ಕತಾರ್: 2015ರಲ್ಲಿ ಅಂದರೆ 7 ವರ್ಷಗಳ ಹಿಂದೆ ಅರ್ಜೆಂಟಿನಾ (Argentina) ತಂಡದ ಲಿಯೋನೆಲ್ ಮೆಸ್ಸಿ (Lionel Messi) 2022ರ ಫಿಫಾ ವಿಶ್ವಕಪ್ (FIFA World Cup 2022) ಗೆಲ್ಲುತ್ತಾರೆ ಎಂದು ವ್ಯಕ್ತಿಯೊಬ್ಬ ಮಾಡಿದ್ದ ಟ್ವೀಟ್ ಭವಿಷ್ಯ ಇದೀಗ ನಿಜವಾಗಿದ್ದು, ಮೆಸ್ಸಿ ಫಿಫಾ ವಿಶ್ವಕಪ್ ಗೆಲ್ಲುತ್ತಿದ್ದಂತೆ ಅಮ್ಮನನ್ನು (Mother) ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.
Advertisement
ಮೆಸ್ಸಿ ತನ್ನ ಫುಟ್‍ಬಾಲ್ ವೃತ್ತಿ ಜೀವನದಲ್ಲಿ ಫಿಫಾ ವಿಶ್ವಕಪ್‍ನ ಕನಸು ಕಂಡಿದ್ದರು. ಆದರೆ ಈವರೆಗೆ ಆ ಕನಸು ಕನಸಾಗಿಯೇ ಉಳಿದಿತ್ತು. ಈ ನಡುವೆ ಜೋಸ್ ಮಿಗುಯೆಲ್ ಪೊಲಾಂಕ್ (José Miguel Polanco) ಎನ್ನುವ ಟ್ವಿಟ್ಟರ್ ಬಳಕೆದಾರರೊಬ್ಬರು 2015ರ ಮಾರ್ಚ್ 21ರಂದು ಅರ್ಜೆಂಟಿನಾ ವಿಶ್ವಕಪ್ ಗೆಲ್ಲುವ ಭವಿಷ್ಯ ನುಡಿದಿದ್ದರು. 2022ರ ಡಿಸೆಂಬರ್ 18 ರಂದು ಮೆಸ್ಸಿ ವಿಶ್ವಕಪ್ ಗೆಲ್ಲಲಿದ್ದಾರೆ. 7 ವರ್ಷಗಳ ಬಳಿಕ ನಾನು ಹೇಳಿದ್ದನ್ನು ನೆನಪು ಮಾಡಿಕೊಳ್ಳಿ ಎಂದು ಟ್ವೀಟ್ ಮಾಡಿದ್ದರು. ಅದೇ ರೀತಿ ಆ ವ್ಯಕ್ತಿ ಹೇಳಿದ 2022ರ ಡಿ.18 ರಂದೇ ಮೆಸ್ಸಿ ವಿಶ್ವಕಪ್ ಗೆದ್ದಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: 10 ನಂಬರ್ ಜೆರ್ಸಿ ತಂದ ಅದೃಷ್ಟ – ಅಂದು ಸಚಿನ್, ಇಂದು ಮೆಸ್ಸಿಗಾಗಿ ವಿಶ್ವಕಪ್
Advertisement
Advertisement
ಅರ್ಜೆಂಟಿನಾ ವಿಶ್ವಕಪ್ ಗೆಲ್ಲುತ್ತಿದ್ದಂತೆ ಈ ಟ್ವೀಟ್ ವೈರಲ್ ಆಗಿದೆ. ಸ್ವತಃ ಮೆಸ್ಸಿಗೂ ಕೂಡ 7 ವರ್ಷಗಳ ಹಿಂದೆ ಈರೀತಿ ಭವಿಷ್ಯ ನುಡಿದ ಟ್ವೀಟ್ ನೋಡಿ ಅಚ್ಚರಿ ಆಗಿದೆ. ಆದರೂ ವಿಶ್ವಕಪ್ ಗೆದ್ದ ಖುಷಿಯಲ್ಲಿದ್ದ ಮೆಸ್ಸಿ ತನ್ನ ಕನಸು ನನಸು ಮಾಡಿಕೊಂಡ ಖುಷಿಯಲ್ಲಿ ಅಮ್ಮನನ್ನು ತಬ್ಬಿಕೊಂಡು ಆನಂದ ಬಾಷ್ಪ ಸುರಿಸಿದ್ದಾರೆ.
Advertisement
December 18, 2022. 34 year old Leo Messi will win the World Cup and become the greatest player of all times. Check back with me in 7 years.
— José Miguel Polanco ⭐️⭐️⭐️ (@josepolanco10) March 20, 2015
ಫೈನಲ್‍ನಲ್ಲಿ ನಾಯಕ ಮೆಸ್ಸಿ ಅವರ ಅದ್ಭುತ ಆಟದಿಂದಾಗಿ ಅರ್ಜೆಂಟಿನಾ ಪೆನಾಲ್ಟಿ ಶೂಟೌಟ್‍ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. ಕೊನೆಯ ಪಂದ್ಯದಲ್ಲಿ ಮೆಸ್ಸಿ 2 ಗೋಲ್ ಹೊಡೆದು ತಂಡಕ್ಕೆ ಜಯ ತಂದು ಕೊಡುವ ಮೂಲಕ ತಮ್ಮ ಕನಸನ್ನು ನನಸು ಮಾಡಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ ಆಟದಲ್ಲಿ ಫ್ರಾನ್ಸ್ ಪರ ಎಂಬಾಪೆ 4 ಗೋಲು ಸಿಡಿಸಿದರೂ, ಜಯ ತಂದು ಕೊಡುವಲ್ಲಿ ವಿಫಲವಾದರು. ಆದರೆ 9 ಗೋಲು ಬಾರಿಸಿ ಗೋಲ್ಡನ್ ಬೂಟ್ ಗೆಲ್ಲುವಲ್ಲಿ 23ರ ಹರೆಯದ ಎಂಬಾಪೆ (Mbappe) ಯಶಸ್ವಿಯಾಗಿ ಅಭಿಮಾನಿಗಳಿಂದ ಶಬ್ಬಾಸ್‍ಗಿರಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಹ್ಯಾಟ್ರಿಕ್ ವೀರ ಎಂಬಾಪೆಗೆ ಸಮಾಧಾನ ಹೇಳಿದ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್
https://twitter.com/jo9M24/status/1604538476656934913