ಉಡುಪಿ: ಹಾವು, ಮುಂಗುಸಿ ನಡುವೆ ಜಗಳ ಆಗುವುದು, ಕೊನೆಗೆ ಅದರದಲ್ಲಿ ಒಂದು ಸಾಯುವುದನ್ನು ನೋಡಿದ್ದೇವೆ. ಆದರೆ ಉಡುಪಿಯಲ್ಲಿ ಎರಡು ಶಕ್ತಿಶಾಲಿ ಸರಿಸ್ರಪಗಳ ನಡುವೆ ಕಾದಾಟ ನಡೆದಿದೆ.
ಕುಂದಾಪುರ ತಾಲೂಕು ಎಡಮೊಗೆ ಗ್ರಾಮದ ಮಡಿವಾಳಮಕ್ಕಿ ಎಂಬಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಕಾದಾಟ ಮಾಡಿದೆ. ಕಾಳಿಂಗ ಸರ್ಪ ಹಾಗೂ ಹೆಬ್ಬಾವಿನ ನಡುವಿನ ಕಾದಾಟದ ದೃಶ್ಯಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಡಿವಾಳಮಕ್ಕಿ ಶೇಖರ ಬೋವಿಯವರ ಮನೆಯ ಕೊಟ್ಟಿಗೆಯ ಪಕ್ಕದಲ್ಲಿ ಈ ಎರಡು ದೈತ್ಯ ಹಾವುಗಳು ಉರುಳಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಈ ರೋಚಕ ದೃಶ್ಯವನ್ನು ತಮ್ಮ ಮೊಬೈಲ್‍ಗಳಲ್ಲಿ ಸೆರೆ ಹಿಡಿದಿದ್ದಾರೆ. ಒಂದು ಹಂತದಲ್ಲಿ ಕಾಳಿಂಗ ಸರ್ಪವು ಹೆಬ್ಬಾವಿನ ಹೊಟ್ಟೆ ಭಾಗವನ್ನು ಬಹಳಷ್ಟು ಹೊತ್ತು ಕಚ್ಚಿ ಹಿಡಿದಿತ್ತು. ಹೆಬ್ಬಾವು ಕೂಡ ಅಷ್ಟೇ ಪಟ್ಟು ಬಿಡದೆ ಕಾಳಿಂಗ ಸರ್ಪವನ್ನು ಸುತ್ತುಹಾಕಿ ಕಬಳಿಸಲು ಪ್ರಯತ್ನಿಸಿತ್ತು.
ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಎರಡೂ ಹಾವುಗಳನ್ನು ಬಿಡಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಹಾವುಗಳಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಎರಡು ಬಲಿಷ್ಠವಾದವು ಎಂದೇ ಗುರುತಿಸಿಕೊಂಡಿದೆ. ಒಂದೇ ಬೇಟೆಗೆ ಎರಡು ಹಾವುಗಳು ಕಾದಾಡಿದ್ದರಿಂದ ಪರಸ್ಪರ ತಿಕ್ಕಟಕ್ಕೆ ಬಿದ್ದಿರುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
https://www.youtube.com/watch?v=yK_IjdpCkFQ