ವಾಷಿಂಗ್ಟನ್: ಫ್ಲೋರಿಡಾದ (Florida) ನೈಋತ್ಯ ಭಾಗಕ್ಕೆ ಬುಧವಾರ ಭೀಕರ ಇಯಾನ್ ಚಂಡಮಾರುತ (Ian Hurricane) ಅಪ್ಪಳಿಸಿದ್ದು, ದೊಡ್ಡ ಅನಾಹುತವೇ ಸೃಷ್ಟಿಯಾಗಿದೆ. ಚಂಡಮಾರುತದ (Hurricane) ಪರಿಣಾಮ ಫ್ಲೋರಿಡಾದ ಬಹುತೇಕ ಭಾಗ ಕತ್ತಲೆಯಲ್ಲಿ ಮುಳುಗಿದೆ.
ನೂರಾರು ಮನೆಗಳು ಸೇರಿದಂತೆ ಹಲವರು ಈ ಚಂಡಮಾರುತಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಸಮುದ್ರಕ್ಕೆ ತೆರಳಿದ್ದ ದೋಣಿಯೊಂದು ಮುಳುಗಡೆಯಾಗಿದ್ದು, 20 ಜನರು ನಾಪತ್ತೆಯಾಗಿದ್ದಾರೆ. ಫ್ಲೋರಿಡಾದ ಕೀಸ್ ದ್ವೀಪದಲ್ಲಿ ನಾಲ್ವರು ಕ್ಯೂಬನ್ನರು ಈಜಿಕೊಂಡು ಬರುತ್ತಿದ್ದುದನ್ನು ಕಂಡು ಅವರಲ್ಲಿ ಮೂವರನ್ನು ಕರಾವಳಿಯ ಪಡೆ ರಕ್ಷಿಸಿದೆ ಎಂದು ವರದಿಯಾಗಿದೆ.
Advertisement
Advertisement
80,000 ಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಫೋರ್ಟ್ ಮೈಯರ್ಸ್ ಪ್ರದೇಶದಲ್ಲಿ ಮಳೆ, ಗಾಳಿಗೆ ಪ್ರವಾಹದ ಸ್ಥಿತಿ ಉಂಟಾಗಿ ಪ್ರದೇಶ ಸರೋವರದಂತೆ ಗೋಚರವಾಗುತ್ತಿದೆ. ರಾಜ್ಯದ ನೈಋತ್ಯ ಭಾಗದಲ್ಲಿ ಹೆಚ್ಚಿನ ಹಾನಿಗಳು ಸಂಭವಿಸಿದ್ದು, ಅಲ್ಲಿನ 1 ಕೋಟಿ ಜನಸಂಖ್ಯೆಯಲ್ಲಿ ಸುಮಾರು 20 ಲಕ್ಷ ಜನರು ನಿನ್ನೆ ಸಂಜೆಯಿಂದ ವಿದ್ಯುತ್ ಇಲ್ಲದೇ ದಿನ ದೂಡುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮನೆ ಬಾಗಿಲಿಗೆ ಪಡಿತರ – ಮಮತಾ ಬ್ಯಾನರ್ಜಿಯ ನೂತನ ಯೋಜನೆ ಕಾನೂನುಬಾಹಿರ ಎಂದ ಹೈಕೋರ್ಟ್
Advertisement
Advertisement
ಇಯಾನ್ ಚಂಡಮಾರುತ ಪ್ರಾರಂಭವಾದಾಗಲೇ ಗಂಟೆಗೆ 240 ಕಿ.ಮೀ ವೇಗದಲ್ಲಿ ಗಾಳಿ ಬೀಸಲಾರಂಭಿಸಿದೆ. ಫ್ಲೋರಿಡಾ ಈ ಹಿಂದೆ ಹಲವು ವರ್ಷಗಳಿಂದ ಕಾಣದೇ ಇದ್ದ ಚಂಡಮಾರುತವನ್ನು ಈಗ ಅನುಭವಿಸುತ್ತಿದೆ. ಇದು ಇನ್ನೂ 2 ದಿನಗಳವರೆಗೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ: 8 ಗಂಟೆ ಅಂತರದಲ್ಲಿ 2 ಬಸ್‌ಗಳಲ್ಲಿ ಸ್ಫೋಟ