Connect with us

Latest

ಇಂಡಿಯಾ ಅಂಡರ್-17 ಫಿಫಾ ವಿಶ್ವಕಪ್ ಎಂಟ್ರಿಗೆ ಕೆಲವೇ ಗಂಟೆಗಳು ಬಾಕಿ

Published

on

ನವದೆಹಲಿ: ಸಾಮಾರ್ಥ್ಯವಿದ್ದರೂ ಫುಟ್ಬಾಲ್‍ನಲ್ಲಿ ಏನನ್ನು ಸಾಧಿಸುತ್ತಿಲ್ಲ ಎಂದು ಈ ಹಿಂದೆ ಫಿಫಾದ ಟೀಕೆಗೆ ಗುರಿಯಾಗಿದ್ದ ಭಾರತ ಅಂಡರ್-17 ಫಿಫಾ ವಿಶ್ವಕಪ್ ಟೂರ್ನಿಮೆಂಟ್‍ನ್ನು ಆತಿಥ್ಯ ವಹಿಸಿಕೊಳ್ಳುವ ಮೂಲಕ ಫುಟ್ಬಾಲ್‍ನಲ್ಲಿ ಧೂಳೆಬ್ಬಿಸಲು ಇನ್ನು ಕೆಲವೇ ಗಂಟೆಗಳು ಬಾಕಿ ಇದೆ.

ಇದೇ ಮೊದಲ ಬಾರಿಗೆ ಭಾರತ ಫಿಫಾ ವಿಶ್ವಕಪ್ ಆತಿಥ್ಯ ವಹಿಸಿಕೊಂಡಿದೆ. ಮೊದಲ ದಿನವಾದ ಶುಕ್ರವಾರ ನಾಲ್ಕು ಪಂದ್ಯಗಳು ನಡೆಯಲಿದ್ದು, ದೆಹಲಿ ಹಾಗೂ ಮುಂಬೈ ಫುಟ್ಬಾಲ್ ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿದೆ. ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ ಮೂಲಕ ಆಯ್ಕೆಯಾಗಿ ಯುರೋಪ್, ಮೆಕ್ಸಿಕೋ ರಾಷ್ಟ್ರಗಳಲ್ಲಿ ಹೆಚ್ಚಿನ ತರಬೇತಿಗೆ ಪಡೆದುಕೊಂಡಿದ್ದಾರೆ.

ಗ್ರೂಪ್-ಎ ನಲ್ಲಿರುವ ನಾವು ಅಮೆರಿಕ ತಂಡದ ಜೊತೆ ಇಂದು ರಾತ್ರಿ ಆಡಲಿದ್ದೇವೆ. ನವದೆಹಲಿಯ ಜವಹರ್ ಲಾಲ್ ನೆಹರು ಸ್ಟೇಡಿಯಂನಲ್ಲಿ ಸುಮಾರು 50 ಸಾವಿರ ಪ್ರೇಕ್ಷಕರ ಎದುರು ಬಾಲ್‍ನ ಜೊತೆ ಆಡುವುದೇ ಒಂದು ಅದ್ಭುತ. ಇನ್ನೇನು ಕೆಲವೇ ಗಂಟೆಗಳಲ್ಲಿ ಭಾರತ ಫಿಫಾ ಅಂಡರ್ 17 ವರ್ಡ್ ಕಪ್‍ಗೆ ಎಂಟ್ರಿ ಕೊಡಲಿದೆ ಎಂದು ನಾಯಕ ಅಮರ್ಜಿತ್ ಸಿಂಗ್ ಸಂತಸ ವ್ಯಕ್ತಪಡಿಸಿದರು.

ಈ ಹಿಂದೆ ಜರ್ಮನ್‍ನ ನಿಕೋಲಾಯ್ ಆಡಮ್ ಭಾರತದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರನ್ನು ವಜಾಗೊಳಿಸಿದ ನಂತರ ಲೂಯಿಸ್ ನಾರ್ತನ್ ಡಿ ಮಾತೊಸ್ ಮಾರ್ಚ್‍ನಲ್ಲಿ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದರು. ಕೇವಲ ಏಳು ತಿಂಗಳಲ್ಲಿ ಭಾರತೀಯ ತಂಡವನ್ನು ಒಟ್ಟು ಗೂಡಿಸಿ ಫಿಫಾ ಪಂದ್ಯಾವಳಿಗೆ ಕಳುಹಿಸಿದ್ದಾರೆ. ಅಲ್ಲದೆ ಫುಟ್ಬಾಲ್‍ನಲ್ಲಿ ಗುರುತಿಸಿಕೊಳ್ಳಲು ಇದು ಒಂದು ಸದಾವಕಾಶ ಎಂದು ಅಮರ್ಜಿತ್ ಹೇಳಿದ್ದಾರೆ.

ಆಟಗಾರರ ಪಟ್ಟಿ:
ಧೀರಜ್ ಸಿಂಗ್, ಪ್ರಭಾಷಣ್ ಗಿಲ್, ಸನ್ನಿ ಧಲಿವಾಲ್, ಜಿತೇಂದ್ರ ಸಿಂಗ್, ಅನ್ವರ್ ಅಲಿ, ಸಂಜೀವ್ ಸ್ಟ್ಯಾಲಿನ್, ಹೆಂಡ್ರಿ ಅ್ಯಂಟೋನಿ, ನಮಿತ್ ದೇಶಪಾಂಡೆ, ಸುರೇಶ್ ಸಿಂಗ್, ನಿನ್ಥೊಯಿಂಗ್ಬಾ, ಮೀಟೀ, ಅಮರ್ಜಿತ್ ಸಿಂಗ್ ಕಿಯಾಮ್, ಅಭಿಜಿತ್ ಸರ್ಕಾರ್, ಕೋಮಲ್ ಥಟಲ್, ಲಾಲೆಂಗ್ಮಾಲಿಯಾ, ಜಾಕ್ಸನ್ ಸಿಂಗ್, ನೊಗ್ಡಾಂಬ ನೊರೆಮ್, ರಾಹುಲ್ ಕನ್ನೊಲಿ, ಪ್ರವೀಣ್, ಷಹಜಾನ್, ರಹೀಮ್ ಅಲಿ, ಅಂಕಿತ್ ಜಾದವ್.

Click to comment

Leave a Reply

Your email address will not be published. Required fields are marked *

www.publictv.in