ಚಾಮರಾಜನಗರ: ವಿದ್ಯಾ ಗಣಪತಿ ವಿಸರ್ಜನಾ ಮಹೋತ್ಸವ ಕಗ್ಗಂಟಾಗಿದ್ದು, ಜಿಲ್ಲಾಡಳಿತ ಹಾಗೂ ವಿದ್ಯಾಗಣಪತಿ ಮಂಡಳಿ ನಡುವೆ ಜಟಾಪಟಿ ನಡೆಯುತ್ತಿದೆ.
ನಿಗಧಿಯಾಗಿದ್ದಂತೆ ಇಂದು ಗಣೇಶ ವಿಸರ್ಜನೆ ನಡೆಯಬೇಕಿತ್ತು. ಆದರೆ ಜಿಲ್ಲಾಧಿಕಾರಿ ಮೆರವಣಿಗೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈ ಪರಿಣಾಮ ಮೆರವಣಿಗೆ ಇಲ್ಲದೆ ವಿಸರ್ಜನೆ ಮಾಡದಿರಲು ವಿದ್ಯಾಗಣಪತಿ ಮಂಡಳಿ ನಿರ್ಧಾರ ಮಾಡಿದ್ದು, ಅನಿರ್ದಿಷ್ಟಾವಧಿವರೆಗೆ ಗಣಪತಿ ವಿಸರ್ಜನೆ ಮುಂದೂಡಿದೆ. ಇದನ್ನೂ ಓದಿ: ಆನೆ ಓಡಿಸಲು ಹೋದ ವ್ಯಕ್ತಿ ನಾಪತ್ತೆ-ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ
Advertisement
ಕೋವಿಡ್ ನಿಯಮಗಳೊಂದಿಗೆ ಸರಳ ಮೆರವಣಗೆಗೆ ಜಿಲ್ಲಾಡಳಿತ ಸಮ್ಮತಿ ಸೂಚಿಸಿತ್ತು. ಆದರೆ ಏಕಾಏಕಿ ಮೆರವಣಿಗೆ ನಿಷೇಧ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ವಿದ್ಯಾಗಣಪತಿ ಮಂಡಳಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಕೋವಿಡ್ ನಿಯಮಗಳೊಂದಿಗೆ ಸರಳವಾಗಿ ಮೆರವಣಿಗೆ ಮೂಲಕ ವಿಸರ್ಜನೆಗೆ ಜಿಲ್ಲಾಡಳಿತ ಒಪ್ಪಿಕೊಂಡಿತ್ತು. ಆದರೆ ಈಗ ಏಕಾಏಕಿ ಜಿಲ್ಲಾಡಳಿತ ಮೆರವಣಿಗೆ ನಿಷೇಧ ಮಾಡಿದ್ದು, ಲಕ್ಷಾಂತರ ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೇಲಾಧಿಕಾರಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಆರೋಗ್ಯ ನಿರೀಕ್ಷಕ
Advertisement
ಈ ಹಿನ್ನೆಲೆ ಮಂಡಳಿ ಅಧ್ಯಕ್ಷ ಚಿಕ್ಕರಾಜು ಮೆರವಣಿಗೆಗೆ ಅವಕಾಶ ನೀಡುವವರೆಗೂ ಗಣಪತಿ ವಿಸರ್ಜನೆ ಮಾಡುವುದಿಲ್ಲ. ಎಷ್ಟು ದಿನವಾದರು ಸರಿ ಎಂದು ಹೇಳಿದ್ದಾರೆ.