ಬೆಂಗಳೂರು: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್‌ಗೆ (FIFA World Cup2022) ಅದ್ಧೂರಿ ತೆರೆಬಿದ್ದಿದೆ. ಅತ್ಯಂತ ರೋಮಾಂಚಕ ಫುಟ್ಬಾಲ್ ಪಂದ್ಯಗಳಲ್ಲಿ ಇದು ವಿಶ್ವದ ಜನರ ನೆನಪಾಗಿ ಉಳಿಯಲಿದೆ.
ಚಾಂಪಿಯನ್ ಆದ ಅರ್ಜೆಂಟಿನಾದ (Argentina) ಅಬ್ಬರ, ಕೊನೆಯ ಕ್ಷಣದ ರೋಚಕತೆ, ಮೆಸ್ಸಿಯ (Lionel Messi) ಕೋಟ್ಯಂತರ ಅಭಿಮಾನಿಗಳು ಇನ್ನೂ ಅದೇ ಗುಂಗಿನಲ್ಲಿದ್ದಾರೆ. ಇದನ್ನೂ ಓದಿ: 7 ವರ್ಷಗಳ ಹಿಂದೆ ನುಡಿದ ಭವಿಷ್ಯ ನಿಜವಾಯ್ತು! – ವಿಶ್ವಕಪ್ ಗೆಲ್ಲುತ್ತಿದ್ದಂತೆ ಅಮ್ಮನನ್ನು ತಬ್ಬಿಕೊಂಡು ಕಣ್ಣೀರಿಟ್ಟ ಮೆಸ್ಸಿ
Advertisement
Advertisement
ಇನ್ನೂ ವಿಶ್ವದ ಗಮನ ಸೆಳೆದ ಕಾಲ್ಚೆಂಡು ಜಾತ್ರೆಯಲ್ಲಿ ಅನೇಕ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಕೇವಲ ನುರಿತರಿಗೆ ಮಾತ್ರ ತಾತ್ಕಾಲಿಕ ಉದ್ಯೋಗ ಸಿಗುತ್ತೆ. ಫಿಫಾ ವಿಶ್ವಕಪ್ ವೇಳೆ ತಾತ್ಕಲಿಕ ಉದ್ಯೋಗ ಗಿಟ್ಟಿಸಿಕೊಳ್ಳಲು ಬಹುತೇಕರು ಕನಸು ಕಂಡಿರ್ತಾರೆ, ಕಸರತ್ತು ಮಾಡ್ತಾರೆ. ಬೆಂಗಳೂರಿನ ಮಹಿಳೆಯೊಬ್ಬರಿಗೆ ಅನಾಯಾಸವಾಗಿ ಫುಟ್ಬಾಲ್ ವಿಶ್ವಕಪ್ ನಲ್ಲಿ ಕೆಲಸ ಮಾಡುವ ಅವಕಾಶ ದಕ್ಕಿತ್ತು.
Advertisement
Advertisement
ಹೌದು. ಕೋಟ್ಯಂತರ ಜನರ ಆರಾಧ್ಯ ಮೆಸ್ಸಿಯಿಂದ ಹಿಡಿದು ಇಡೀ ವಿಶ್ವಕಪ್ ನಲ್ಲಿ ಪಾಲ್ಗೊಂಡ ಫುಟ್ಬಾಲ್ ಟೀಮ್ ಗಳ ಸಾರಿಗೆ ವ್ಯವಸ್ಥೆಯ ಮೇಲ್ವಿಚಾರಣಾ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದು ಬೆಂಗಳೂರಿನ ಮಹಿಳೆ ಶೈನಿ. ಹಾಟ್ ಲೈನ್ ಅಧಿಕಾರಿಯಾಗಿರುವ ಬೆಂಗಳೂರಿನ ಶೈನಿ ಕತಾರ್‌ನ (Qatar) ಫಿಫಾದಲ್ಲಿ ಕ್ರೀಡಾಪಟುಗಳನ್ನು ಹೈ ಸೆಕ್ಯೂರಿಟಿ ಮೂಲಕ ಕ್ರೀಡಾಂಗಣಕ್ಕೆ ಹಾಗೂ ಅಲ್ಲಿಂದ ಹೋಟೆಲ್‌ಗೆ ಕರೆದೊಯ್ಯುವ ಜವಾಬ್ದಾರಿ ವಹಿಸಿಕೊಂಡಿದ್ದರು. ಇದನ್ನೂ ಓದಿ: ಅಭಿಮಾನಿಗಳಿಗೆ ಮತ್ತೆ ಗುಡ್‌ನ್ಯೂಸ್ ಕೊಟ್ಟ ಮ್ಯಾಜಿಕ್ ಮೆಸ್ಸಿ – ಸದ್ಯಕ್ಕಿಲ್ಲ ನಿವೃತ್ತಿ
ಇದೊಂದು ಅತ್ಯಂತ ಸವಾಲಿನ ಕೆಲಸವಾಗಿದ್ದು, ಕ್ರೀಡಾಪಟುಗಳ ಸಾರಿಗೆ ವ್ಯವಸ್ಥೆಯಲ್ಲಿ ಹಾಗೂ ಸುರಕ್ಷತೆಯಲ್ಲಿ ಕೊಂಚವೂ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸಬೇಕಾಗುತ್ತೆ. ಅನಿರೀಕ್ಷಿತವಾಗಿ ಮೊದಲ ಬಾರಿಗೆ ಈ ಜವಾಬ್ದಾರಿ ಬಂದಿದ್ದು ಖುಷಿ ತಂದಿದೆ ಅಂತಾ ಶೈನಿ ಸಂಭ್ರಮ ಹಂಚಿಕೊಂಡಿದ್ದಾರೆ. ಶೈನಿ ಕತಾರ್ ನಲ್ಲಿ ಈ ಹಿಂದೆ ಖಾಸಗಿ ಸಂಸ್ಥೆಯಲ್ಲಿಯೂ ಉದ್ಯೋಗ ನಿರ್ವಹಿಸಿದ್ದರು. ಹೀಗಾಗಿ ಈ ಬಾರಿ ವಿಶ್ವಕಪ್ ವೇಳೆ ಕಾರ್ಯನಿರ್ವಹಿಸಲು ಆಫರ್ ಬಂದಿತ್ತು. ಫಿಫಾದಲ್ಲಿ ಕರ್ತವ್ಯ ನಿರ್ವಹಿಸಿ ಶೈನಿ ಫುಲ್ ಖುಷಿಯಾಗಿದ್ದಾರೆ.