ಚಿಕ್ಕಬಳ್ಳಾಪುರ: ಗಂಡ-ಹೆಂಡತಿಯ ಜಗಳ ಬಿಡಿಸಲು ಬಂದಿದ್ದ ಪೊಲೀಸರನ್ನೇ (Police) ಕೂಡಿಹಾಕಿದ ಪ್ರಸಂಗ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಶಿಡ್ಲಘಟ್ಟ (Shidlaghatta) ತಾಲೂಕಿನ ಅಮ್ಮಗಾರಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಅಮ್ಮಗಾರಹಳ್ಳಿ ಗ್ರಾಮದಲ್ಲಿ ಶಿವಾನಂದ ಹಾಗೂ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದ ಶಿವಾನಂದನ ಪತ್ನಿ ಐಶ್ವರ್ಯ ನಡುವೆ ಕೌಟುಂಬಿಕ ಕಲಹದಿಂದ ದೂರ ಇದ್ದರು. ಇವರಿಗೆ ಒಂದು ಗಂಡು ಮಗು ಸಹ ಇದೆ. ಗುರುವಾರ ಐಶ್ವರ್ಯ ಮಗುವನ್ನು ತನ್ನ ಜೊತೆ ಕಳುಹಿಸಿ ಕೊಡಿ ಅಂತ ಗಂಡನ ಮನೆ ಬಳಿ ಬಂದು ಗಲಾಟೆ ಮಾಡಿದ್ದಾಳೆ. ಪತಿ ಒಪ್ಪದೇ ಹೋದಾಗ 112 ಹೋಯ್ಸಳ ಪೊಲೀಸರಿಗೆ ಕರೆ ಮಾಡಿ ತನ್ನ ಹಾಗೂ ಪತಿ ನಡುವೆ ಗಲಾಟೆಯಾಗಿದೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ.
ಬಳಿಕ ತಡರಾತ್ರಿ ಅಮ್ಮಗಾರಹಳ್ಳಿಗೆ ಬಂದ ಹೊಯ್ಸಳ ಪೊಲೀಸರು ಮಗುವನ್ನು ಕೊಡಿ, ಠಾಣೆಗೆ ಬಂದು ತಂದೆ ತಾಯಿ ಇಬ್ಬರು ನ್ಯಾಯ ಪಂಚಾಯತಿ ಮಾಡಿಕೊಂಡು ಮಗುವನ್ನು ಕರೆದುಕೊಂಡು ಹೋಗಿ. ಅಲ್ಲಿಯವರೆಗೆ ಸಾಂತ್ವನ ಕೇಂದ್ರದಲ್ಲಿ ಇರಿಸುತ್ತೇವೆ ಎಂದು ಮಗುವನ್ನು ಕರದುಕೊಂಡು ಹೋಗಿದ್ದಾರೆ. ಆದರೆ ಮಗುವನ್ನು ಸಾಂತ್ವನ ಕೇಂದ್ರಕ್ಕೆ ಬಿಡದೇ ಗ್ರಾಮದ ಮುಂಭಾಗದ ಮುಖ್ಯ ರಸ್ತೆಗೆ ಬಂದು ಐಶ್ವರ್ಯ ತಾಯಿ ಯಶೋದಮ್ಮ ಅವರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಟಿಪ್ಪುವಿನ ಹೆಸರನ್ನು ಶೌಚಾಲಯಗಳಿಗೆ ಇಡಬೇಕು: ಯತ್ನಾಳ್
ಇದನ್ನು ತಿಳಿದು ಮಗುವಿನ ತಂದೆಯ ಕಡೆಯವರು ಕೆರಳಿದ್ದಾರೆ. ಮಗುವನ್ನು ತಂದು ನಮಗೆ ವಾಪಸ್ ಒಪ್ಪಿಸುವವರೆಗೂ ಹೊಯ್ಸಳ ವಾಹನವನ್ನು ಬಿಡುವುದಿಲ್ಲ ಎಂದು ಇಡೀ ಗ್ರಾಮಸ್ಥರು ಪೊಲೀಸ್ ವಾಹನ ಹಾಗೂ ಪೊಲೀಸರನ್ನು ಲಾಕ್ ಮಾಡಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್- ಕುಕ್ಕೆಯಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ