– ಗಂಟೆಗಂಟಲೇ ನಿಂತಲ್ಲೇ ನಿಂತ ನೂರಾರು ವಾಹನಗಳು
ಹುಬ್ಬಳ್ಳಿ: ಇಟ್ಟಿಗಟ್ಟಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸರ್ಕಾರಿ ಬಸ್ ಚಾಲಕ ಹಾಗೂ ಲಾರಿ ಡ್ರೈವರ್ ಪರಸ್ಪರ ಕೈ ಕೈ ಮಿಲಾಯಿಸಿದ ಪರಿಣಾಮ ಗಂಟೆಗಂಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಓವರ್‍ಟೇಕ್ ಮಾಡುವ ವಿಚಾರಕ್ಕೆ ಈಶಾನ್ಯ ಕರ್ನಾಟಕ ಸಾರಿಗೆ ಚಾಲಕ ಹಾಗೂ ಲಾರಿ ಡ್ರೈವರ್ ಇಬ್ಬರೂ ನಡುರಸ್ತೆಯಲ್ಲೇ ಚಪ್ಪಲಿ ಹಿಡಿದು ಕೈ ಕೈ ಮಿಲಾಯಿಸಿದ್ದಾರೆ. ಬೆಳಗಾವಿಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಬಸ್ ಲಾರಿಯನ್ನು ಓವರ್‌ಟೇಕ್ ಮಾಡಿ ಮುಂದೆ ಸಾಗಲು ಯತ್ನಿಸಿತ್ತು. ಈ ವೇಳೆ ಲಾರಿ ಚಾಲಕ ಅಡ್ಡಾದಿಡ್ಡಿಯಾಗಿ ಲಾರಿ ಓಡಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಬಸ್ ಚಾಲಕ ಲಾರಿಯನ್ನು ಹಿಂದಿಕ್ಕಿ ರಸ್ತೆಮಧ್ಯೆಯೇ ಬಸನ್ನು ನಿಲ್ಲಿಸಿದ್ದಾನೆ.
Advertisement
Advertisement
ಬಳಿಕ ಲಾರಿಯನ್ನು ತಡೆದು, ವಿಚಾರಿಸಿದ್ದಾನೆ. ಈ ವೇಳೆ ಇವರಿಬ್ಬರ ಗಲಾಟೆ ತರಾಕಕ್ಕೇರಿ ಚಪ್ಪಲಿ ಹಿಡಿದು, ಹೊಡೆದಾಡಿಕೊಂಡಿದ್ದಾರೆ. ಇವರಿಬ್ಬರ ಕಿತ್ತಾಟದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆ ಗಟ್ಟಲೇ ವಾಹನಗಳನ್ನು ನಿಂತಿದ್ದವು. ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಯಾಣಿಕರು ಇಬ್ಬರನ್ನೂ ಸಮಾಧಾನ ಮಾಡಿ ಕಳುಹಿಸಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv