬೆಳಗಾವಿ (Belagavi) ಜಿಲ್ಲೆ. ಬೆಳಗಾವಿ ರಾಜಕಾರಣ ನಿಯಂತ್ರಿಸುವುದಕ್ಕೆ ನಾಯಕರು ಪೈಪೋಟಿ ನಡೆಸುತ್ತಾರೆ. ಇದೇ ವಿಚಾರವಾಗಿ ಸದ್ಯ ಸಿದ್ದು ಸರ್ಕಾರದಲ್ಲಿ ಸಚಿವರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹಾಗೂ ಸತೀಶ್ ಜಾರಕಿಹೊಳಿ (Satish Jarkiholi) ಮಧ್ಯೆ ಶೀತಲ ಸಮರ ಶುರುವಾಗಿದೆ ಎನ್ನಲಾಗಿದೆ. ಲೋಕಸಭೆ ಚುನಾವಣೆಗೆ ಸಜ್ಜಾಗಿರುವ ರಾಜ್ಯ ಕಾಂಗ್ರೆಸ್‌ಗೆ ಇದು ಹೊಸ ತಲೆನೋವು ತಂದಿದೆ. ಇದನ್ನೂ ಓದಿ: ಭಾನುವಾರ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ – ಲೋಕಸಭೆ ಚುನಾವಣೆ ಮೇಲೆ ಕಣ್ಣು
Advertisement
Advertisement
ಅಷ್ಟಕ್ಕೂ ಈ ಇಬ್ಬರು ನಾಯಕರ ಶೀತಲ ಸಮರಕ್ಕೆ ಕಾರಣ ಮಕ್ಕಳ ರಾಜಕೀಯ ಭವಿಷ್ಯ ಎನ್ನಲಾಗಿದೆ. ತಮ್ಮ ಮಕ್ಕಳಿಗೆ ಬೆಳಗಾವಿ ಎಂಪಿ ಟಿಕೆಟ್ ಕೊಡಿಸಲು ಇಬ್ಬರು ನಾಯಕರು ಹಠಕ್ಕೆ ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಪುತ್ರ ಮೃನಾಲ್ ಹೆಬ್ಬಾಳ್ಕರ್‌ಗೆ ಟಿಕೆಟ್ ಕೊಡಿಸಲು ಪ್ಲಾನ್ ಮಾಡಿದ್ದಾರೆ. ಅತ್ತ ಸಾಹುಕಾರ್ ಸತೀಶ್ ಜಾರಕಿಹೊಳಿ ತಮ್ಮ ಪುತ್ರಿ ಪ್ರಿಯಾಂಕಾರನ್ನ ಲೋಕಸಮರದ ಕಾಂಗ್ರೆಸ್ ಹುರಿಯಾಳು ಮಾಡಲು ತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗಿದೆ.
Advertisement
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ನಮ್ಮಲ್ಲಿ ಮುಸುಕಿನ ಗುದ್ದಾಟ ಅಂತೇನಿಲ್ಲ. ಯಾರಾದರೊಬ್ಬರು ಅಭ್ಯರ್ಥಿ ಆಗಲೇ ಬೇಕು? ಪ್ರಯತ್ನ ಮಾಡುತ್ತಿರುವುದು ನಿಜ ಎಂದಿದ್ದಾರೆ. ಇತ್ತ, ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃನಾಲ್, ಪಕ್ಷ ಹೇಳಿದರೆ ಸ್ಪರ್ಧಿಸಲು ಸಿದ್ಧ ಎಂದಿದ್ದಾರೆ. ಇದನ್ನೂ ಓದಿ: ಭಾರತ ಹಿಂದೂ ರಾಷ್ಟ್ರವಲ್ಲ, ಆಗಿರಲೂ ಇಲ್ಲ: RSS ವಿರುದ್ಧ ಎಸ್‌ಪಿ ನಾಯಕ ಕಿಡಿ
Advertisement
ಇದಲ್ಲದೇ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲೂ ಉಭಯ ಸಚಿವರ ಮಧ್ಯೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ ಎಂಬ ಮಾತು ಕೂಡ ಇದೆ. ಒಟ್ಟಾರೆ. ಲೋಕಸಭಾ ಚುನಾವಣೆ ಸನಿಹದಲ್ಲೇ ಬೆಳಗಾವಿ ರಾಜಕಾರಣ ಮತ್ತೆ ಸದ್ದು ಮಾಡುತ್ತಿದ್ದು, ಸಚಿವರಿಬ್ಬರ ಶೀತಲ ಸಮರ ಯಾವ ಹಂತಕ್ಕೆ ತಲುಪುತ್ತೆ ಎಂಬುದು ಚರ್ಚೆಗೆ ಕಾರಣವಾಗಿದೆ.
Web Stories