ಪ್ಯಾರಿಸ್: ಜಾಗತಿಕ ಫುಟ್‌ಬಾಲ್ ಆಡಳಿತ ಮಂಡಳಿ ಫಿಫಾ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್(ಎಐಎಫ್‌ಎಫ್) ಅನ್ನು ಸೋಮವಾರ ಅಮಾನತುಗೊಳಿಸಿದೆ. ಫೆಡರೇಶನ್ ಹಿಂದೆ ಮೂರನೇ ವ್ಯಕ್ತಿಗಳ ಪ್ರಭಾವ ಇದೆ ಎನ್ನಲಾಗಿದ್ದು, ಇದು ಕಾನೂನುಗಳ ಗಂಭೀರ ಉಲ್ಲಂಘನೆ ಎಂದು ಫಿಫಾ ಆರೋಪಿಸಿದೆ.
ಎಐಎಫ್‌ಎಫ್‌ನ ಅಮಾನತಿನಿಂದಾಗಿ ಈ ಬಾರಿ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಬೇಕಿದ್ದ 17 ವರ್ಷದ ಒಳಗಿನ ಮಹಿಳಾ ವಿಶ್ವಕಪ್ ಟೂರ್ನಿಯನ್ನು ಮೊದಲೇ ನಿರ್ಧರಿಸಿದಂತೆ ನಡೆಸಲು ಸಾಧ್ಯವಿಲ್ಲ ಎಂದು ಫಿಫಾ ಹೇಳಿದೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದೇ ಶ್ರೀನಗರದಲ್ಲಿ 2 ಬಾರಿ ಗ್ರೆನೇಡ್ ದಾಳಿ
Advertisement
Advertisement
ಎಐಎಫ್‌ಎಫ್‌ನ ಮಾಜಿ ಮುಖ್ಯಸ್ಥ, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ತಮ್ಮ ಅಧಿಕಾರಾವಧಿಯನ್ನು ಮೀರಿ ಅಧಿಕಾರದಲ್ಲಿಯೇ ಉಳಿದುಕೊಂಡಿದ್ದರು. ಬಳಿಕ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿ ಆಡಳಿತಾಧಿಕಾರಿಗಳನ್ನು ಸುಪ್ರೀಂ ಕೋರ್ಟ್ ನೇಮಕ ಮಾಡಿತ್ತು. ಇದನ್ನೂ ಓದಿ: 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ತೆರೆ- ಅಪ್ಪು ಜಾತ್ರೆ ವೀಕ್ಷಣೆಗೆ ಹರಿದು ಬಂತು ಜನಸಾಗರ
Advertisement
2020ರಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಪಂದ್ಯಾವಳಿಯನ್ನು ಕೋವಿಡ್ ಹಿನ್ನೆಲೆ ರದ್ದುಗೊಳಿಸಲಾಗಿತ್ತು. ಈ ಬಾರಿ ಅಕ್ಟೋಬರ್ 11 ರಿಂದ 30ರ ವರೆಗೆ ಭಾರತದಲ್ಲಿ 17 ವರ್ಷದ ಒಳಗಿನ ಮಹಿಳಾ ವಿಶ್ವಕಪ್ ಪಂದ್ಯಾವಳಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಫಿಫಾ ಎಐಎಫ್‌ಎಫ್ ಅನ್ನು ಅಮಾನತುಗೊಳಿಸಿದೆ.
Advertisement
ಎಐಎಫ್‌ಎಫ್‌ನಲ್ಲಿ ಸೃಷ್ಟಿಯಾಗಿರುವ ಗೊಂದಲ ಬಗೆಹರಿಸಲು ಫಿಫಾ ಮತ್ತು ಎಎಫ್‌ಸಿ ಜೂನ್‌ನಲ್ಲಿ ಗಡುವು ನೀಡಿತ್ತು. ‘ಎಐಎಫ್‌ಎಫ್‌ಗೆ ಹೊಸದಾಗಿ ನಿಯಮಾವಳಿ ರೂಪಿಸಿ, ಜುಲೈ 31ರ ಒಳಗೆ ಅನುಮೋದನೆ ನೀಡಬೇಕು. ಸೆ.15ರ ಒಳಗಾಗಿ ಚುನಾವಣೆ ನಡೆಸಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಬೇಕು ಎಂದು ಫಿಫಾ ಸೂಚಿಸಿತ್ತು.