ನವದೆಹಲಿ: ನಟ ರಾಹುಲ್ ಬೋಸ್ ಅವರಿಂದ 2 ಬಾಳೆಹಣ್ಣಿಗೆ 442 ರೂ. ಪಡೆದಿದ್ದ ಹೋಟೆಲ್ ನಡೆಯನ್ನು ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಶೀಯೇಷನ್ಸ್ ಆಫ್ ಇಂಡಿಯಾ (FHRAI) ಸಮರ್ಥಿಸಿಕೊಂಡಿದೆ. 442 ರೂ. ಪಡೆದಿದ್ದು ಯಾವುದೇ ಕಾನೂನು ಬಾಹಿರ ಕೆಲಸವಲ್ಲ ಎಂದು ತಿಳಿಸಿದೆ.
ಬಾಳೆಹಣ್ಣಿನ ಮೇಲೆ ಶೇ.18 ಜಿಎಸ್‍ಟಿ ಪಡೆಯೋದು ತಪ್ಪಲ್ಲ, ಅದು ಕಾನೂನಿನ ಅನಿವಾರ್ಯವಾಗಿದೆ. ಜೆಡಬ್ಲ್ಯೂ ಮ್ಯಾರಿಯಟ್ ಚೈನ್ ಹೋಟೆಲ್ ದೇಶದ ಹಲವು ನಗರಗಳಲ್ಲಿದೆ. ಈ ಎಲ್ಲ ಹೋಟೆಲ್ ಗಳಲ್ಲಿ ಪ್ರಮಾಣೀಕೃತ ಉತ್ತಮ ಶ್ರೇಣಿಯ (Standard operating procedure) ಸೇವೆಯನ್ನು ನೀಡಲಾಗುತ್ತದೆ. ಈ ರೀತಿಯ ಹೋಟೆಲ್ ಗಳು ಕೇವಲ ಹಣ್ಣು, ತರಕಾರಿ ತಂದು ನೇರವಾಗಿ ನೀಡಲ್ಲ. ಸುಸಜ್ಜಿತವಾಗಿ ಸ್ವಚ್ಛವಾದ ಪ್ಲೇಟ್ ನಲ್ಲಿರಿಸಿ ಗ್ರಾಹಕರು ವಾಸ್ತವ್ಯ ಹೂಡಿರುವ ಕೋಣೆಗೆ ತಲುಪಿಸುತ್ತದೆ. ಇದರ ಜೊತೆಗೆ ಪಾನೀಯ ಹಾಗು ಇತರೆ ಖಾದ್ಯಗಳನ್ನು ಜೊತೆಯಾಗಿ ನೀಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಫೆಡರೇಶನ್ ಹೇಳಿದೆ.
Advertisement
Advertisement
ಅಂಗಡಿಗಳಲ್ಲಿ ಮಾರುಕಟ್ಟೆಯ ಬೆಲೆ ನೀಡಿ ವಸ್ತುಗಳನ್ನು ಖರೀದಿಸಲಾಗುತ್ತದೆ. ಹೋಟೆಲ್ ನಲ್ಲಿ ಪ್ಲೇಟ್ ಜೊತೆಗೆ ವಿವಿಧ ಚಮಚಗಳು (Cutlery) ಮತ್ತು ಸ್ವಚ್ಛತೆಯಿಂದ ಕೂಡಿದ ಸೇವೆಯ ಜೊತೆಗೆ ಐಷಾರಾಮಿ ಅನುಭವದೊಂದಿಗೆ ಗ್ರಾಹಕರು ಕೇಳಿದ ವಸ್ತು ಲಭ್ಯವಾಗುತ್ತದೆ. ರಸ್ತೆ ಬದಿಯಲ್ಲಿ 10 ರೂ.ಗೆ ಕಾಫಿ ಸಿಕ್ಕರೆ, ಅದೇ ಲಕ್ಷುರಿ ಹೋಟೆಲ್ ಗಳಲ್ಲಿ 250 ರೂ. ಸಿಗುತ್ತದೆ ಎಂದು ಫೆಡರೇಶನ್ ಉಪಾಧ್ಯಕ್ಷ ಗುರುಭಕ್ಷೀಶ್ ಸಿಂಗ್ ಕೊಹ್ಲಿ ಹೇಳಿದ್ದಾರೆ.
Advertisement
ನಟ ರಾಹುಲ್ ಬೋಸ್ 2 ಬಾಳೆಹಣ್ಣಿಗೆ 442 ರೂ. ಬಿಲ್ ನೀಡಿರುವ ವಿಡಿಯೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ವಿಡಿಯೋದಲ್ಲಿ ನೀವು ಇದನ್ನು ನೋಡಿ ನಂಬಲೇ ಬೇಕು. ಹಣ್ಣು ಆರೋಗ್ಯಕ್ಕೆ ಹಾನಿಕರವಲ್ಲವೆಂದು ಯಾರು ಹೇಳಿದ್ದು? ಎಂದು ಹೋಟೆಲನ್ನು ಟ್ಯಾಂಗ್ ಮಾಡಿ ವ್ಯಂಗ್ಯವಾಡಿದ್ದರು.