ಬೆಂಗಳೂರು: ಗ್ಯಾರಂಟಿ ಜಾರಿ ಸಮಿತಿಗಳ ರದ್ದತಿಗೆ ಆಗ್ರಹಿಸಿ ವಿಪಕ್ಷಗಳು ಇಂದು ಸದನದ ಒಳಗೆ ಹಾಗೂ ಹೊರಗೆ ಪ್ರತಿಭಟನೆ ನಡೆಸಿದರು.
ಕಲಾಪ ಆರಂಭಕ್ಕೆ ಮುನ್ನ ವಿಧಾನಸೌಧದ ಕೆಂಗಲ್ ಗೇಟ್ ಬಳಿ ಬಿಜೆಪಿ, ಜೆಡಿಎಸ್ ಶಾಸಕರು ಪ್ರತಿಭಟನೆ ನಡೆಸಿದರು. ಕಲಾಪ ಶುರುವಾದ ಮೇಲೆ ಸದನದ ಬಾವಿಗಿಳಿದು ಧರಣಿ ಮಾಡಿದರು. ಗ್ಯಾರಂಟಿ ಜಾರಿ ಸಮಿತಿಗಳು ಅಸಂವಿಧಾನಿಕ ರದ್ದು ಮಾಡಿ ಎಂಬ ಘೋಷಣೆ ಕೂಗಿದರು. ಇದನ್ನೂ ಓದಿ: ಕೆಪಿಎಸ್‍ಸಿ ಪರೀಕ್ಷೆ ಅವಾಂತರ – ಭಾಷಾಂತರಕಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಮ: ಸಿಎಂ
ಬಿಜೆಪಿ, ಜೆಡಿಎಸ್ ಶಾಸಕರು ವಿಧಾನಸೌಧದಿಂದ ರಾಜಭವನದವರೆಗೆ ಜಾಥ ನಡೆಸಿ, ರಾಜ್ಯಪಾಲರಿಗೆ ದೂರು ನೀಡಿದರು. ಗ್ಯಾರಂಟಿ ಜಾರಿ ಸಮಿತಿಗಳನ್ನು ಬರ್ಖಾಸ್ತು ಮಾಡಲು ಸೂಕ್ತ ನಿರ್ದೇಶನ ನೀಡುವಂತೆ ಕೋರಿದರು. ಅಲ್ಲದೇ, ಹಕ್ಕುಚ್ಯುತಿ ಮಂಡಿಸೋದಾಗಿ ವಿಜಯೇಂದ್ರ ಘೋಷಿಸಿದರು. ವಿಪಕ್ಷಗಳ ಈ ನಡೆಯನ್ನು ಸರ್ಕಾರ ಖಂಡಿಸಿತು.
ನಾವು ಶಾಸಕರ ಹಾಗೂ ಪರಿಷತ್ ಸದಸ್ಯರ ಹಕ್ಕು ಮೊಟಕು ಮಾಡುತ್ತಿಲ್ಲ. ಗ್ಯಾರಂಟಿ ಸಮಿತಿಗಳ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದರು. ಇದೇ ವೇಳೆ, ಸಿದ್ದರಾಮಯ್ಯ ಅವರು 5 ವರ್ಷ ಪೂರೈಸಲಿ ಅಂತ ನಾವು ಬಯಸುತ್ತೇವೆ ಎಂದು ಅಶೋಕ್ ವ್ಯಂಗ್ಯವಾಗಿಡಿದರು. ಇದಕ್ಕೆ, ನಾನೇ ಇರುತ್ತೇನೆ ಎಂದು ಸಿಎಂ ಸ್ಪಷ್ಟಪಡಿಸಿದರು. ಇದನ್ನೂ ಓದಿ: Pakistan Train Hijack | 150ಕ್ಕೂ ಹೆಚ್ಚು ಸೈನಿಕರ ಹತ್ಯೆ – 50ಕ್ಕೂ ಹೆಚ್ಚು ಒತ್ತೆಯಾಳುಗಳು ಗಲ್ಲಿಗೆ
ಪರಿಷತ್ ಕಲಾಪದಲ್ಲಿ ಸರ್ಕಾರದ ಅಸಲಿ ಬಂಡವಾಳ ಬಯಲಾಗಿದೆ. 2024-25ರ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಗೆ ಕೊಟ್ಟಿದ್ದ 3,000 ಕೋಟಿ ರೂ. ಅನುದಾನವನ್ನು ವಿವಿಧ ಯೋಜನೆಗಳಿಗೆ ಖರ್ಚು ಮಾಡಲು ಆರ್ಥಿಕ ಇಲಾಖೆ ಸಹಕರಿಸಲಿಲ್ಲ. ಹಣ ಕೊಡದೇ ನಾನು ಹೇಗೆ ಕೆಲಸ ಮಾಡಿಲಿ ಎಂದು ಪ್ರಶ್ನೆಯೊಂದಕ್ಕೆ ಸಚಿವ ಮಂಕಾಳ ವೈದ್ಯ ಗರಂ ಆಗಿದ್ದಾರೆ. ಇದನ್ನೂ ಓದಿ: ಯಾರಾದ್ರೂ ಬಣ್ಣ ಹಚ್ಚಿದ್ರೆ ʻಹೋಳಿ ಮುಬಾರಕ್ʼ ಹೇಳಿ – ಮುಸ್ಲಿಮರಿಗೆ ಅಯೋಧ್ಯೆಯ ಮೌಲ್ವಿ ಸಲಹೆ
2024-25ನೇ ಸಾಲಿನಲ್ಲಿ ರಾಜ್ಯ ಸರ್ಕಾರ ವಸತಿ ಯೋಜನೆಯಡಿ ಒಂದೇ ಒಂದು ಮನೆ ನಿರ್ಮಿಸಿಲ್ಲ ಎಂಬ ಸತ್ಯವನ್ನು ಸಚಿವ ಜಮೀರ್ ಅಹ್ಮದ್ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ಅವಧಿಯಲ್ಲೂ ಒಂದೇ ಒಂದು ಮನೆ ಕೊಟ್ಟಿಲ್ಲ. ಮನೆ ಕೊಟ್ಟಿರೋದು ಸಾಬೀತು ಮಾಡಿದರೆ ಈಗ್ಲೇ ರಾಜಕೀಯ ನಿವೃತ್ತಿ ತಗೆದುಕೊಳ್ಳುತ್ತೇನೆ ಎಂದು ಸಚಿವ ಜಮೀರ್ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಪಾಕ್‌ನಿಂದ ಸ್ನೈಪರ್ ದಾಳಿ – ಭಾರತದ ಯೋಧನಿಗೆ ಗಾಯ
ಇನ್ನು, ಕಳೆದ ಐದು ವರ್ಷಗಳಿಂದ ಸಾರಿಗೆ ನಿಗಮಗಳು ನಷ್ಟದಲ್ಲಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಈ ಮಧ್ಯೆಯೇ ಮಾರ್ಚ್ ತಿಂಗಳಿನಿಂದ ಅನ್ನಭಾಗ್ಯದ ಹಣದ ಬದಲು ಅಕ್ಕಿ ಕೊಡುವಂತೆ ಸರ್ಕಾರ ಆದೇಶ ನೀಡಿದೆ. ಫೆಬ್ರವರಿ ತಿಂಗಳ ಅಕ್ಕಿಯನ್ನು ಒಟ್ಟಿಗೆ ಸೇರಿಸಿ ನೀಡಲಿದೆ. ಬೆಂಗಳೂರು ಅರಮನೆ ಬಿಲ್‌ಗೆ ರಾಜ್ಯಪಾಲರ ಅಂಕಿತ ಬಿದ್ದಿದ್ದು, ಸರ್ಕಾರ ಅಧಿಸೂಚನೆ ಹೊರಡಿಸಿದೆ.