– ವಯಸ್ಸಿನ ಭೇದವಿಲ್ಲದೆ ಕಣಕ್ಕಿಳಿದ ಕಲಿಗಳು
ಚಿಕ್ಕಮಗಳೂರು: 21 ವರ್ಷಗಳ ಬಳಿಕ ನಡೆಯುತ್ತಿರುವ ಚಿಕ್ಕಮಗಳೂರು ಉತ್ಸವದ ಅಂಗವಾಗಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಮಲೆನಾಡಿಗರು ಎಂಜಾಯ್ ಮಾಡುತ್ತಿದ್ದಾರೆ.
ಇದೇ ತಿಂಗಳ 28, 29 ಹಾಗೂ ಮಾರ್ಚ್ 1ರಂದು ಚಿಕ್ಕಮಗಳೂರು ಉತ್ಸವ ನಡೆಯಲಿದ್ದು, ಅದಕ್ಕಾಗಿ ಕಾಫಿನಾಡಿಗರಿಗೆ ಹತ್ತಾರು ಕ್ರೀಡೆಗಳನ್ನು ಆಯೋಜಿಸಲಾಗಿದೆ. ಅಡ್ವೆಂಚರಸ್ ಗೇಮ್‍ಗಳನ್ನು ಜನ ಎಂಜಾಯ್ ಮಾಡುತ್ತಿದ್ದಾರೆ. ಹಗ್ಗದಲ್ಲಿ ಜಾರೋ ಜಿಪ್ ಲೈನ್ ಗೇಮಲ್ಲಿ ಯುವಕ-ಯುವತಿಯರು ಹೊಸ ಅನುಭವ ಪಡೆಯುತ್ತಿದ್ದಾರೆ. ದೊಡ್ಡವರಷ್ಟೇ ಅಲ್ಲದೆ ಮಕ್ಕಳು ಕೂಡ ಜಿಪ್ ಲೈನ್ ಸೇರಿದಂತೆ ಅಡ್ವೆಂಚರಸ್ ಕ್ರೀಡೆಯಲ್ಲಿ ಭಾಗಿಯಾಗಿ ಖುಷಿಪಡುತ್ತಿದ್ದಾರೆ.
Advertisement
Advertisement
ಇದಕ್ಕೆ ಜೊತೆಗೆ ಚಿಕ್ಕಮಗಳೂರು ನಗರಕ್ಕೆ ಹೊಂದಿಕೊಂಡಂತಿರುವ ನಲ್ಲೂರು ಕೆರೆಯಲ್ಲಿ ವಾಟರ್ ಸ್ಪೋರ್ಟ್ಸ್ ಆಯೋಜಿಸಲಾಗಿತ್ತು. ಇಲ್ಲೂ ಕೂಡ ಸಾಹಸಿ ಪ್ರಿಯರು ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ನೀರಿನ ಮೇಲೆ ವಾಟರ್ ಬೈಕ್‍ಗಳಲ್ಲಿ ತೇಲ್ತ ಜಗವನ್ನೇ ಮರೆಯುತ್ತಿದ್ದಾರೆ. ಸರ್. ಇನ್ನೊಂದು ರೌಂಡ್ ಪ್ಲೀಸ್ ಎಂದು ಗೋಗರೆಯುತ್ತಿದ್ದಾರೆ. ನೀರಿನ ಮೇಲೆ ಥ್ರಿಲ್ಲಿಂಗ್ ಬೈಕ್ ರೈಡ್ ಮಾಡಿ ವಾವ್, ಸೂಪರ್ ಎಂದು ಹೇಳುತ್ತಿದ್ದಾರೆ. ಜೊತೆಗೆ ಸ್ಟ್ರೀಟ್ ಬೋಟಿಂಗ್, ಬನಾನಾ ಬೋಟ್ ರೈಡ್, ಸ್ಕಯಿಂಗ್, ವಾಟರ್ ಜಾಬ್ರಿಂಗ್ ಸೇರಿದಂತೆ ಅನೇಕ ಜಲಕ್ರೀಡೆಗಳಲ್ಲಿ ಭಾಗಿಯಾಗಿ ಹೊಸ ಅನುಭವ ಪಡೆಯುತ್ತಿದ್ದಾರೆ.
Advertisement
Advertisement
ವಾಟರ್ ಸ್ಪೋರ್ಟ್ಸ್ ನಲ್ಲೂ ಚಿಕ್ಕ-ಚಿಕ್ಕ ಮಕ್ಕಳು ಹಾಗೂ ದೊಡ್ಡವರು ಪಾಲ್ಗೊಂಡು ಸಂಭ್ರಮಿಸುತ್ತಿದ್ದಾರೆ. ಕಾಫಿನಾಡಲ್ಲಿ ಇಂತಹ ಕ್ರೀಡೆಗಳು ನಡೆದದ್ದು ಇದೇ ಮೊದಲಾದ್ದರಿಂದ ದಿನಂಪ್ರತಿ ಸಾವಿರಾರು ಜನ ಪಾಲ್ಗೊಂಡು ಖುಷಿಪಡುತ್ತಿದ್ದಾರೆ. ಚಿಕ್ಕಮಗಳೂರು ಫೆಸ್ಟ್ ಅಂಗವಾಗಿ ನಡೆಯುತ್ತಿರುವ ಕುಸ್ತಿಯ ಅಖಾಡವೂ ರಂಗೇರಿತ್ತು. ಮಣ್ಣಲ್ಲಿ ಮಿಂದೆದ್ದ ಜಗಜಟ್ಟಿಗಳು ಅಖಾಡದಲ್ಲಿ ಧೂಳ್ ಎಬ್ಬಿಸಿದ್ದರು.