ದೀಪಾವಳಿಯನ್ನು ಸಾಮಾನ್ಯವಾಗಿ “ಬೆಳಕುಗಳ ಹಬ್ಬ” ಎಂದು ಕರೆಯಲಾಗುತ್ತದೆ, ಇದು ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಉತ್ಸಾಹ ಮತ್ತು ವಿಜೃಂಭಣೆಯೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಧರ‍್ಮಿಕವಾಗಿ ಹಾಗೂ ಭೌಗೋಳಿಕವಾಗಿ ಈ ಹಬ್ಬವು ವಿಭನ್ನತೆಯನ್ನು ಹೊಂದಿದೆ.
ಲಂಕಾದ ರಾಕ್ಷಸ ರಾಜನಾದ ರಾವಣನ ಮೇಲೆ ವಿಜಯದ ನಂತರ ಭಗವಾನ್ ರಾಮನು ಅಯೋಧ್ಯೆಗೆ ಹಿಂದಿರುಗಿದ ದಿನವನ್ನು ದೀಪಾವಳಿಯಾಗಿ ಆಚರಿಸಲಾಗುತ್ತದೆ. ದೇಶಾದ್ಯಂತ ಹಬ್ಬದ ಆಚರಣೆಯು ವೈವಿಧ್ಯತೆಯಿಂದ ಕೂಡಿದ್ದು, ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಪತ್ರಿಯೊಂದು ಸ್ಥಳದಲ್ಲಿಯೂ ಮೆರಗನ್ನು ಹೆಚ್ಚಿಸುವ ಹಬ್ಬ ಇದಾಗಿದೆ.
Advertisement
ಇಡೀ ರಾಷ್ಟ್ರವು ಉತ್ಸಾಹದಿಂದ ದೀಪಾವಳಿಯನ್ನು ಆಚರಿಸುತ್ತಿರುವಾಗ, ಕೆಲವು ಪವಿತ್ರ ಸ್ಥಳಗಳಲ್ಲಿ ವಿಶೇಷವಾಗಿ ರೋಮಾಂಚಕ ವಾತಾವರಣದೊಂದಿಗೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಾರತದ ಕೆಲವು ಸ್ಥಳಗಳಲ್ಲಿ ಮರೆಯಲಾಗದ ದೀಪಾವಳಿಯ ಅನುಭವವನ್ನು ನೀಡುತ್ತವೆ. ಬೆಳಕಿನ ಹಬ್ಬ ದೀಪಾವಳಿಯಲ್ಲಿ ಬೆಳಕೆಂಬ ಭರವಸೆಯೊಂದಿಗೆ ಕತ್ತಲೆಯ ಭಯವನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
Advertisement
ದೇಶದಲ್ಲಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವ ಕೆಲವು ಪ್ರಮುಖ ನಗರಗಳು ಇಲ್ಲಿವೆ.
ಅಯೋಧ್ಯೆ:
ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿನ ದೀಪಾವಳಿ ನೋಡುತ್ತಲೇ ಅದರಲ್ಲಿ ತಲ್ಲೀನರಾಗಿ ಬಿಡುತ್ತೇವೆ.
ಲಕ್ಷಾಂತರ ಮಣ್ಣಿನ ದೀಪಗಳು, ಮೇಣದಬತ್ತಿಗಳು ಪ್ರತಿ ಮೂಲೆಯನ್ನು ಬೆಳಗಿಸುವ ಮೂಲಕ ನಗರವನ್ನು ಪ್ರಕಾಶಮಾನವಾಗಿಸುತ್ತದೆ. ಭವ್ಯವಾದ ರಾಮ್ ಲೀಲಾ ಮರ‍್ತಿಯು ಪ್ರವಾಸಿಗರನ್ನು ರ‍್ಕಷಿಸುತ್ತದೆ. ದೀಪಗಳಿಂದ ಸೃಷ್ಟಿಯಾದ ಮನಮೋಹಕ ದೃಶ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಶ್ರೀರಾಮನು ತನ್ನ ವನವಾಸದಿಂದ ಹಿಂದಿರುಗಿದ ಮತ್ತು ಅವನ ಪಟ್ಟಾಭಿಷೇಕವನ್ನು ಗುರುತಿಸುವಲ್ಲಿ ಮಹತ್ವ ಅಡಗಿದೆ.
Advertisement
Advertisement
ವಾರಣಾಸಿ:
ಭಾರತದ ಆಧ್ಯಾತ್ಮಿಕ ರಾಜಧಾನಿ ವಾರಣಾಸಿಯಲ್ಲಿ ದೀಪಾವಳಿಯು ವಿಭಿನ್ನ ಅನುಭವವಾಗಿದೆ. ಗಂಗಾ ನದಿಯ ಉದ್ದಕ್ಕೂ ಇರುವ ಘಾಟ್‌ಗಳು ದೀಪಗಳಿಂದ ಮಿನುಗುತ್ತಿರುತ್ತವೆ. ಭಕ್ತರು ಪ್ರರ‍್ಥಿಸುತ್ತಾ, ಸಾವಿರಾರು ಎಣ್ಣೆ ದೀಪಗಳನ್ನು ಬೆಳಗಿಸುತ್ತಾರೆ. ಗಾಳಿಯು ಪವಿತ್ರ ಸ್ತೋತ್ರಗಳೊಂದಿಗೆ ಪ್ರತಿಧ್ವನಿಸುತ್ತದೆ. ವಾತಾವರಣವು ಆಧ್ಯಾತ್ಮಿಕ ಶಕ್ತಿಯಿಂದ ತುಂಬಿಕೊಂಡಿರುತ್ತದೆ. ವಾರಣಾಸಿಯ ದೀಪಾವಳಿಯು ಅದರ ಆಧ್ಯಾತ್ಮಿಕ ಸಾರಕ್ಕೆ ಬಹಳ ಮಹತ್ವದ್ದಾಗಿದೆ. ಏಕೆಂದರೆ ಈ ಸಮಯದಲ್ಲಿ ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡುವುದು ಪಾಪಗಳನ್ನು ತೊಳೆದು ಆತ್ಮವನ್ನು ಶುದ್ಧಗೊಳಿಸುತ್ತದೆ ಎಂದು ನಂಬಲಾಗಿದೆ.
ಜೈಪುರ:
ದೀಪಾವಳಿಯ ಸಮಯದಲ್ಲಿ ಜೈಪುರ ರಾಜ ವೈಭವದಿಂದ ಕಂಗೊಳಿಸುತ್ತಿದೆ. ಇಡೀ ನಗರವು ರೋಮಾಂಚಕ ದೀಪಗಳು ಮತ್ತು ಅಲಂಕಾರದಿಂದ ತುಂಬಿ ತುಳುಕುತ್ತಿರುತ್ತದೆ. ಸಿಟಿ ಪ್ಯಾಲೇಸ್, ಹವಾ ಮಹಲ್ ಮತ್ತು ವಿವಿಧ ಕೋಟೆಗಳು ಮತ್ತು ಅರಮನೆಗಳು ವಿಭಿನ್ನ ದೃಶ್ಯವನ್ನು ಪರ‍್ಶಿಸುತ್ತದೆ. ಪಟಾಕಿಗಳು ರಾತ್ರಿಯ ಆಕಾಶವನ್ನು ಬೆಳಗಿಸಿ, ವೈಭವವನ್ನು ಹೆಚ್ಚಿಸುತ್ತವೆ. ಜೈಪುರದ ದೀಪಾವಳಿಯು ರಾಜಸ್ಥಾನದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಆಚರಿಸುವ ರಾಜಮನೆತನದ ಮೌಲ್ಯವನ್ನು ಬಿತ್ತರಿಸುತ್ತದೆ.
ಅಮೃತಸರ:
ಸಿಖ್ ಧರ್ಮದ ಆಧ್ಯಾತ್ಮಿಕ ಹೃದಯವೆಂದರೆ ಅದು ಅಮೃತಸರ. ಅತ್ಯಂತ ಪವಿತ್ರವಾದ ಸಿಖ್ ದೇಗುಲವಾದ ಗೋಲ್ಡನ್ ಟೆಂಪಲ್, ಅಮೃತ ಸರೋವರದಲ್ಲಿ ದೀಪಗಳ ಪ್ರತಿಬಿಂಬ ಅದ್ಭುತವಾಗಿ ಪ್ರಕಾಶಿಸುತ್ತಿರುತ್ತದೆ. ಸಿಖ್ಖರು ಪ್ರಾರ್ಥನೆ, ಸಮುದಾಯದ ಊಟದಲ್ಲಿ ತೊಡಗಿ, ಉತ್ಸಾಹದಿಂದ ಹಬ್ಬವನ್ನು ಆಚರಿಸುತ್ತಾರೆ. ಗುರು ಹರಗೋಬಿಂದ್ ಅವರನ್ನು ಸೆರೆವಾಸದಿಂದ ಬಿಡುಗಡೆಗೊಳಿಸಿದ ದಿನವನ್ನು ದೀಪಾವಳಿಯನ್ನಾಗಿ ಆಚರಿಸುತ್ತಾರೆ. ಅದಕ್ಕೆ ದೀಪಾಚಳಿ ಇಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಇದು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ತೋರಿಸುತ್ತದೆ.
ಉದಯಪುರ:
ಸರೋವರಗಳ ನಗರವಾದ ಉದಯಪುರವು ದೀಪಾವಳಿಯ ಸಮಯದಲ್ಲಿ ಪ್ರಶಾಂತ ವಾತಾವರಣವನ್ನು ಹೊಂದಿರುತ್ತದೆ. ಅದ್ಭುತವಾದ ಅರಮನೆಗಳು ಮತ್ತು ಪ್ರಶಾಂತ ಸರೋವರಗಳು ಭವ್ಯವಾದ ಆಚರಣೆಗಳಿಗೆ ಸಂಭ್ರಮಿಸುತ್ತಿರುತ್ತದೆ. ಸಿಟಿ ಪ್ಯಾಲೇಸ್ ಮತ್ತು ಪಿಚೋಲಾ ಸರೋವರವು ಸುಂದರವಾಗಿ ಪ್ರಕಾಶಿಸಲ್ಪಟ್ಟಿರುತ್ತದೆ. ಇದು ಮಾಂತ್ರಿಕ ವಾತಾವರಣವನ್ನು ಸೃಷ್ಟಿಸುವುದಲ್ಲದೇ ಉದಯಪುರದಲ್ಲಿ ದೀಪಾವಳಿಯು ಹಬ್ಬದ ರಾಜಮನೆತನದ ಆಕರ್ಷಣೆಯನ್ನು ಸೂಚಿಸುತ್ತದೆ. ಇದು ರಾಜಮನೆತನದ ಸಾರವನ್ನು ಎತ್ತಿಹಿಡಿಯುತ್ತದೆ.
ಕೋಲ್ಕತ್ತಾ:
ದೀಪಾವಳಿಯನ್ನು ವಿಶೇಷವಾಗಿ ಹೂಗ್ಲಿ ನದಿಯ ದಡದಲ್ಲಿ ವೈಭವದಿಂದ ಆಚರಿಸಲಾಗುತ್ತದೆ. ಅಲಂಕಾರಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಅದ್ಭುತ ಮೆರವಣಿಗೆಗಳು ನಗರವನ್ನು ಶಕ್ತಿ ಮತ್ತು ಬಣ್ಣದಿಂದ ವಿಜೃಂಭಿಸುತ್ತದೆ. ದೀಪಾವಳಿಯ ಸಂರ‍್ಭದಲ್ಲಿ ಹೌರಾ ಸೇತುವೆ ಮತ್ತು ವಿಕ್ಟೋರಿಯಾ ಸ್ಮಾರಕವು ನೋಡಲೇಬೇಕಾದ ಆಕರ್ಷಣೆಯ ಸ್ಥಳಗಳು. ಕೋಲ್ಕತ್ತಾದಲ್ಲಿ ದೀಪಾವಳಿಯು ಸಂಸ್ಕೃತಿಗಳ ಏಕತೆಯನ್ನು ಸೂಚಿಸುತ್ತದೆ, ವಿವಿಧ ಹಿನ್ನೆಲೆಯ ಜನರು ಒಟ್ಟಾಗಿ ಹಬ್ಬವನ್ನು ಸಂತೋಷ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ.
ದೀಪಾವಳಿಯು ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುವ ಹಬ್ಬವಾಗಿದೆ. ದೀಪಾವಳಿಯ ಸಮಯದಲ್ಲಿ ಈ ನಗರಗಳಿಗೆ ಭೀಟಿ ನೀಡುವುದು ಮರೆಯಲಾಗದ ಸಾಂಸ್ಕೃತಿಕ ಅನುಭವವನ್ನು ನೀಡುತ್ತದೆ.