1 ಎಸೆತದಲ್ಲಿ 5 ರನ್ ಬೇಕಾಗಿದ್ದಾಗ ಫೀಲ್ಡರ್ ಮಾಡಿದ ಎಡವಟ್ಟಿನಿಂದಾಗಿ ಎದುರಾಳಿ ತಂಡದ ಆಟಗಾರರು ಐದು ರನ್ ಓಡಿ ಪಂದ್ಯ ಗೆದ್ದ ವೀಡಿಯೋ ಒಂದು ವೈರಲ್ ಆಗುತ್ತಿದೆ.
Advertisement
ಹೌದು ಕ್ರಿಕೆಟ್‍ನಲ್ಲಿ ಕೆಲವೊಂದು ಬಾರಿ ಕೊನೆಯ ಬಾಲ್ ವರೆಗೂ ಪಂದ್ಯ ರೋಚಕವಾಗಿ ಕೂಡಿ ಅಭಿಮಾನಿಗಳನ್ನು ರಂಜಿಸುವುದನ್ನು ನೋಡಿದ್ದೇವೆ. ಕೊನೆಯ ಬಾಲ್‍ನಲ್ಲಿ ಬೌಂಡರಿ, ಸಿಕ್ಸ್ ಸಿಡಿಸಿ ಪಂದ್ಯ ಗೆಲ್ಲುವುದನ್ನು ನೋಡಿದ್ದೇವೆ. ಅಲ್ಲದೇ ಕೊನೆಯ ಎಸೆತದಲ್ಲಿ ಟೈ ಆಗಿರುವ ನಿದರ್ಶನಗಳು ಇವೆ. ಈ ಎಲ್ಲದರ ನಡುವೆ ಇಲ್ಲೊಂದು ಕ್ರಿಕೆಟ್ ಪಂದ್ಯ ಬಹಳ ರೋಚಕವಾಗಿ ಅಂತ್ಯವಾಗಿದೆ. ಇದೀಗ ಈ ಪಂದ್ಯದ ಆ ರಣರೋಚಕ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: U -19 World Cup 2022: 96 ರನ್‌ಗಳ ಭರ್ಜರಿ ಜಯ, ಫೈನಲಿಗೆ ಭಾರತ
Advertisement
Al-Wakeel Cricket Leagueನಲ್ಲಿ ಆಡಿಯೋನಿಕ್ ಮತ್ತು ಆಟೋಮಾಲ್ ತಂಡಗಳು ತಂಡಗಳು ಆಡುತ್ತಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಆಡಿಯೋನಿಕ್ ತಂಡ 154 ರನ್ ಬಾರಿಸಿತು. 155 ರನ್ ಟಾರ್ಗೆಟ್ ಪಡೆದ ಆಟೋಮಾಲ್ ತಂಡಕ್ಕೆ ಕೊನೆಯ ಎಸೆತದಲ್ಲಿ 5 ರನ್ ಬೇಕಿತ್ತು.
Advertisement
Advertisement
ಸ್ಟೈಕ್‍ನಲ್ಲಿದ್ದ ಆಟಗಾರ ಬಲವಾಗಿ ಲಾಂಗ್‍ಆಫ್‍ನತ್ತ ಚೆಂಡನ್ನು ಬಾರಿಸಿ ಓಡಲು ಆರಂಭಿಸಿದ್ದಾನೆ. ಲಾಂಗ್‍ಆಫ್‍ನಲ್ಲಿದ್ದ ಫೀಲ್ಡರ್ ಕೈಗೆ ತಲುಪಿದ ಚೆಂಡನ್ನು ಕೀಪರ್‌ಗೆ ಎಸೆಯದೆ ಬಾಲ್ ಹಿಡಿದುಕೊಂಡು ಫೀಲ್ಡರ್ ನಾನ್‍ಸ್ಟ್ರೈಕ್‌ಗೆ ಓಡಿಕೊಂಡು ಬಂದಿದ್ದಾನೆ. ಈ ವೇಳೆ ಬ್ಯಾಟ್ಸ್‌ಮ್ಯಾನ್‌ಗಳು ಎರಡು ರನ್ ಓಡಿದ್ದರು. ಮೂರನೇ ರನ್‍ಗಾಗಿ ಸ್ಟ್ರೈಕ್‌ನಲ್ಲಿದ್ದ ಆಟಗಾರ ಓಟ ಆರಂಭಿಸಿದ್ದಾನೆ ಈ ವೇಳೆ ನಾನ್‍ಸ್ಟ್ರೈಕ್‌ನಲ್ಲಿದ್ದ ಆಟಗಾರ ಅಲ್ಲೇ ನಿಂತಿದ್ದ. ಫೀಲ್ಡರ್ ಬಾಲ್‍ನ್ನು ವಿಕೆಟ್‍ಗೆ ಹೊಡೆಯುತ್ತಿದ್ದಂತೆ ನಾನ್‍ಸ್ಟ್ರೈಕ್‌ನಲ್ಲಿದ್ದ ಆಟಗಾರ ಸ್ಟೈಕ್‍ಗೆ ಓಡಿದ್ದಾನೆ. ಈ ವೇಳೆ ಬಾಲ್ ಹಿಡಿದಿದ್ದ ಫೀಲ್ಡರ್ ಬ್ಯಾಟ್ಸ್‌ಮ್ಯಾನ್‌ನ ಹಿಂದೆ ಓಡಿ ವಿಕೆಟ್‍ಗೆ ಬಾಲ್ ಹೊಡೆಯಲು ಪ್ರಯತ್ನಿಸಿದ್ದಾನೆ ಆದರೆ ಬಾಲ್ ವಿಕೆಟ್‍ಗೆ ತಾಗದೆ ಮುಂದೆ ಸಾಗಿದೆ. ಈ ಮಧ್ಯೆ ಬ್ಯಾಟ್ಸ್‌ಮ್ಯಾನ್‌ಗಳು ಐದು ರನ್ ಓಡಿ ಪಂದ್ಯ ಗೆದ್ದು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ