ಕತಾರ್: ಫಿಫಾ ಫುಟ್‍ಬಾಲ್ ವಿಶ್ವಕಪ್‌ನ (FIFA World Cup) ಸೆಮಿಫೈನಲ್ ಪಂದ್ಯದಲ್ಲಿ ಮೊರೊಕ್ಕೊ ವಿರುದ್ಧ ಭರ್ಜರಿ ಜಯ ಗಳಿಸಿ ಫೈನಲ್‍ಗೆ ಎಂಟ್ರಿಕೊಟ್ಟಿರುವ ಫ್ರಾನ್ಸ್ (France) ತಂಡಕ್ಕೆ ಇದೀಗ ಫೈನಲ್ (Final) ಪಂದ್ಯಕ್ಕೂ ಮುನ್ನ ವೈರಸ್ (Virus) ಕಾಡುತ್ತಿದೆ.
ಈಗಾಗಲೇ ಫಿಫಾ ವಿಶ್ವಕಪ್ ಫೈನಲ್ ಹಂತದ ವರೆಗೆ ಸಾಗಿದೆ. ಫೈನಲ್‍ಗೆ ಫ್ರಾನ್ಸ್ ಮತ್ತು ಅರ್ಜೆಂಟಿನಾ (Argentina) ತಂಡಗಳು ಲಗ್ಗೆ ಇಟ್ಟಿವೆ. ಡಿ.18 ಭಾನುವಾರ ಫೈನಲ್ ಪಂದ್ಯ ನಡೆಯಲಿದೆ. ಆದರೆ ಫೈನಲ್ ಪಂದ್ಯವಾಡಲು ಸಿದ್ಧವಾಗುತ್ತಿರುವ ಫ್ರಾನ್ಸ್ ತಂಡಕ್ಕೆ ವೈರಸ್ ಕಾಟ ಕೊಡುತ್ತಿದೆ. ಫ್ರಾನ್ಸ್‌ನ 5 ಮಂದಿ ಆಟಗಾರರು ವಿಪರೀತ ಶೀತದಿಂದ ಬಳಲುತ್ತಿದ್ದು, ಅಭ್ಯಾಸದಿಂದ ಹೊರಗುಳಿದಿದ್ದಾರೆ. ಇದನ್ನೂ ಓದಿ: ಕೇವಲ 15 ರನ್‌ಗಳಿಗೆ ಆಲೌಟ್- ಟಿ20ಯಲ್ಲೇ ಕೆಟ್ಟ ದಾಖಲೆ ಬರೆದ ಸಿಡ್ನಿ ಥಂಡರ್
ರಾಫೆಲ್ ವರಾನೆ, ಇಬ್ರಾಹಿಂ ಕೋನಾಟೆ, ದಯೋಟ್ ಉಪಮೆಕಾನೊ, ಆಡ್ರಿಯನ್ ರಾಬಿಯೊಟ್ ಮತ್ತು ಕಿಂಗ್ಸ್ಲಿ ಕೋಮನ್ ಸೇರಿ ಐವರು ಅಸ್ವಸ್ಥಗೊಂಡು ತಂಡದಿಂದ ದೂರ ಉಳಿದಿದ್ದಾರೆ. ದಯೋಟ್ ಉಪಮೆಕಾನೊ, ಆಡ್ರಿಯನ್ ರಾಬಿಯೊಟ್ ಮತ್ತು ಕಿಂಗ್ಸ್ಲಿ ಕೋಮನ್ ಮೂವರಿಗೆ ಅನಾರೋಗ್ಯ ಕಾಡಿತ್ತು. ಬಳಿಕ ರಾಫೆಲ್ ವರಾನೆ ಮತ್ತು ಇಬ್ರಾಹಿಂ ಕೋನಾಟೆಗೂ ಹರಡಿತ್ತು. ಹಾಗಾಗಿ ಈಗಾಗಲೇ ಈ ಐವರ ಮೇಲೆ ತಂಡದ ಆರೋಗ್ಯ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಇದನ್ನೂ ಓದಿ: ಡಿ.18ರ ಫೈನಲ್ ನನ್ನ ಕೊನೆಯ ವಿಶ್ವಕಪ್ ಪಂದ್ಯ – ನಿವೃತ್ತಿ ಖಚಿತಪಡಿಸಿದ ಮೆಸ್ಸಿ
ಭಾನುವಾರ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ವಿರುದ್ಧ ಫ್ರಾನ್ಸ್ ತಂಡ ಫೈನಲ್ ಪಂದ್ಯವಾಡಲಿದೆ. ಈ ಮೂಲಕ ಅರಬ್ಬರ ನಾಡಲ್ಲಿ ನವೆಂಬರ್ 20 ರಿಂದ ಆರಂಭವಾಗಿದ್ದ ಕಾಲ್ಚೆಂಡಿನಾಟ 38 ದಿನಗಳ ಕಾಲ ಯಶಸ್ವಿಯಾಗಿ ನಡೆದು ತೆರೆ ಕಾಣಲು ಸಜ್ಜಾಗಿದೆ.