ಮಂಗಳೂರು: ನಗರದ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ವರ್ತನೆ ತೋರಿದ ಯುವಕ, ಯುವತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Advertisement
ನಿನ್ನೆ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಕೂತಿದ್ದ ಯುವಕನಿಗೆ ಬೆಂಗಳೂರಿಗೆ ಹೊರಟಿದ್ದ ಯುವತಿಯೊಬ್ಬಳು ವಿಮಾನ ನಿಲ್ದಾಣದಿಂದಲೇ ‘ಯು ಆರ್ ಎ ಬಾಂಬರ್’ ಎಂದು ಮೆಸೇಜ್ ಮಾಡಿದ್ಲು. ಇದನ್ನು ಪಕ್ಕದ ಸೀಟ್‍ನಲ್ಲಿ ಕೂತಿದ್ದ ಮಹಿಳೆ ಗಮನಿಸಿ, ಏರ್‌ಲೈನ್ಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ರು. ಹೀಗಾಗಿ ಟೇಕಾಫ್‍ಗೆ ರೆಡಿಯಾಗಿದ್ದ ವಿಮಾನ ನಿಲ್ಲಿಸಿ, ಪ್ರಯಾಣಿಕರ ತಪಾಸಣೆ ನಡೆಸಲಾಯಿತು. ಇದನ್ನೂ ಓದಿ: ನೃತ್ಯದಲ್ಲಿ ಸಾವರ್ಕರ್ ಫೋಟೋ – ಮುಖ್ಯೋಪಾಧ್ಯಾಯರನ್ನು ಕರೆಸಿ ಕ್ಷಮೆ ಹೇಳಿಸಿದ ಪಂಚಾಯತ್
Advertisement
Advertisement
ಉತ್ತರ ಪ್ರದೇಶದ ದೀಪಯಾನ್ ಮಾಂಜಿ, ಯುವತಿ ಸಿಮ್ರಾನ್‍ರನ್ನು ಬಜ್ಪೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ರು. ದೀಪನ್ ಮುಂಬೈಗೆ ಪ್ರಯಾಣಿಸುತ್ತಿದ್ದರು. ಸಿಮ್ರಾನ್ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಇತರ ಪ್ರಯಾಣಿಕರನ್ನು ಸ್ಥಳಾಂತರಿಸಿ ಇವರಿಬ್ಬರನ್ನು ವಿಚಾರಣೆಗೆ ಒಳಪಡಿಸಿದರು. ಈ ವೇಳೆ ನಾವಿಬ್ಬರು ಸ್ನೇಹಿತರು. ತಮಾಷೆಗೆ ಈ ರೀತಿ ಮೆಸೇಜ್ ಮಾಡಿದ್ದು ಎಂದು ಸ್ಪಷ್ಟನೆ ಕೊಟ್ಟರು ನಂತರ ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಯಿತು. ಈ ಘಟನೆಯಿಂದಾಗಿ ವಿಮಾನ 6 ಗಂಟೆಗಳ ಕಾಲ ವಿಳಂಬವಾಗಿ ಟೇಕ್ ಆಫ್ ಆಯಿತ್ತು. ಇದನ್ನೂ ಓದಿ: ಧ್ವಜಾರೋಹಣ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ನಿವೃತ್ತ ಸೈನಿಕ
Advertisement
Live Tv
[brid partner=56869869 player=32851 video=960834 autoplay=true]